Menu

Home ನಲಿಕಲಿ About ☰ Menu


 

NMMS ಪರೀಕ್ಷೆಗೆ ಅರ್ಜಿ ಆಹ್ವಾನ 2022-23

 

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 29.09.2022

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 21.11.2022

ಪರೀಕ್ಷೆ ನಡೆಯುವ ದಿನಾಂಕ : 18.12.2022

@ಅರ್ಜಿ ಸಲ್ಲಿಸುವ ವಿಧಾನ@

ಅರ್ಜಿ ಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

ಸ್ವತಃ ಶಾಲೆಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು https://sslc.karnataka.gov.in/ ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ U-DISE  Code ಅನ್ನು User Name ಆಗಿ ಬಳಸಿ LOGIN ಆಗುವುದು ಕಡ್ಡಾಯವಾಗಿರುತ್ತದೆ,  ನಂತರ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Menu Click ಮಾಡುವುದು, ಆಗ ಅರ್ಜಿ ನಮೂನೆ Open ಆಗುತ್ತದೆ.

# ಈ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Step by Step ಸಂಪೂರ್ಣ ಮಾಹಿತಿಯ ವಿಡಿಯೋ.


ಮಂಡಳಿ ವತಿಯಿಂದ Default Password ನೀಡಲಾಗಿದ್ದು, ಮೊದಲ ಬಾರಿ Login ಆಗುವಾಗ Password ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ.

*ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ*(https://kseeb.karnataka.gov.in/NTSENMMS/views/loginpage.aspx)

ಅರ್ಜಿ ಸಲ್ಲಿಸುವಾಗ ತಾಂತ್ರಿಕ ಅಡಚಣೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ - ಕಛೇರಿ ಕರ್ತವ್ಯದ ಸಮಯದಲ್ಲಿ ದೂರವಾಣಿ ಸಂಖ್ಯೆ :080-23341615 ಕರೆ ಮಾಡುವುದು.

ಶಾಲೆಯ ಫೋನ್ ನಂಬರ್ change ಮಾಡುವುದಿದ್ದರೆ change ಆದ mobile number ಹೊಂದಿರುವ ಮುಖ್ಯ ಶಿಕ್ಷಕರ ದೃಢೀಕರಣ ಮಾಡಿರುವ ಪತ್ರವನ್ನು scan ಮಾಡಿ ಈ ಕೆಳಗಿನ ಮೇಲ್ ID ಗೆ MAIL ಹಾಕುವುದು.ksqaacntsenmms@gmail.com 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ school login ನಲ್ಲಿ challan generate ಆಗುತ್ತವೆ.

@NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು.

ಪೋಷಕರ ವಾರ್ಷಿಕ ವರಮಾನ ಮಿತಿ ರೂ 3,50,000/-

7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ.55 ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

ಪಂ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳು ಶೇ.50 ರಷ್ಟು ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

@NMMS ಪರೀಕ್ಷೆಯ ಶುಲ್ಕದ ವಿವರ@

ಸಾಮಾನ್ಯ, ಇತರೆ ಹಿಂದುಳಿದ ವರ್ಗ( ಆರ್ಥಿಕವಾಗಿ ಹಿಂದುಳಿದವರು) ರೂ.20-00

★ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ.10-00

 @ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

*NMMS ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು

ಸದರಿ ಪರೀಕ್ಷೆಯು ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ, ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುವಂತಹ ಪರೀಕ್ಷೆಯಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತದೆ.

*ಪತ್ರಿಕೆ 1-

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (MAT) 90 ನಿಮಿಷ, 90 ಪ್ರಶ್ನೆ, 90 ಅಂಕ.

*ಪತ್ರಿಕೆ 2-

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) 90 ನಿಮಿಷ, 90 ಪ್ರಶ್ನೆ, 90 ಅಂಕ.

ಸೂಚನೆ:- ವಿಕಲಚೇತನ ಮಕ್ಕಳಿಗೆ 30ನಿಮಿಷ ಹೆಚ್ಚುವರಿ ಸಮಯವಿರುತ್ತದೆ.

ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಪ್ರತಿವರ್ಷ ₹12000/- ದಂತೆ 9ನೇ ತರಗತಿಯಿಂದ 12ನೇ ತರಗತಿ ವರೆಗೆ ಅಂದರೆ ನಾಲ್ಕು ವರ್ಷ ಶಿಷ್ಯವೇತನ ನೀಡಲಾಗುತ್ತದೆ.

Click Below ಲಿಂಕ್ & Download Circular




*NMMS ನ MAT & SAT ಸಂಪೂರ್ಣ ಅಧ್ಯಯನ ವಸ್ತು/Study Material


ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ - ಅಭಿಯಂತರ ದಿನ


           
ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಕಾರಣಕರ್ತರೂ ಹೌದು.

“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾದರು. ಜಗತ್ಪ್ರಸಿದ್ಧರಾದರು.

ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು.

೧೯೦೮ರಲ್ಲಿ ಅತ್ಯಂತ ಕೆಟ್ಟ ಪ್ರವಾಹ ಏರಿ ಬಂದು, ಹೈದರಾಬಾದಿಗೆ ಎಲ್ಲಿಲ್ಲದ ಹಾನಿಯಾಯಿತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯ ಅವರಿಗೆ ಹೈದರಾಬಾದಿನ ನಿಜಾಮರಿಂದ ತುರ್ತು ಕರೆ ಹೋಯಿತು. ತಮ್ಮ ವಿದೇಶ ಯಾತ್ರೆಯನ್ನು ಪೂರ್ಣಗೊಳಿಸದೆಯೇ ಹಿಂದಿರುಗಿ ಬಂದ ವಿಶ್ವೇಶ್ವರಯ್ಯ ಅವರು, ಅಂದಿನ ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಲು ಯೋಜನೆಗಳನ್ನು ತಯಾರಿಸಿಕೊಟ್ಟರು. ಅಂದಿನ ಹೈದರಾಬಾದ್ ನಗರದಿಂದ ಹದಿನಾರು ಮೈಲಿಗಳಾಚೆಗೆ ಓಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾದರು. ನಗರದ ಒಳಚರಂಡಿ, ನೀರ್ಗಾಲುವೆಗಳ ವ್ಯವಸ್ಥೆಯನ್ನೂ ನಿರೂಪಿಸಿದರು. ಒಂದು ಕಾಲಕ್ಕೆ ಅಬ್ಬರಿಸಿ ಹರಿದ ಮುಸಿಯನ್ನು ಪಳಗಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಕಾರಣರಾದರು.

ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು.

ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಅದೆಷ್ಟೋ ಕತೆಗಳಿದ್ದವು. ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.

ವಿಶ್ವೇಶ್ವರಯ್ಯನವರು ೧೮೬೧ ಸೆಪ್ಟೆಂಬರ್ ೧೫ ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷಮ್ಮನವರು. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ವಿಶ್ವೇಶ್ವರಯ್ಯ ಅವರಿಗೆ ಹದಿನೈದು ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ದಟ್ಟ ದಾರಿದ್ರ್ಯದ ಬದುಕು. ತಲೆ ಬೋಳಿಸಿಕೊಂಡು ಕೆಂಪು ಸೀರೆಯುಟ್ಟು ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ ಎಚ್ ರಾಮಯ್ಯನವರ ಸಹಾಯದಿಂದ ೧೮೭೫ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು.

ಒಮ್ಮೆಯಂತೂ ಎಸ್ ಎಸ್. ಎಲ್. ಸಿ ಪರೀಕ್ಷೆಗೆ ಕೂರಲು ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ ೩೫ ಕಿಲೋಮೀಟರ್ ನಡೆದುಕೊಂಡೇ ಹೋದರು. ಮನೆಯ ಪಾತ್ರೆ ಅಡವಿಟ್ಟು ಆ ತಾಯಿ ಹಣ ಹೊಂದಿಸಿಕೊಟ್ಟಿದ್ದರು. ಆದರೆ ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು. ಭವಿಷ್ಯದ ದೃಢ ಸಂಕಲ್ಪಗಳಿದ್ದವು. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಓದತೊಡಗಿದರು. ಆ ಕಾಲದಲ್ಲಿ ಬಿ.ಎ ತರಗತಿಗಳಲ್ಲಿಯೇ ವಿಜ್ಞಾನದ ವಿಷಯವನ್ನೂ ಹೇಳಿಕೊಡುತ್ತಿದ್ದರು. ಬದುಕು ಸುಲಭವಿರಲಿಲ್ಲ. ಅನಾನುಕೂಲತೆಗಳ ನಡುವೆಯೇ ಮುಂದುವರೆದ ವಿದ್ಯಾಭ್ಯಾಸ. ದೈನಂದಿಕ ಖರ್ಚಿಗೆ ಹಣವಿಲ್ಲದೆ, ಒಂದು ಕೂರ್ಗಿ ಕುಟುಂಬದಲ್ಲಿ ಪಾಠ ಹೇಳಿಕೊಟ್ಟು ಹಣ ಹೊಂದಿಸಿದರು.

೧೮೮೦ರಲ್ಲಿ ಡಿಸ್ಟಿಂಕ್ಷನ್ ಪಡೆದು ಬಿ.ಎ. ಪಾಸು ಮಾಡಿದ ವಿಶ್ವೇಶ್ವರಯ್ಯನವರಿಗೆ ಪುಣೆಯಲ್ಲಿ ಇಂಜಿನಿಯರಿಂಗ್ ಓದಲು ವಿದ್ಯಾರ್ಥಿವೇತನ ಲಭಿಸಿತು. ಮೈಸೂರು ಸಂಸ್ಥಾನದಲ್ಲಿ ಇಂಜಿನಿಯರಿಂಗ್ ಕಾಲೇಜಿರಲಿಲ್ಲ. ೧೮೮೧ರಲ್ಲಿ ಇಂಜಿನಿಯರಿಂಗ್ ಸೇರಿದ ವಿಶ್ವೇಶ್ವರಯ್ಯ ಮೂರು ವರ್ಷದ ಕೋರ್ಸನ್ನು ಎರಡೂವರೆ ವರ್ಷಕ್ಕೆ ಮುಗಿಸಿದರು. ಪರೀಕ್ಷೆಯಲ್ಲಿ ಅವರ ಮೇಧಾವಿತನ ಪ್ರಜ್ವಲಿಸಿತು. ಜೇಮ್ಸ್ ಬರ್ಕ್ಲಿ ಬಹುಮಾನ ದೊರೆತುದಲ್ಲದೆ, ಬಾಂಬೆ ಪಿ.ಡಬ್ಲ್ಯೂ.ಡಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿ ದೊರೆಯಿತು. ಅಲ್ಲಿಂದ ಪುಣೆಗೆ ವರ್ಗವಾಯಿತು.

ಪುಣೆಯಲ್ಲಿ ವಿಶ್ವೇಶ್ವರಯ್ಯನವರ ಅನೇಕ ಅನ್ವೇಷಣೆಗಳು ಅವರ ಮೇಧಾವಿತನವನ್ನು ಎತ್ತಿ ತೋರಿದವು. ವಿಶ್ವೇಶ್ವರಯ್ಯ ಅಟೋಮ್ಯಾಟಿಕ್ ಸ್ಲೂಸ್ ಗೇಟ್ ಕಂಡು ಹಿಡಿದರು. ಪುಣೆ ನಗರಕ್ಕೆ ಒಂದು ಸರೋವರದಿಂದ ನೀರಿನ ಪೂರೈಕೆಯಾಗುತ್ತಿತ್ತು. ಸರೋವರ ಕೆಲವು ತಿಂಗಳು ಉಕ್ಕಿ ಹರಿಯುತ್ತಿತ್ತು. ಕೆಲವು ತಿಂಗಳಲ್ಲಿ ಬತ್ತಿ ಇಳಿಯುತ್ತಿತ್ತು. ವಿಶ್ವೇಶ್ವರಯ್ಯನವರು ಸರೋವರದ ಅಡ್ಡಕಟ್ಟೆಯ ಮೇಲೆ ಸ್ವಯಂಚಾಲಿತ ಜಾರು ಬಾಗಿಲುಗಳನ್ನು ವಿನ್ಯಾಸ ಮಾಡಿ ನೆಟ್ಟರು. ನೀರು ಪ್ರವಾಹದ ಮಟ್ಟ ಮುಟ್ಟಿದಾಗ ಜಾರು ಬಾಗಿಲುಗಳು ಸ್ವಯಂಚಾಲಿತವಾಗಿ ತೆರದು ಹೆಚ್ಚುವರಿ ನೀರನ್ನು ಹೊರಹೋಗಲು ಬಿಡುತ್ತಿದ್ದವು. ಅದೇ ನೀರಿನ ಮಟ್ಟ ಕಡಿಮೆ ಇದ್ದಾಗ, ಈ ದ್ವಾರಗಳು ಮುಚ್ಚಿಕೊಂಡು ನೀರನ್ನು ಹಿಡಿದಿಡುತ್ತಿದ್ದವು. ವಿಶ್ವೇಶ್ವರಯ್ಯ ತಮ್ಮ ಈ ಆವಿಷ್ಕಾರಕ್ಕೆ ಪೇಟೆಂಟ್ ಪಡೆದರು. ಆದರೆ ಆ ಪೇಟೆಂಟಿಗೆ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದರು. ಸರ್ಕಾರದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿದರು. ಈ ದ್ವಾರಗಳನ್ನು ಅವರು ೧೯೧೦ರಲ್ಲಿ ನೆಟ್ಟಿದ್ದರು. ನಲವತ್ತೈದು ವರ್ಷಗಳ ಅನಂತರ ಅವುಗಳನ್ನು ವಿಶ್ವೇಶ್ವರಯ್ಯ ನೋಡಿದಾಗಲೂ ಅವು ತ್ರಪ್ತಿಕರವಾಗಿ ಕೆಲಸ ಮಾಡುತ್ತಿದ್ದವು! ೧೯೦೪ರಲ್ಲಿ ಬಾಂಬೆ ಸರ್ಕಾರದ ಸ್ಯಾನಿಟರಿ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರು ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯರಾಗಿದ್ದರು.

೧೯೦೬ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ಯೆಮೆನ್ ದೇಶದ ಏಡನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ವಿಶ್ವೇಶ್ವರಯ್ಯನವರನ್ನು ಕಳುಹಿಸಲಾಯಿತು. ಬೆಟ್ಟಗಳಿಂದ ಸುತ್ತುವರೆದ ಏಡನ್ ನಗರದಲ್ಲಿ ಸುರಿದ ಮಳೆ, ಮರಳು ಭೂಮಿಯಲ್ಲಿ ಹಿಂಗಿ ಹೋಗುತ್ತಿತ್ತು. ವಿಶ್ವೇಶ್ವರಯ್ಯನವರು ಆ ಭೂಪ್ರದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರು. ದೂರದ ಗುಡ್ಡಗಾಡುಗಳಲ್ಲಿ ಬಿದ್ದ ಮಳೆ ಹರಿದು ಹಿಂಗುವ ಜಾಗ, ಏಡನ್ ನಗರದಿಂದ ೧೮ ಮೈಲಿಗಳ ದೂರದಲ್ಲಿತ್ತು. ಇಲ್ಲಿ ನೆಲದಾಳದಲ್ಲಿ ನೀರಿನ ಜಲಾಶಯವಿರುವುದನ್ನು ವಿಶ್ವೇಶ್ವರಯ್ಯನವರು ಗುರುತಿಸಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಯೋಜಿಸಿಕೊಟ್ಟರು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಏಡನ್ ನಗರ ಇಂದೂ ನೆನಪಿಟ್ಟುಕೊಂಡಿದೆ. ವಿಶ್ವೇಶ್ವರಯ್ಯನವರ ಈ ಅನುಪಮ ಸೇವೆಗೆ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್– ಎ-ಹಿಂದ್ ಬಿರುದು ನೀಡಿ ಗೌರವಿಸಿತು.
 

೧೯೦೮ರಲ್ಲಿ ತಮ್ಮ ಬಾಂಬೆ ಕೆಲಸಕ್ಕೆ ರಾಜೀನಾಮೆ ನೀಡಿದ ವಿಶ್ವೇಶ್ವರಯ್ಯನವರು ವಿದೇಶ ಪ್ರವಾಸಕ್ಕೆ ತೊಡಗಿದ್ದರು. ಆ ಸಂದರ್ಭದಲ್ಲಿ ಪ್ರವಾಹಗಳಿಂದ ದುಸ್ಥಿತಿಯಲ್ಲಿದ ಹೈದರಾಬಾದಿಗೆ ನೆರವಾಗಲು ಹೈದರಾಬಾದಿನ ನಿಜಾಮರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ವಿದೇಶ ಪ್ರವಾಸದಿಂದ ಅರ್ಧ ಹಾದಿಯಲ್ಲಿ ಹಿಂದಿರುಗಿ ಬಂದ ಅವರು, ೧೯೦೯ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆದರು. ಅದೇ ಸಂದರ್ಭದಲ್ಲಿ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರು ವಿಶ್ವೇಶ್ವರಯ್ಯ ಅವರಿಗೆ ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೋರಿಕೆ ಇಟ್ಟರು. ಮೈಸೂರಿನವರೇ ಆದ ಅವರ ಪ್ರತಿಭೆ, ಪ್ರಸಿದ್ಧಿ ಮಹಾರಾಜರನ್ನು ಪ್ರಭಾವಿಸಿತ್ತು. ಆದರೆ, ವಿಶ್ವೇಶ್ವರಯ್ಯ ಅವರಿಗೆ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ಇರಲಿಲ್ಲ. ಮೈಸೂರು ಸರ್ಕಾರಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದರು. ಮುಸಿ ನದಿಯ ಪ್ರವಾಹ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟ ವಿಶ್ವೇಶ್ವರಯ್ಯನವರು ಹೈದಾರಾಬಾದಿನಿಂದ ಬೀಳ್ಕೊಂಡು ಮಹಾರಾಜ ಕೃಷ್ಣರಾಜ ಒಡೆಯರ ಒತ್ತಾಯದ ಆಹ್ವಾನದ ಮೇಲೆ ಮೈಸೂರಿಗೆ ಬಂದರು.

ನವೆಂಬರ್ ೧೯೦೯ರಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಸೇರಿಕೊಂಡರು. ಸೇರಿದೊಡನೆ ಅವರಿಗೆ ಪಿ.ಡಬ್ಲ್ಯೂ.ಡಿ ಗೆ ಹೊಸದಾಗಿ ನೇಮಿಸಿಕೊಂಡ ಜನರ ಹೆಸರುಗಳ ಪಟ್ಟಿ ಕಳುಹಿಸಲಾಯಿತು. ಹೊಸದಾಗಿ ನೇಮಕಗೊಂಡ ಅವರ ಮುಖ್ಯ ಅರ್ಹತೆ ಎಂದರೆ, ಅವರೆಲ್ಲ ದೊಡ್ಡ ಅಧಿಕಾರಿಗಳ ಸಂಬಂಧಿಗಳಾಗಿದ್ದದ್ದು! ವಿಶ್ವೇಶ್ವರಯ್ಯ ಆ ಪಟ್ಟಿಯನ್ನು ನಿರಾಕರಿಸಿ, ಕೇವಲ ಪ್ರತಿಭೆ ಮತ್ತು ವಿದ್ಯಾರ್ಹತೆಯ ಮೇಲೆ ಮತ್ತೊಂದು ಪಟ್ಟಿ ಸಿದ್ಧ ಮಾಡಲು ಹೇಳಿದರು. ತಮಗೆ ಇಂತಹ ನಡೆಗಳಿಂದ ಬಂದ ತೊಂದರೆಗಳನ್ನು ಲೆಕ್ಕಿಸದೆ, ತಾವು ಹಿಡಿದ ಅಭಿವೃದ್ಧಿಯ ಹಾದಿಯಲ್ಲಿ ಮೈಸೂರನ್ನು ನಡೆಸಿದರು.

ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.

೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ

ಈ ವಿದ್ಯಾ ಸಮಿತಿಯ ಅಡಿಯಲ್ಲಿ ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಲಾಯಿತು.

೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು

ಹೀಗೆ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಪ್ರೇರಕಶಕ್ತಿ ಹಾಗೂ ಕಾರಣಕರ್ತರಾಗಿದ್ದಾರೆ.

ನಮ್ಮ ಎಲ್ಲ ಆರ್ಥಿಕ ರೋಗಗಳಿಗೂ ವಿದ್ಯಾಭ್ಯಾಸವೇ ಮದ್ದು ಎಂದು ವಿಶ್ವೇಶ್ವರಯ್ಯ ಬಲವಾಗಿ ನಂಬಿದ್ದರು.

ಕನ್ನಂಬಾಡಿ ಆಣೆಕಟ್ಟು ಮತ್ತು ವಿದ್ಯುಚ್ಚಕ್ತಿ ಯೋಜನೆಗಳನ್ನು ಪೂರೈಸಿದಂತಹ ಮಹತ್ವದ ಸಾಧನೆಗಳಿಗಾಗಿ ಬ್ರಿಟಿಷ್ ಸರ್ಕಾರ ಅವರನ್ನು ನೈಟ್ ಕಮಾಂಡರ್ ಆಗಿ ಅಲಂಕರಿಸಿ ಸರ್ ಪದವಿಯನ್ನು ನೀಡಿತು. ಆಡಳಿತದಲ್ಲಿ ದಕ್ಷರಾದ ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ಮೈಸೂರು ಸಂಸ್ಥಾನದ ಏಳನೆ ದಿವಾನರಾದರು. ದಿವಾನರಾಗುವ ಮೊದಲು ತನ್ನ ತಾಯಿಗೆ ನೀನು ಯಾರ ಶಿಫಾರಸ್ಸನ್ನೂ ನನ್ನಲ್ಲಿಗೆ ತರುವುದಿಲ್ಲ ಎಂದರೆ ಮಾತ್ರ ನಾನು ದಿವಾನ ಪದವಿಯನ್ನು ಒಪ್ಪಿಕೊಳ್ಳುವೆ ಎಂದು ಹೇಳಿದರಂತೆ! ವಿಶ್ವೇಶ್ವರಯ್ಯನವರು ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದರು.

ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯಗಳು, ಮೈಸೂರು ವಿಶ್ವವಿದ್ಯಾಲಯ, ವಿವಿಧರೀತಿಯ ಕೈಗಾರಿಕೆಗಳು, ಸಾರ್ವಜನಿಕ ಗ್ರಂಥಾಲಯಗಳು ಇವೆಲ್ಲಾ ವಿಶ್ವೇಶ್ವರಯ್ಯನವರ ಸಮಗ್ರ ಕೊಡುಗೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣ ಹಾಗೂ ಆ ಮೂಲಕ ಕನ್ನಡಿಗರ ಒಕ್ಕೂಟ, ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಕೂಡಾ ವಿಶ್ವೇಶ್ವರಯ್ಯನವರ ಬೆಂಬಲ ಪ್ರಮುಖವಾದದ್ದು.

ಭಾರತದ ಆರ್ಥಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಗಾಧವಾದದ್ದು. ೧೯೨೦ರಲ್ಲಿ Reconstructing India, ೧೯೩೪ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ೧೯೫೫ರಲ್ಲಿ ವಿಶ್ವೇಶ್ವರಯ್ಯ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರವನ್ನು ನೀಡಲಾಯಿತು. ಒಂದು ವಿಧದಲ್ಲಿ ಭಾರತರತ್ನಕ್ಕೆ ವಿಶ್ವೇಶ್ವರಯ್ಯನವರಿಂದ ಒಂದು ಮೌಲ್ಯ ಬಂತು ಎಂಬದು ಇಂದಿಗೂ ಸಾರ್ವಜನಿಕವಾದ ಅಭಿಪ್ರಾಯವಾಗಿದೆ ಎಂದರೆ ಸುಳ್ಳಲ್ಲ! ಅವರ ನೂರನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನೆಹರೂ ಅವರು ಬಂದರು.

ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು.

ಈ ಮಹಾನ್ ಪ್ರೇರಕ ಶಕ್ತಿ, ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.

(ಆಧಾರ: ನೇಮಿಚಂದ್ರ ಅವರ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕುರಿತಾದ ಲೇಖನ. ಉದಯವಾಣಿ)

ಗಣಕಯಂತ್ರದ ಕೀ ಬೋರ್ಡ್ ನ F1-F12(Function Key) ಕೀಗಳ ಪರಿಚಯ

        ಗಣಕಯಂತ್ರ | Computer ಬಳಕೆ ಮಾಡುವ ಎಲ್ಲರೂ ಕೀಬೋರ್ಡ್ ನಲ್ಲಿ F1 ನಿಂದ F12 ವರೆಗಿನ ಕೀಗಳನ್ನು ನೋಡಿರುತ್ತೇವೆ. ಇವುಗಳನ್ನು ಫಂಕ್ಷನ್ ಕೀ(Function Key)ಗಳು ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಕೀಬೋರ್ಡ್ ಮೊದಲ ಸ್ಥಾನದಲ್ಲಿ ಇರುವ F1 ನಿಂದ F12 ವರೆಗಿನ 12 ಕೀಗಳ ಉಪಯೋಗವೇನು? ಅವುಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹದು ಎಂದು ತಿಳಿಯೋಣ.


F1 (ಎಫ್1) :  ಕೀಬೋರ್ಡ್‌ನಲ್ಲಿರುವ ಎಫ್1 ಆಯ್ಕೆಯನ್ನು ಬಳಸಿಕೊಂಡು ನೀವು ಯಾವುದೇ ಪ್ರೋಗ್ರಾಂಗಳ ಸಹಾಯದ ಸ್ಕ್ರೀನ್ ತಡರೆಯಬಹುದು.ಗೂಗಲ್ ಕ್ರೋಮ್ ಬಳಕೆ ಮಾಡಿದಾಗ ಎಫ್1 ಒತ್ತಿದರೆ ನಿಮಗೆ ಹೆಲ್ಪ ಸ್ಕ್ರೀನ್ ತೆರೆಯುತ್ತದೆ.

F2 (ಎಫ್2) :  ಯಾವುದೇ ಫೋಲ್ಡರ್ ಹೆಸರನ್ನು ಬದಲಾವಣೆ ಮಾಡಲು ಎಫ್2 ಶಾರ್ಟ್ ಕೀ ಬಳಸಿದರೆ ಸಾಕಾಗುತ್ತದೆ. ಫೋಲ್ಡರ್ ಆಯ್ಕೆ ಮಾಡಿ ಎಫ್2 ಕ್ಲಿಕ್ ಮಾಡಿದರೆ ಸೆಕೆಂಡ್‌ಗಿಂತಲೂ ಕಡಿಮೆ ವೇಗದಲ್ಲಿ ಒಂದು ಫೋಲ್ಡರ್‌ ಹೆಸರು ಬದಲಾವಣೆ ಸಾಧ್ಯ.

F3 (ಎಫ್3) : ಯಾವುದಾದರೂ ಅಪ್ಲಿಕೇಷನ್ ಕಾರ್ಯನಿರ್ವಹಿಸುವಾಗ ಸರ್ಚ್ ಆಯ್ಕೆಯನ್ನು ತೆರೆಯಲು ಎಫ್3 ಒತ್ತಿದರೆ ಸಾಕು!! ಯಾವುದೇ ವಿಷಯವನ್ನು ಬಹುಬೇಗ ಸರ್ಚ್ ಮಾಡಲು ಇದೊಂದು ಉತ್ತಮ ಆಯ್ಕೆಯಾಗಿದೆ.!!

F4 (ಎಫ್4) : ಗೂಗಲ್ ಕ್ರೋಮ್ ಅಥವಾ ಯಾವುದೇ ಸರ್ಚ್ ಎಂಜಿನ್ ತೆರೆದರೂ ಒಂದೇ ಬಾರಿ ಎಲ್ಲಾ ವಿಂಡೊಗಳನ್ನು ಕ್ಲೋಸ್ ಮಾಡಲು Alt+F4 ಒತ್ತಿದರೆ ಸಾಕು.!! ಇದಿರಿಂದ ನಿಮ್ಮ ಸರ್ಚ್ ಎಂಜಿನ್‌ಗಳು ಹೆಚ್ಚು ವೇಗವಾಗಿ ಮತ್ತು ಹೆಚ್ಚು ಸೆಕ್ಯೂರ್ ಆಗಿ ಕ್ಲೋಸ್ ಆಗುತ್ತವೆ.

F5 (ಎಫ್5) : ಕಂಪ್ಯೂಟರ್‌ನ ಯಾವುದೇ ಪೇಜ್ ಅನ್ನು ರೀಫ್ರೆಶ್ ಮಾಡಲು ಎಫ್5 ಕೀ ಯನ್ನು ಒತ್ತಿ ಹಿಡಿದರೆ ಸಾಕು. ಮತ್ತು ಯಾವುದೇ ಪೇಜ್ ಅನ್ನು ರೀಲೋಡ್ ಮಾಡಲೂ ಸಹ ಎಫ್5 ಕೀ ಬಳಸಿದರೆ ಸಾಕಾಗುತ್ತದೆ.

F6 (ಎಫ್6) : ವೆಬ್‌ಪುಟದ ಯಾವುದಾದರೂ ಅ್ಡರೆಸ್ ಲಿಂಕ್ ಅನ್ನು ಪೂರ್ತಿಯಾಗಿ ಒಮ್ಮೆಲೇ ಸೆಲೆಕ್ಟ್ ಮಾಡಲು ಎಫ್6 ಕೀ ಒತ್ತಿದರೆ ಸಾಕು. ನಂತ ಆ ಲಿಂಕ್ ಅನ್ನು ಕಂಟ್ರೊಲ್+ಸಿ ಒತ್ತಿ ನಕಲು ಮಾಡಿಕೊಳ್ಳಬಹುದು.

F7 (ಎಫ್7) : ಮೈಕ್ರೊಸಾಫ್ಟ್ ವರ್ಡ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಷನ್‌ಗಳಲ್ಲಿ ಎಫ್7 ಕೀ ಮೂಲಕ ಗ್ರಾಮರ್ ಮತ್ತು ಸ್ಪೆಲ್ಲಿಂಗ್ ಚೆಕ್ ಮಾಡಬಹುದು. ಡಾಕ್ಯುಮೆಂಟ್‌ಗಳನ್ನು ರೀಚೆಕ್ ಮಾಡಲು ಈ ಆಯ್ಕೆ ಬಹಳ ಉಪಯೋಗಕಾರಿ.

F8 (ಎಫ್8) : ಕಂಪ್ಯೂಟರ್ ಆನ್ ಮಾಡುವ ಪ್ರಕ್ರಿಯೆಯಲ್ಲಿ ಎಫ್8 ಕೀಯನ್ನು ಸತತವಾಗಿ ಒತ್ತುತ್ತಲೇ ಇದ್ದರೆ, ಕಂಪ್ಯೂಟರ್ ಬೂಟ್ ಮಾಡುವ ಹಂತಕ್ಕೆ ತೆರೆಯುತ್ತದೆ. ನಿಮ್ಮ ಕಂಪ್ಯೂಟರ್ ಅನ್ನು ಮತ್ತೆ ಹೊಸದರಂತಾಗಿಸುವ ಆಯ್ಕೆ ಇದು.

F9 (ಎಫ್9) :  ಮೈಕ್ರೋಸಾಫ್ಟ್ ಔಟ್‌ಲುಕ್ ಇ-ಮೇಲ್‌ಗಳನ್ನು ಸೆಂಡ್ ಮತ್ತು ರಿಸೀವ್ ಮಾಡಲು ಎಫ್9 ಬಳಕೆ ಮಾಡಬಹುದು. ಮತ್ತು ಮೈಕ್ರೋಸಾಫ್ಟ್ ಡಾಕ್ಯುಮೆಂಟ್‌ಗಳನ್ನು ರಿಫ್ರೆಶ್ ಮಾಡಲು ಸಹ ಇದೇ ಶಾರ್ಟ್ ಕೀ ಬೇಕು.

F10 (ಎಫ್10) : ಅಪ್ಲಿಕೇಶನ್ ಮೆನು ಬಾರ್ ಸಕ್ರಿಯಗೊಳಿಸಲು ಎಫ್10 ಶಾರ್ಟ್ ಕೀ ಒತ್ತಬೇಕು. ಇದರಿಂದ ಬಹಳ ಸುಲಭವಾಗ ಅಪ್ಲಿಕೇಶನ್ ಮೆನು ಬಾರ್ ತೆರೆಯಬಹುದು .

F11 (ಎಫ್11) : ಇಂಟರ್‌ನೆಟ್ ಬ್ರೌಸಿಂಗ್‌ ತೆರೆದರೆ ಫುಲ್‌ಕ್ರೀನ್ ಆಯ್ಕೆಯನ್ನು ಮಾಡಬಹುದಾದ ಮತ್ತು ಫುಲ್ ಸ್ಕ್ರೀನ್ ಆಯ್ಕೆ ತೆರೆಯಬಹುದಾದ ಕಾರ್ಯವನ್ನು ಎಫ್11 ಕೀ ಮೂಲಕ ಮಾಡಬಹುದು. ಮತ್ತು ಭಾಷೆ ಬದಲಾವಣೆ ಮಾಡಲು ಸಹ ಇದೇ ಆಯ್ಕೆ ಬಳಸಬಹುದು.

F12 (ಎಫ್12) : ಮೈಕ್ರೋಸಾಫ್ಟ್‌ನ ವರ್ಡ್‌ನಲ್ಲಿ ಸೇವ್ ಮತ್ತು ಡೈಲಾಗ್ ಬಾಕ್ಸ್ ತೆರೆಯಲು ಎಫ್12 ಬಳಕೆಯಾಗುತ್ತದೆ.


Excel KeyBoard Shortcuts(imp)

 Computer ನಲ್ಲಿ Excel ಬಳಸುವಾಗ ಅದರಲ್ಲಿ ಹಲವಾರು Shortcut Keys ಬಳಸುತ್ತೇವೆ ಅವುಗಳು ಈ ಕೆಳಗಿನಂತಿವೆ.





























ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC-CAR/DAR ) ಹುದ್ದೆಗಳ ನೇಮಕಾತಿ ಅಧಿಸೂಚನೆ -2022

        ಕರ್ನಾಟಕ ಪೊಲೀಸ್ ಇಲಾಖೆಯು ಕಲ್ಯಾಣ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗ) (PC - CAR / DAR) ಹುದ್ದೆಗಳ ಭರ್ತಿಗೆ ಅಧಿಸೂಚನೆ ಇದೀಗ ಕರ್ನಾಟಕ ರಾಜ್ಯಪತ್ರದಲ್ಲಿ ಬಿಡುಗಡೆ ಆಗಿದ್ದು, ಪ್ರಸ್ತುತ ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಸೂಚನೆ ಪ್ರಕಟಿಸಿದೆ.



ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 19/09/2022.
✯ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31/10/2022.
✯ ಶುಲ್ಕ ಪಾವತಿಗೆ ಕೊನೆ ದಿನಾಂಕ: 03-11-2022
(ಆನ್‌ಲೈನ್‌ನಲ್ಲಿ / ಬ್ಯಾಂಕ್‌ ಶಾಖೆಗಳಲ್ಲಿ / ಅಂಚೆ ಕಚೇರಿಗಳ ಮೂಲಕ)

ವಯಸ್ಸಿನ ಅರ್ಹತೆಗಳು :
ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕ 31-10-2022 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. 
ಗರಿಷ್ಠ ವಯೋಮಿತಿ ಈ ಕೆಳಗಿನಂತೆ ತಿಳಿಸಲಾಗಿದೆ.
☞ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ 27 ವರ್ಷ.
☞ ಇತರೆ ಅಭ್ಯರ್ಥಿಗಳಿಗೆ 25 ವರ್ಷ.
☞ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ.

ವಿದ್ಯಾರ್ಹತೆ : 
ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.

ವೇತನ ಶ್ರೇಣಿ: 
ರೂ.23500-550-24600-600-27000-650-29600-750-32600-850-36000-950-39800-1100-46400-1250-47650.

ಖಾಯಂ ಪೂರ್ವ ಅವಧಿ : 
ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಆರು ತಿಂಗಳು ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ವೆಬ್‌ ವಿಳಾಸ :

ಹುದ್ದೆಗಳ ಸಂಖ್ಯೆ :
☞ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳು: 3064
☞ ಕಲ್ಯಾಣ ಕರ್ನಾಟಕ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳು: 420
☞ ಒಟ್ಟು ಹುದ್ದೆಗಳ ಸಂಖ್ಯೆ: 3484

ಅರ್ಜಿ ಶುಲ್ಕ ವಿವರ :
☞ ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳಿಗೆ ರೂ.400.
☞ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.200.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರ   Download ಮಾಡಿ


2nd PUC Supplementary Result | ಫಲಿತಾಂಶ ಪ್ರಕಟ 2022

      ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ - 2022ರ ಫಲಿತಾಂಶವನ್ನು ಇಂದು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
      ಫಲಿತಾಂಶ ವೀಕ್ಷಣೆ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ Registration Number ಮತ್ತು Subject Combination ತುಂಬಿ....


ಶಿಕ್ಷಕರ ದಿನಾಚರಣೆ - 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್'

    

        "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ" ಇದು ಆದಿ ಶಂಕರರು ರಚಿಸಿದ ಶ್ಲೋಕ. ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ, ಈ ಲೋಕದ ಸೃಷ್ಟಿಕರ್ತ ಗುರು. ಆ ಮಹಾನ್ ಗುರುವಿನ ಪಾತ್ರ ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಅಲ್ಲದೇ ಒಂದು ದೇಶವನ್ನು ಕಟ್ಟಲು ಬಹಳ ಮಹತ್ವದಾಗಿದೆ. ಗುರುಕುಲ ಶಿಕ್ಷಣ ದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಅವರು ವ್ಯಕ್ತಿಯ ಆತ್ಮ ವಿಶ್ವಾಸ, ಬದುಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ಇಂತಹ ಗುರುವಿಗೆ ಗೌರವ ನೀಡಲು ಪ್ರತಿ ವರ್ಷ ಡಾ. ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್ 5 ನ್ನು  ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

     ಶಿಕ್ಷಕರು ನಮಗೆ ನಿಜವಾದ ಜೀವನ ವಿಧಾನವನ್ನು ಕಲಿಸುತ್ತಾರೆ. ಸರಿಯಾದ ಮಾರ್ಗವನ್ನು ಅನುಸರಿಸಲು ನಿಮ್ಮನ್ನು ಪ್ರೇರೇಪಿಸುತ್ತಾರೆ. ಜೀವನದಲ್ಲಿ ಪೋಷಕರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ನಮ್ಮನ್ನು ಈ ವರ್ಣರಂಜಿತ ಸುಂದರ ಜಗತ್ತಿನಲ್ಲಿ ತಂದವರು. ನಮ್ಮ ತಂದೆ ತಾಯಿಗಳು ಜೀವನದ ಮೊದಲ ಗುರುಗಳಾದರೆ ಎರಡನೇ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟವರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಆಳವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನದ ಸಂದರ್ಭದಲ್ಲಿ ಶಿಕ್ಷಕರಿಗೆ ಗೌರವವನ್ನು ತೋರಿಸಲು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ತಿಳಿಸಿದರು. ಅಂದಿನಿಂದ ಈ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.


ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ 
ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (1905 -1906) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ 'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. 

ಜನನ ಹಾಗೂ ವಿದ್ಯಾಭ್ಯಾಸ
'ಸರ್ವೆಪಲ್ಲಿ ರಾಧಾಕೃಷ್ಣನ್' ಸೆಪ್ಟೆಂಬರ್ 5, 1888 ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಜನಿಸಿದರು. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.

     ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು.

     'ಸ್ಕಾಲರ್‌ಶಿಪ್ ಹಣ'ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಪಡೆದು ಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ವಿವಾಹ
ವೆಲ್ಲೂರಿನಲ್ಲಿರುವಾಗಲೇ ಕೇವಲ 16 ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.

ಮಹಾ ಶಿಕ್ಷಕನಾಗಿ
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.

    ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.

ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ
       ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.

   ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು
        1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. 1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು.

        ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲ ದಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

        1951-52 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು.

    ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.

          ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, 1962ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. 

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ. ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.

1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ನಿಧನ
   ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ 1967ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, 1975 ರ ಏಪ್ರಿಲ್ 17 ರಂದು ಇಹಲೋಕ ತ್ಯಜಿಸಿದರು.

ಗುರುವಿನ ಕುರಿತು ಮಹಾನ್ ವ್ಯಕ್ತಿಗಳ ಹೇಳಿಕೆಗಳು.
ನಮ್ಮ ಬಗ್ಗೆ ಯೋಚಿಸಲು ಸಹಾಯ ಮಾಡುವವರೇ ನಿಜವಾದ ಶಿಕ್ಷಕರು - ಡಾ.ಸರ್ವೆಪಲ್ಲಿ ರಾಧಾಕೃಷ್ಣನ್.

ಶಿಕ್ಷಣವು ಮನುಷ್ಯನಲ್ಲಿ ಹುದುಗಿರುವ ಅಂತಃಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣ - ಸ್ವಾಮಿ ವಿವೇಕಾನಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವವರು ಪೋಷಕರಿಗಿಂತ ಹೆಚ್ಚು ಗೌರವಾನ್ವಿತರು, ಏಕೆಂದರೆ ಪೋಷಕರು ಜೀವನವನ್ನು ನೀಡಿದರು, ಚೆನ್ನಾಗಿ ಬದುಕುವುದನ್ನು ಕಲಿಸಿಕೊಡುವವರು ಶಿಕ್ಷಕ - ಅರಿಸ್ಟಾಟಲ್.

ಉತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಉತ್ತಮ ಮಾರ್ಗದಲ್ಲಿ ಹೇಗೆ ನಡೆಸಬೇಕೆಂದು ತಿಳಿದಿದೆ - ಚಾರ್ಲ್ಸ್ ಕುರಾಲ್ಟ್.

ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಬೇಕಾದರೆ ಮತ್ತು ಸುಂದರವಾದ ಮನಸ್ಸಿನ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರು ಬದಲಾವಣೆಯನ್ನು ಮಾಡಬಹುದು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರೇ ತಂದೆ, ತಾಯಿ ಮತ್ತು ಗುರು - ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.

ಶಿಕ್ಷಣವೆಂದರೆ ಬಟ್ಟಲು ತುಂಬುವುದು ಅಲ್ಲ, ಬೆಂಕಿಯನ್ನು ಬೆಳಗಿಸುವುದು - ವಿಲಿಯಂ ಬಟ್ಲರ್ ಯೀಟ್ಸ್.

ಉತ್ತಮ ಶಿಕ್ಷಕ ಮೇಣದ ಬತ್ತಿಯಂತೆ - ಅದು ಇತರರಿಗೆ ದಾರಿಯನ್ನು ತೋರಿಸಲು ಬೆಳಗುವ ಮೂಲಕ ತನ್ನನ್ನು ತಾನೇ ಸವಿಸುತ್ತದೆ - ಮುಸ್ತಫಾ ಕೆಮಾಲ್ ಅಟತುರ್ಕ್.

ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ - ನೆಲ್ಸನ್ ಮಂಡೇಲಾ.

ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನು ಬದಲಾಯಿಸಬಹುದು - ಮಲಾಲಾ ಯೂಸುಫ್‌ಜಾಯ್.

ಬೋಧನೆಯ ಕಲೆಯು ಅನ್ವೇಷಣೆಗೆ ಸಹಾಯ ಮಾಡುವ ಕಲೆಯಾಗಿದೆ - ಮಾರ್ಕ್ ವ್ಯಾನ್ ಡೋರೆನ್.

ನಿಜವಾಗಿಯೂ ಬುದ್ಧಿವಂತನಾದ ಶಿಕ್ಷಕನು ತನ್ನ ಬುದ್ಧಿವಂತಿಕೆಯ ಮನೆಯನ್ನು ಪ್ರವೇಶಿಸಲು ನಿಮ್ಮನ್ನು ಆಜ್ಞಾಪಿಸುವುದಿಲ್ಲ ಆದರೆ ನಿಮ್ಮ ಆಸಕ್ತಿಯ ಹೊಸ್ತಿಲಿಗೆ ನಿಮ್ಮನ್ನು ಕರೆದೊಯ್ಯುತ್ತಾನೆ - ಖಲೀಲ್ ಗಿಬ್ರಾನ್.

ಬೋಧನೆಯು ವ್ಯಕ್ತಿಯ ಪಾತ್ರ, ಸಾಮರ್ಥ್ಯ ಮತ್ತು ಭವಿಷ್ಯವನ್ನು ರೂಪಿಸುವ ಅತ್ಯಂತ ಉದಾತ್ತ ವೃತ್ತಿಯಾಗಿದೆ. ಜನರು ನನ್ನನ್ನು ಉತ್ತಮ ಶಿಕ್ಷಕ ಎಂದು ಸ್ಮರಿಸಿದರೆ ಅದೇ ನನಗೆ ದೊಡ್ಡ ಗೌರವ - ಎ.ಪಿ.ಜೆ ಅಬ್ದುಲ್ ಕಲಾಂ.

ಶಿಷ್ಯನಿಗೆ ನಿಜವಾದ ಪಠ್ಯಪುಸ್ತಕ ಅವನ ಗುರು ಎಂದು ನಾನು ಯಾವಾಗಲೂ ಭಾವಿಸಿದೆ- ಮಹಾತ್ಮ ಗಾಂಧಿ.

ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು, ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ- ಹೆಲೆನ್ ಕ್ಯಾಲ್ಡಿಕಾಟ್.

ತಂತ್ರಜ್ಞಾನವು ಕೇವಲ ಒಂದು ಸಾಧನವಾಗಿದೆ. ಮಕ್ಕಳನ್ನು ಒಟ್ಟಿಗೆ ಕೆಲಸ ಮಾಡಲು ಮತ್ತು ಅವರನ್ನು ಪ್ರೇರೇಪಿಸುವ ವಿಷಯದಲ್ಲಿ, ಶಿಕ್ಷಕ ಅತ್ಯಂತ ಮುಖ್ಯ ಪಾತ್ರ ನಿರ್ವಹಿಸುತ್ತಾರೆ - ಬಿಲ್ ಗೇಟ್ಸ್.

ಸೃಜನಶೀಲತೆ ಮತ್ತು ಜ್ಞಾನ ಗ್ರಹಿಕೆಯಲ್ಲಿ ಆಸಕ್ತಿಯನ್ನು ಕಾಪಾಡುವುದು ಶಿಕ್ಷಕರ ಪರಮೋಚ್ಚ ಕಲೆ - ಆಲ್ಬರ್ಟ್ ಐನ್ಸ್ಟೈನ್.

Popular Post