Menu

Home ನಲಿಕಲಿ About ☰ Menu


 

🔍

ಗಣರಾಜ್ಯೋತ್ಸವ ದಿನಾಚರಣೆ ಜನವರಿ 26

 ಗಣರಾಜ್ಯೋತ್ಸವ ದಿನ / REPUBLIC DAY


              ನಮ್ಮ ದೇಶದ ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುತ್ತದೆ. ಭಾರತದ ದೇಶದ ಸಂವಿಧಾನ 1950ರ ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬಂದಿತು ಆ ದಿನವೇ ಗಣರಾಜ್ಯೋತ್ಸವ / ಗಣತಂತ್ರ ದಿನ / ಪ್ರಜಾರಾಜ್ಯೋತ್ಸವ. 2024 ನೇ ವರುಷದ ಆಚರಣೆ 75ನೇ ಗಣರಾಜ್ಯೋತ್ಸವವಾಗಿದೆ.

ಗಣರಾಜ್ಯೋತ್ಸವದ ಇತಿಹಾಸ:
             1947 ರ ಆಗಸ್ಟ್ 15 ರಂದು ನಾವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ , ನಮ್ಮ ದೇಶವು ಒಂದು ಘನ ಸಂವಿಧಾನದ ಕೊರತೆಯನ್ನು ಹೊಂದಿತ್ತು. ಇದಲ್ಲದೆ, ರಾಜ್ಯದ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುವ ಯಾವುದೇ ಪರಿಣಿತ ಮತ್ತು ರಾಜಕೀಯ ಅಧಿಕಾರವನ್ನು ಭಾರತ ಹೊಂದಿರಲಿಲ್ಲ. ಆ ಹೊತ್ತಿಗೆ, 1935 ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆಡಳಿತಕ್ಕೆ ತಿದ್ದುಪಡಿ ಮಾಡಲ್ಪಟ್ಟಿತು, ಆದಾಗ್ಯೂ, ಕಾಯಿದೆಯು ವಸಾಹತುಶಾಹಿ ಆಳ್ವಿಕೆಯ ಕಡೆಗೆ ಹೆಚ್ಚು ವಾಲಿತು. ಆದ್ದರಿಂದ, ಭಾರತಕ್ಕೆ  ವಿಶೇಷ ಸಂವಿಧಾನವನ್ನು ರಚಿಸುವ ಅಗತ್ಯವಿತ್ತು.
      ಸಂವಿಧಾನ ರಚನಾ ಸಭೆಯ ಮೊದಲ ಸಭೆ 1946 ಡಿಸೆಂಬರ್ 9 ರಂದು ನಡೆಯಿತು, ಸಚ್ಚಿದಾನಂದ ಸಿನ್ಹಾ ಅದರ ಹಂಗಾಮಿ ಅಧ್ಯಕ್ಷರಾದರು ನಂತರ ಅದೆ  ಡಿಸೆಂಬರ್ 11ರಂದು ಡಾ||ಬಾಬು ರಾಜೇಂದ್ರ ಪ್ರಸಾದರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
               ಆಗಸ್ಟ್ 29, 1947 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಅಧ್ಯಕ್ಷತೆಯಲ್ಲಿ 6 ಸದಸ್ಯರನ್ನು ಒಳಗೊಂಡ ಕರುಡು ಸಮಿತಿ ರಚಿಸಲಾಯಿತು.  ಸಂವಿಧಾನ ರಚನೆಗೆ ಒಟ್ಟು  22  ಸಮಿತಿಗಳನ್ನು ರಚಿಸಲಾಯಿತು. ಸಂವಿಧಾನ ರಚನಾಸಭೆಯು 11 ಅಧಿವೇಶನಗಳನ್ನು ನಡೆಸಿತು.
              ಸಂವಿಧಾನ ರಚನೆಗೆ ತೆಗೆದುಕೊಂಡು ಅವಧಿ 2 ವರ್ಷ, 11 ತಿಂಗಳು 18 ದಿನಗಳು, ಅಂತಿಮವಾಗಿ ಸಂವಿಧಾನವು  1949 ನವೆಂಬರ್ 26 ರಂದು ಅಂಗಿಕರಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ರಚನಾಸಭೆಯ 199 ಸದಸ್ಯರಲ್ಲಿ 184 ಜನ ಹಾಜರಿದ್ದು ಸಹಿ ಹಾಕಿದರು. ಆದರೆ 1950  ಜನವರಿ 26 ರಂದು ಅಧಿಕೃತವಾಗಿ ಭಾರತೀಯ ಸಂವಿಧಾನದ ಜಾರಿಗೆ ಬಂದಿತು(ಕಾರಣ - ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ 1929ರ ಲಾಹೋರ್ ಅಧಿವೇಶನದಲ್ಲಿ ಮುಂದಿನ ವರ್ಷ ಅಂದರೆ 1930 ಜನವರಿ 26 ರಂದು ರಾಶಿ ನದಿಯ ದಂಡೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪೂರ್ಣ ಸ್ವರಾಜ್ಯ ದಿನ ಆಚರಿಸಲಾಯಿತು, ಅದರ ನೆನಪಿಗಾಗಿ ಜನವರಿ 26ರಂದು ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು )

ಅತಿದೊಡ್ಡ ಸಂವಿಧಾನ:
            ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.
                  ಮೂಲ ಸಂವಿಧಾನ | ಪ್ರಸ್ತುತ ಸಂವಿಧಾನ
ವಿಧಿಗಳು -             395          -          470
ಭಾಗಗಳು -             22          -            25
ಅನುಚ್ಛೇದಗಳು -    08             -           12
ಇಲ್ಲಿಯವರೆಗೆ 106(ಸೆಪ್ಟೆಂಬರ್ 2023ಕ್ಕೆ ಇದ್ದಂತೆ) ತಿದ್ದುಪಡಿಗಳ ಹೊಂದಿರುವ ಈ ಸಂವಿಧಾನವು ಆಂಗ್ಲ ಭಾಷೆಯ ಆವೃತ್ತಿಯು1,17,369 ಶಬ್ಧಗಳನ್ನು ಹೊಂದಿದೆ.  ಸಂವಿಧಾನದ ಪ್ರತಿ ಇಂಗ್ಲೀಷ್​ ಮತ್ತು ಹಿಂದಿ ಭಾಷೆಯಲ್ಲಿ ಮುದ್ರಣ ಮಾಡಲಾಗಿತ್ತು.

ಗಣರಾಜ್ಯೋತ್ಸವದ ಮಹತ್ವ:
             ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಪಡೆದ ಬಳಿಕ 1950ರಲ್ಲಿ ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದ ಸ್ಥಾಪನೆಯಾಯಿತು. ಪ್ರಜೆಗಳ ಅಸ್ಥತ್ವಕ್ಕೆ ನೀಡಿದ ಗೌರವದ ದಿನವಾಗಿತ್ತು. ಈ ಮೂಲಕ ಭಾರತದ ಸಂವಿಧಾನವು ಪ್ರಜೆಗಳಿಗೆ ತಮ್ಮದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವನ್ನು ನೀಡಿದೆ. ಡಾ|| ಬಾಬು ರಾಜೇಂದ್ರ ಪ್ರಸಾದ್ ಅವರು ಸರ್ಕಾರಿ ಭವನದಲ್ಲಿರುವ ದರ್ಬಾರ್ ಹಾಲ್‌ನಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿ ವರ್ಷ ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ.

ದೆಹಲಿಯಲ್ಲಿ ಪ್ರಮುಖ ಆಚರಣೆ:
            ಗಣರಾಜೋತ್ಸವವನ್ನು ದೆಹಲಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹಿಂದನ ದಿನ ಸಂಜೆ ರಾಷ್ಟ್ರಪತಿಯವರ ದೇಶಕ್ಕೆ ಸಂದೇಶ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಣೆ ಪ್ರಕ್ರಿಯೆ ಆರಂಭವಾಗುತ್ತದೆ. ಮೊದಲಿಗೆ ರಾಷ್ಟ್ರದ ಪ್ರಧಾನಮಂತ್ರಿ ಹಾಗೂ ಇತರ ಗಣ್ಯರಿಂದ ದೇಶಕ್ಕೆ ತ್ಯಾಗ, ಬಲಿದಾನದ ಸಂಕೇತವಾದ ಅಮರ ಜವಾನ್ ಜ್ಯೋತಿಯಲ್ಲಿ ಪುಷ್ಪನಮನ ಸಲ್ಲಿಸುತ್ತಾರೆ. ಈ ದಿನ ದೆಹಲಿಯ  ಜನಪಥ್​​ನಿಂದ ಇಂಡಿಯಾ ಗೇಟ್​ವರೆಗೆ ಅದ್ದೂರಿ ಮೆರವಣಿಗೆ ಕಣ್ಣು ಸೆಳೆಯುತ್ತದೆ. ಭದ್ರತಾ ಪಡೆ ಮತ್ತು 14 ಕುದುರೆಗಳಿಂದ ಅಲಂಕರಿಸಲ್ಪಟ್ಟ ಗಾಡಿಯಲ್ಲಿ ಇಂಡಿಯಾ ಗೇಟ್‌ಕಡೆ ಆಗಮಿಸುವ ರಾಷ್ಟ್ರಪತಿಗಳನ್ನು ಪ್ರಧಾನಿ ಸ್ವಾಗತಿಸುತ್ತಾರೆ. ಬಳಿಕ ರಾಷ್ಟ್ರಧ್ವಜವನ್ನು ರಾಷ್ಟ್ರಪತಿಗಳು ಹಾರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಜಾನಪದ ನೃತ್ಯವನ್ನು ಪ್ರಸ್ತುತಪಡಿಸುತ್ತದೆ. ಜತೆಗೆ 21 ತೋಪಿನ ಸೆಲ್ಯೂಟ್ ನೀಡಿ ರಾಷ್ಟ್ರಕ್ಕೆ, ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗುತ್ತದೆ.
        ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ್ದು 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳ ವಿಭಿನ್ನ ಸಂಸ್ಕೃತಿ, ಭೌಗೋಳಿಕ, ಸಾಮಾಜಿಕ ವ್ಯವಸ್ಥೆ ಹೊಂದಿದ್ದು ಇಂತಹ ವೈವಿಧ್ಯತೆಯನ್ನು ಜಗತ್ತಿಗೆ ತೋರಿಸುವ ಸಂದರ್ಭವೇ ಗಣರಾಜ್ಯೋತ್ಸವ ಪರೇಡ್, ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ...

ಗಣರಾಜ್ಯ ಎಂದರೇನು?
       ಒಂದು ದೇಶದ ಮುಖ್ಯಸ್ಥನು ಜನರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣೆ ಮೂಲಕ ನಿರ್ದಿಷ್ಟ ಅವಧಿಗೆ ಆಯ್ಕೆಯಾದರೆ ಅದು ಗಣರಾಜ್ಯ.
[ಭಾರತ ದೇಶದ ಮುಖ್ಯಸ್ಥ - ರಾಷ್ಟ್ರಪತಿ, ಪರೋಕ್ಷ(ಲೋಕಸಭೆ, ರಾಜ್ಯಸಭೆ, ಎಲ್ಲಾ ರಾಜ್ಯಗಳ ವಿಧಾನಸಭೆ & ದೆಹಲಿ, ಪಾಂಡಿಚೇರಿ ವಿಧಾನಸಭೆಗಳ ಚುನಾಯಿತ ಸದಸ್ಯರು) ಚುನಾವಣೆ ಮೂಲಕ 5 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ]

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post