Search This Blog

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-15: ವ್ಯವಹಾರ - ಅರ್ಥ ಮತ್ತು ಪ್ರಾಮುಖ್ಯತೆ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 14 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ"ವ್ಯವಹಾರ - ಅರ್ಥ ಮತ್ತು ಪ್ರಾಮುಖ್ಯತೆ " ಅಧ್ಯಾಯದ ಪ್ರಮುಖ 20 ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲು ನೀವೇ ಉತ್ತರಿಸಲು ಪ್ರಯತ್ನಿಸಿ, ನಂತರ ಕೆಳಗೆ ನೀಡಿರುವ ಉತ್ತರಗಳೊಂದಿಗೆ ಪರಿಶೀಲಿಸಿಕೊಳ್ಳಿ. 

ಮುಂದಿನ ಎಲ್ಲ ಅಧ್ಯಾಯಗಳ ಪ್ರಶ್ನೋತ್ತರಗಳನ್ನು ಪಡೆಯಲು ನಮ್ಮ ಬ್ಲಾಗ್ ಫಾಲೋ ಮಾಡಿ ಹಾಗೂ ಇದನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.


15. ವ್ಯವಹಾರ - ಅರ್ಥ ಮತ್ತು ಪ್ರಾಮುಖ್ಯತೆ  - 20 ಬಹು ಆಯ್ಕೆ ಪ್ರಶ್ನೋತ್ತರಗಳು

1) ವ್ಯವಹಾರದ ಮುಖ್ಯ ಉದ್ದೇಶ ಏನಾಗಿರಬೇಕು?
A) ಸೇವೆ ಮಾಡುವುದು        B) ಲಾಭ ಗಳಿಸುವುದು
C) ನಷ್ಟ ಅನುಭವಿಸುವುದು      D) ದಾನ ಮಾಡುವುದು

2) ಉತ್ಪಾದಕರು ಮತ್ತು ಗ್ರಾಹಕರ ನಡುವೆ ಕೊಂಡಿಯಾಗಿ ವರ್ತಿಸುವವರು ಯಾರು?
A) ಬ್ಯಾಂಕುಗಳು            B) ಸರ್ಕಾರ
C) ವ್ಯಾಪಾರಿಗಳು           D) ರೈತರು

3) ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವವರನ್ನು ಏನೆಂದು ಕರೆಯುತ್ತಾರೆ?
A) ಸಗಟು ವ್ಯಾಪಾರಿಗಳು       
B) ಚಿಲ್ಲರೆ ವ್ಯಾಪಾರಿಗಳು (Retailers)
C) ಆಮದುದಾರರು          
D) ರಫ್ತುದಾರರು

4) ಉತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಕೊಂಡು, ಚಿಲ್ಲರೆ ವ್ಯಾಪಾರಿಗಳಿಗೆ ಮಾರುವವರು ಯಾರು?
A) ಚಿಲ್ಲರೆ ವ್ಯಾಪಾರಿಗಳು       
B) ಸಗಟು ವ್ಯಾಪಾರಿಗಳು (Wholesalers)
C) ಗ್ರಾಹಕರು              
D) ಮಧ್ಯವರ್ತಿಗಳು
5) ಬೇರೆ ದೇಶಗಳಿಂದ ಸರಕುಗಳನ್ನು ಕೊಂಡುಕೊಳ್ಳುವುದನ್ನು ಏನೆಂದು ಕರೆಯುತ್ತಾರೆ?
A) ರಫ್ಟು (Export)         
B) ಆಮದು (Import)
C) ಪುನರ್ ರಫ್ತು            
D) ಒಳನಾಡು ವ್ಯಾಪಾರ
6) ಒಂದು ದೇಶವು ಸರಕುಗಳನ್ನು ಬೇರೆ ದೇಶಕ್ಕೆ ಮಾರಾಟ ಮಾಡುವುದನ್ನು ಏನೆಂದು ಕರೆಯುತ್ತಾರೆ?
A) ಆಮದು               B) ರಫ್ಟು (Export)
C) ಶೇಖರಣೆ              D) ಉತ್ಪಾದನೆ
7) ಕಚ್ಚಾ ವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುವುದನ್ನು ಏನೆಂದು ಕರೆಯುತ್ತಾರೆ?
A) ವಾಣಿಜ್ಯ               B) ಕೈಗಾರಿಕೆ (Industry)
C) ವ್ಯಾಪಾರ              D) ಸಾರಿಗೆ
8) ಮನೆಯಲ್ಲಿಯೇ ಅಥವಾ ಸಣ್ಣ ಜಾಗದಲ್ಲಿ ಕಡಿಮೆ ಬಂಡವಾಳದಿಂದ ನಡೆಸುವ ಕೈಗಾರಿಕೆ ಯಾವುದು?
A) ಗುಡಿ ಕೈಗಾರಿಕೆ (Cottage Industry) 
B) ಬೃಹತ್ ಕೈಗಾರಿಕೆ
C) ವಿದೇಶಿ ಕೈಗಾರಿಕೆ          
D) ಯಾವುದು ಅಲ್ಲ
9) ಪುನರ್ ರಫ್ತು (Entrepot) ವ್ಯಾಪಾರಕ್ಕೆ ಉತ್ತಮ ಉದಾಹರಣೆ ಯಾವುದು?
A) ಭಾರತ               
B) ಸಿಂಗಾಪುರ
C) ನೇಪಾಳ               
D) ಭೂತಾನ್
10) ತಲೆಯ ಮೇಲೆ ಸರಕುಗಳನ್ನು ಹೊತ್ತು ಮಾರಾಟ ಮಾಡುವವರನ್ನು ಏನೆಂದು ಕರೆಯುತ್ತಾರೆ?
A) ಬೀದಿ ವ್ಯಾಪಾರಿಗಳು        
B) ಹಕ್ಕರ್ಸ್ (Hawkers)
C) ಪೆಡ್ಲರ್ಸ್ (Peddlers)      
D) ಸಗಟು ವ್ಯಾಪಾರಿಗಳು
11) ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಇರುವ ತೊಂದರೆಯನ್ನು (ಸ್ಥಳದ ಅಡಚಣೆ) ನಿವಾರಿಸುವುದು ಯಾವುದು?
A) ವಿಮೆ                             B) ಬ್ಯಾಂಕಿಂಗ್
C) ಸಾರಿಗೆ (Transport)    D) ದಾಸ್ತಾನು ಮಳಿಗೆ
12) ಸರಕುಗಳ ನಾಶ, ಬೆಂಕಿ ಅನಾಹುತ ಮುಂತಾದ ನಷ್ಟ ಭಯವನ್ನು (Risk) ನಿವಾರಿಸುವುದು ಯಾವುದು?
A) ಸಾರಿಗೆ                       B) ವಿಮೆ (Insurance)
C) ಗೋದಾಮುಗಳು         D) ಜಾಹೀರಾತು
13) 'ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್' (BIS) ಸಂಸ್ಥೆಯ ಮುಖ್ಯ ಕೆಲಸವೇನು?
A) ಸಾಲ ನೀಡುವುದು        
B) ಸರಕುಗಳ ಗುಣಮಟ್ಟ ಕಾಪಾಡುವುದು
C) ರಫ್ತು ಮಾಡುವುದು        
D) ವಿಮೆ ಮಾಡುವುದು
14) ಸಂತೆಯಲ್ಲಿ ವ್ಯಾಪಾರ ಮಾಡುವವರು ಯಾವ ಬಗೆಯ ವ್ಯಾಪಾರಿಗಳು?
A) ಖಾಯಂ ಅಂಗಡಿ ವ್ಯಾಪಾರಿಗಳು 
B) ಸಂಚಾರಿ ವ್ಯಾಪಾರಿಗಳು
C) ಸಗಟು ವ್ಯಾಪಾರಿಗಳು       
D) ವಿದೇಶಿ ವ್ಯಾಪಾರಿಗಳು
15) ಕುಂಬಾರಿಕೆ, ಬಡಗಿ ಕೆಲಸ, ಬುಟ್ಟಿ ಹೆಣೆಯುವುದು ಇವು ಯಾವ ಕೈಗಾರಿಕೆಗೆ ಉದಾಹರಣೆ?
A) ಸಣ್ಣ ಪ್ರಮಾಣದ ಕೈಗಾರಿಕೆ     
B) ಗುಡಿ ಕೈಗಾರಿಕೆ
C) ಬೃಹತ್ ಕೈಗಾರಿಕೆ                  
D) ರಾಸಾಯನಿಕ ಕೈಗಾರಿಕೆ
16) ಲಾಭ ಗಳಿಸುವುದಕ್ಕಾಗಿ ವ್ಯಾಪಾರಿಗಳು ಮಾಡುವ ಸಮಾಜ ವಿರೋಧಿ ಕೃತ್ಯ ಯಾವುದು?
A) ಗುಣಮಟ್ಟದ ಸರಕು ಮಾರಾಟ  
B) ಕಲಬೆರಕೆ (Adulteration)
C) ರಿಯಾಯಿತಿ ನೀಡುವುದು     
D) ಜಾಹೀರಾತು ನೀಡುವುದು
17) ವ್ಯಾಪಾರದಲ್ಲಿ ಹಣದ ಅವಶ್ಯಕತೆಯನ್ನು ಪೂರೈಸುವುದು ಯಾವುದು?
A) ವಿಮೆ                B) ಬ್ಯಾಂಕಿಂಗ್ (Finance)
C) ಸಾರಿಗೆ               D) ಗೋದಾಮು
18) ಗ್ರಾಹಕರ ಹಿತರಕ್ಷಣೆಗಾಗಿ ಜಾರಿಗೆ ಬಂದಿರುವ ಕಾಯ್ದೆ ಯಾವುದು?
A) ಪೌರತ್ವ ಕಾಯ್ದೆ           B) ಗ್ರಾಹಕ ಸಂರಕ್ಷಣಾ ಕಾಯ್ದೆ
C) ಶಿಕ್ಷಣ ಹಕ್ಕು ಕಾಯ್ದೆ     D) ಮಾಹಿತಿ ಹಕ್ಕು ಕಾಯ್ದೆ
19) ಸಮಯದ ಅಡಚಣೆಯನ್ನು (Hindrance of Time) ನಿವಾರಿಸಲು ಎಲ್ಲಿ ಸರಕುಗಳನ್ನು ಶೇಖರಿಸಿಡುತ್ತಾರೆ?
A) ದಾಸ್ತಾನು ಮಳಿಗೆಗಳು (Warehouses) 
B) ಬ್ಯಾಂಕ್
C) ಅಂಚೆ ಕಚೇರಿ           
D) ಶಾಲೆ
20) ಸರಕುಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರುವವರನ್ನು ಏನೆಂದು ಕರೆಯುತ್ತಾರೆ?
A) ಪೆಡ್ಲರ್ಸ್                        B) ಹಕ್ಕರ್ಸ್
C) ಬೀದಿ ವ್ಯಾಪಾರಿಗಳು        D) ಸಗಟು ವ್ಯಾಪಾರಿಗಳು


ಇಲ್ಲಿಗೆ ನಿಮ್ಮ ಅಭ್ಯಾಸ ಮುಗಿಯಿತು, ಉತ್ತರಗಳನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ.


ಕೀ ಉತ್ತರಗಳು (Key Answers)

1-B | 2-C | 3-B | 4-B  | 5-B |

6-B | 7-B | 8-A | 9-B  | 10-B |

11-C | 12-B  | 13-B | 14-B | 15-B |

16-B | 17-B, | 18-B | 19-A | 20-C |

ಮುಂದಿನ ಅಧ್ಯಾಯ: ಅಧ್ಯಾಯ 9 ಕ್ಕೆ ಇಲ್ಲಿ ಕ್ಲಿಕ್ ಮಾಡಿ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.