Menu

Home ನಲಿಕಲಿ About ☰ Menu


 

ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ 1 - 10 | Lesson Based Assessment Materials

ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ 1 - 10 | Lesson  Based Assessment Materials
               DSERT ಯು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ 1 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು (ಪ್ರಶ್ನೆಕೋಠಿ) ಸಿದ್ದಪಡಿಸಿ ತನ್ನ Website ನಲ್ಲಿ ಅಳವಡಿಸಿದೆ.

LBA ಅಂಕ Online Entry ಮಾಡುವ ವಿಧಾನ 
  
     ಸದರಿ ಸಾಮಗ್ರಿಯನ್ನು ತರಗತಿ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
DSERT ಅಧಿಕೃತ Website 
ಸೂಚನೆ: ಕೆಳಗೆ ತಮಗೆ ಬೇಕಾದ ತರಗತಿಯ ವಿಷಯದ ಮೇಲೆ Click ಮಾಡಿ Download ಮಾಡಬಹುದು.

1ನೇ ತರಗತಿ



2ನೇ ತರಗತಿ



3ನೇ ತರಗತಿ



4ನೇ ತರಗತಿ

5ನೇ ತರಗತಿ




6ನೇ ತರಗತಿ 

7ನೇ ತರಗತಿ 

8ನೇ ತರಗತಿ 

9ನೇ ತರಗತಿ 
019ನೇ ತರಗತಿ LBA ಕನ್ನಡ ಪ್ರಥಮ ಭಾಷೆ

10ನೇ ತರಗತಿ





Downloads
DSERT ಪ್ರಕಟಣೆ

ವಿವೇಕ ಜ್ಯೋತಿ YouTube Channel

NMMS Scholorship Scheme-2025-26 | NSP ಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.-VJ

NMMS Scholorship Scheme-2025-26 ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆದಿರುವ ಕುರಿತು.
NMMS Scholorship Scheme-2025-26 | NSP ಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.-VJ

NMMS Scholorship Scheme-2025-26 ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ NMMS ವಿದ್ಯಾರ್ಥಿ ವೇತನಕ್ಕಾಗಿ National Scholarship Portal(NSP) ನಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು, ದಿನಾಂಕ:2-6-2025 ರಿಂದ NSP ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಾರಂಭಿಸಿರುವುದಾಗಿ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ. ಇದನ್ನು ಓದಿ= >> FLN ಕ್ರಿಯಾ ಯೋಜನೆ 3ರಿಂದ10ನೇ ತರಗತಿ 

National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು, ಅನುಸರಿಸಬೇಕಾದ ಪ್ರಮುಖ ಅಂಶಗಳು :

➤2025-26ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
Visit Official Website: www.scholarships.gov.in

➤(OTR) is a unique 14-digit number issued based on the Aadhaar/Aadhaar Enrolment ID (EID)

➤One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.

➤NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೋಬೈಲ್‌ಗೆ SMS ಮೂಲಕ Reference / OTR ಸಂಖ್ಯೆ ಕಳುಹಿಸಲಾಗುತ್ತಿದೆ.

OTR Generateಮಾಡುವ ವಿಧಾನ.


 
ಅರ್ಜಿ ಸಲ್ಲಿಸುವ ವಿಧಾನ 

➤Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) ವಿದ್ಯಾರ್ಥಿಗಳು National Scholarship Portal ನಲ್ಲಿ Student Login ನಲ್ಲಿ ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸನ್ ಸಂಖ್ಯೆಯೆನ್ನು ಪಡೆದುಕೊಳ್ಳಬೇಕಾಗುತ್ತದೆ.

➤2025-26ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾ‌ರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)

ಅ) ಆಧಾ‌ರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು
  1. ಸಕ್ರಿಯ ಮೊಬೈಲ್ ಸಂಖ್ಯೆ
  2. ಆಧಾ‌ರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ
  3. ವಿದ್ಯಾರ್ಥಿಯ ಆಧಾರ್ ಸಂಖ್ಯೆ

ಆ) ಆಧಾ‌ರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು
  1. ಸಕ್ರಿಯ ಮೊಬೈಲ್ ಸಂಖ್ಯೆ
  2. ಪೋಷಕರ ಆಧಾ‌ರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ

➤ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ EID ಮೂಲಕ ನೋಂದಾಯಿಸಿದ ಫಲಾನುಭವಿಗಳ OTR ID ತಾತ್ಕಾಲಿಕವಾಗಿರುತ್ತದೆ.

➤ವಿದ್ಯಾರ್ಥಿಗಳುಆಧಾರ್ ಅನ್ನು ಸಲ್ಲಿಸಿ eKYCಯನ್ನು ನಿಗದಿತ ಸಮಯದೊಳಗೆ ಮಾಡಿದಲ್ಲಿ ಮಾತ್ರ ವಿದ್ಯಾರ್ಥಿವೇತನದ ವಿತರಣೆಯನ್ನು ಮಾಡಲಾಗುತ್ತದೆ.

➤ಪೋಷಕರ ಆಧಾರ್ ಸಂಖ್ಯೆ:
ವಿ ಸೂ : ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ, ಕೂಡ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರ ವಿದ್ಯಾರ್ಥಿಯದ್ದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾ‌ರ್ ಸಂಖ್ಯೆಯನ್ನು update ಮಾಡತಕ್ಕದ್ದು.

ಇ) OTR(One Time Registration) ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳಿಗೆ ಸೂಚನೆಗಳು.

➤2023-24 ಹಾಗೂ 2024-25ನೇ ಸಾಲಿನಲ್ಲಿ face authentication ಮಾಡಿದ ವಿದ್ಯಾರ್ಥಿಗಳಿಗೆ NSPಯ ಮೂಲಕ ಜೆನೆರೇಟ್ ಆದ One Time Registration(OTR) ಸಂಖ್ಯೆಯನ್ನು, ಅರ್ಜಿದಾರರ ನೊಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಿಕೊಡಲಾಗಿದೆ.

➤ಈಗಾಗಲೇ OTR ಸಂಖ್ಯೆಯನ್ನು ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ನೇರವಾಗಿ NSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು

ಈ) ರೆಫರೆನ್ಸ್ ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳು OTR ಪಡೆಯಲು ಅನುಸರಿಸಬೇಕಾದ ಕ್ರಮಗಳು ( ರೆಫರ ಸಂಖ್ಯೆ ಉದಾ: R23-003101555)

➤2023-24ನೇ ಸಾಲಿನಲ್ಲಿ OTP based eKYC ಯನ್ನು ಪೂರ್ಣಗೊಳಿಸಿದ್ದರೂ ಕೂಡ, face authentication ಅನ್ನು ಪೂರ್ಣಗೊಳಿಸದೇ ಇರುವ ವಿದ್ಯಾರ್ಥಿಗಳಿಗೆ MoE ಯಿಂದ ನೋಂದಾಯಿತ ಮೊಬೈಲ್ ಗೆ ರೆಫರೆನ್ಸ್ ಸಂಖ್ಯೆಯನ್ನು ಕಳುಹಿಸಲಾಗಿರುತ್ತದೆ.

➤ರೆಫೆರೆನ್ ಸಂಖ್ಯೆಯನ್ನು ಬಳಸಿಕೊಂಡು, ವಿದ್ಯಾರ್ಥಿಗಳು Face Authentication ಪೂರ್ಣಗೊಳಿಸುವ ಮೂಲಕ OTR ಸಂಖ್ಯೆಯನ್ನು ಪಡೆದುಕೊಳ್ಳುವುದು.

➤ಅದಕ್ಕಾಗಿ ಆಂಡ್ರಾಯ್ಡ್ ಮೊಬೈಲ್‌ನ google play store ನಿಂದ ಈ ಮುಂದೆ ಸೂಚಿಸಿರುವ ಎರಡೂ App ಗಳನ್ನು install ಮಾಡಿಕೊಳ್ಳುವುದು

1. AadhaarFaceRD App ನ್ನು install ಮಾಡಿಕೊಳ್ಳುವುದು.(Link: https://play.google.com/store/apps/details?id=in.gov.uidai.facerd

2. NSP OTR App ನ್ನು install ಮಾಡಿಕೊಳ್ಳುವುದು. (link: https://play.google.com/store/apps/details?id=in.gov.scholarships.nspotr&pli=1)

ಉ) App ಗಳ ಮೂಲಕ OTR ಪಡೆಯುವ ಪ್ರಕ್ರಿಯೆ

➤Mobile ನಲ್ಲಿ NSP OTR App ಅನ್ನು ತೆರೆದಾಗ ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ ಕೆಂಪು ಬಣ್ಣದಲ್ಲಿ ಗುರುತು ಮಾಡಿರುವ “eKYC with FaceAuth” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

➤ಈ screen ನಲ್ಲಿ ವಿದ್ಯಾರ್ಥಿಯು ಪಡೆದಿರುವ Reference ID ನಮೂದಿಸುವುದು.

➤ನಂತರ ಮೊಬೈಲ್ ಗೆ ಬಂದಿರುವ OTP ಹಾಗೂ ಸ್ವೀನ್‌ನಲ್ಲಿ ಸೂಚಿಸಿರುವ CAPTCHA ಸರಿಯಾಗಿ ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿ.

➤ವಿದ್ಯಾರ್ಥಿಯ ಆಧಾರನಲ್ಲಿರುವಂತೆ ಮಾಹಿತಿಗಳು ಸ್ತ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ.ಮಾಹಿತಿಯನ್ನು ಖಚಿತಪಡಿಸಿಕೊಂಡು Proceed For Face Authentication ಮೇಲೆ ಕ್ಲಿಕ್ ಮಾಡಿ.

➤ಸ್ತ್ರೀನ್ ಮೇಲೆ ಕಾಣಿಸಿಕೊಳ್ಳುವ ಸೂಚನೆಗಳನ್ನು ಓದಿಕೊಂಡು I Agree ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

➤ಈಗ ವಿದ್ಯಾರ್ಥಿಯ Face authentication ಮಾಡಲು ಹೊಸ screen ಕಾಣಿಸಿಕೊಳ್ಳುತ್ತದೆ.

➤Screen ಮೇಲಿರುವ ಸೂಚನೆಗಳನ್ನು ಓದಿಕೊಂಡು check box ನಲ್ಲಿ ” Tick Mark” ಗುರ್ತಿಸಿ Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.

➤ನಂತರ Face authentication screen ಕಾಣಿಸಿಕೊಳ್ಳುತ್ತದೆ.

➤Screen ಮೇಲೆ ಕಾಣಿಸಿಕೊಳ್ಳುವ ವೃತ್ತಾಕಾರದೊಳಗೆ ವಿದ್ಯಾರ್ಥಿಯ ಮುಖ ಸ್ಪಷ್ಟವಾಗಿ ಗೋಚರಿಸುವಂತೆ ಇರಬೇಕು.

➤ನಂತರ Pls Blink to capture ಎಂಬ ಸೂಚನೆ ಕಾಣಿಸಿದಾಗ ವಿದ್ಯಾರ್ಥಿಯು ಕಣ್ಣು ರೆಪ್ಪೆ ಮುಚ್ಚಿ ತೆರೆದಾಗ Face Capture ಆಗುತ್ತದೆ. ( Error ಬಂದಲ್ಲಿ ಮತ್ತೆ ಪ್ರಯತ್ನಿಸಿ)

➤Face authentication successfully completed ಎಂಬ ಮಾಹಿತಿಯೊಂದಿಗೆ OTR ಸಂಖ್ಯೆ ಜನರೇಟ್ ಆಗುತ್ತದೆ.

➤ಜನರೇಟ್ ಆದ OTR ಸಂಖ್ಯೆ ಹಾಗೂ Password ನೋಂದಾಯಿತ ಮೊಬೈಲ್ ಗೆ SMS ಬರುತ್ತದೆ.

➤ಈಗ login ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಕಾಣಿಸಿಕೊಳ್ಳುವ ಸ್ಕಿನ್ ನಲ್ಲಿ OTR ಸಂಖ್ಯೆ ಹಾಗೂ Password ಹಾಗೂ CAPTCHA ಸರಿಯಾಗಿ ನಮೂದಿಸಿ login ಆಗಿ ಹೊಸ password ಸೃಜಿಸಿಕೊಳ್ಳುವುದು. (ಕನಿಷ್ಟ ಒಂದು Upper case, Lower case, special character, numerical character ಒಳಗೊಂಡಂತೆ ಕನಿಷ್ಠ 8 character ಇರಬೇಕು)

➤ಕೆಳಗಿರುವ CAPTCHA ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿದಾಗ, Password successfully updated ಎಂಬ ಮಾಹಿತಿ ಲಭ್ಯವಾಗುತ್ತದೆ.

➤ಈ ರೀತಿ ನಡೆದ OTR a Password  National Scholarship Portal ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸುವುದು.

ಊ) Reference ID ಪಡೆಯದೇ ಇರುವ Fresh ವಿದ್ಯಾರ್ಥಿಗಳು ವಹಿಸಬೇಕಾದ ಕ್ರಮಗಳು

➤ವಿದ್ಯಾರ್ಥಿಗಳು NSP ನಲ್ಲಿ Login ಆಗುವುದು.

➤Apply for One Time Registration ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ Register ಮೇಲೆ ಕ್ಲಿಕ್ ಮಾಡುವುದು.

➤ಸೂಚನೆಗಳನ್ನು ಓದಿಕೊಂಡು check box ನಲ್ಲಿ” TICK MARK” ಗುರ್ತಿಸಿ Next ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ಕ್ರೀನ್ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ OTP ಪಡೆಯುವುದು.

➤ಪಡೆದ OTP ಹಾಗೂ Captcha ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ OTP ಪಡೆಯುವುದು.
 
➤ಪಡೆದ OTP ಹಾಗೂ Captcha ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು. CAPCTHA ಅನ್ನು ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು.

➤ಈಗ Reference ID ಜನರೇಟ್ ಆಗುತ್ತದೆ.

➤ಮೇಲೆ ಕಂಡಿಕೆ ಈ ಹಾಗೂ ಉ ನಲ್ಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸಿ ನಂತರ National Scholarship Portal ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸುವುದು.



ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನಾ ಹಂತಗಳು.

➤ವಿವಿಧ ಹಂತದ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯಗಳು

ಜಿಲ್ಲಾ (ಡಯಟ್) ಹಂತ:
➤ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು NSP OTR ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದು.

➤ಸ್ಥಳೀಯ ಪತ್ರಿಕೆಗಳಲ್ಲಿ NMMS ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಮಾಡುವುದು.

➤ಸ್ಥಳೀಯ ಕೇಬಲ್ ನೆಟ್ವರ್ಕ ಮುಖಾಂತರ NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಚಾರ ಮಾಡುವುದು.

➤ತಮ್ಮ ವ್ಯಾಪ್ತಿಯಲ್ಲಿ ಬರುವ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದು.

➤ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳಿಂದ NSPನಲ್ಲಿ Submit ಆಗಿರುವ ಅರ್ಜಿಗಳನ್ನು ಜಿಲ್ಲಾ ಹಂತದಲ್ಲಿ NMMS ಮಾರ್ಗಸೂಚಿ ಅನುಸಾರವಾಗಿ Verify ಮಾಡುವುದು.

➤ಪ್ರತಿ 15 ದಿನಗಳಿಗೊಮ್ಮೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು NMMS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.

➤ಜಿಲ್ಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು, ನಿಗಧಿತ ಅವಧಿಯೊಳಗಡೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

ತಾಲ್ಲೂಕು ಹಂತ :
➤ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಯರ ಸಭೆ ಕರೆದು NSP OTR ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅರ್ಜಿಗಳನ್ನು INO Login ನಲ್ಲಿ Verify ಮಾಡುವ ಕ್ರಮದ ಬಗ್ಗೆ ತಿಳಿಸುವುದು.

➤ಸ್ಥಳೀಯ ಸುದ್ದಿ ಮಾಧ್ಯಮಗಳನ್ನು ಬಳಸಿಕೊಂಡು NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಚಾರ ಮಾಡುವುದು.

➤NMMS ವಿದ್ಯಾರ್ಥಿ ವೇತನದ ಬಗ್ಗೆ ಬ್ಯಾನರ್ / ಪಾಂಪ್ಲೆಟ್ ಗಳನ್ನು ಬಳಸಿ ಪ್ರಚಾರ ಮಾಡುವುದು.ತಮ್ಮ ಕಛೇರಿಯ NOTICE BOARD ನಲ್ಲಿ ಈ ಕುರಿತು ಪ್ರಕಟಿಸಲು ಕ್ರಮ ವಹಿಸುವುದು.

➤ಪ್ರತಿ 15 ದಿನಗಳಿಗೊಮ್ಮೆ ಶಾಲಾ ಮುಖ್ಯಸ್ಥರು/ಪ್ರಾಂಶುಪಾಲರುಗಳ ಸಭೆ ಕರೆದು NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.

ಶಾಲಾ /ಪದವಿ ಪೂರ್ವ ಹಂತ :
➤ಶಿಕ್ಷಕರು / ಉಪನ್ಯಾಸಕರುಗಳಿಗೆ ತರಗತಿಗಳಲ್ಲಿ NMMS ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲು ತಿಳಿಸುವುದು.

➤ಅರ್ಜಿ ಸಲ್ಲಿಸುವ ಪೂರ್ವದಲ್ಲಿ Guidelines for Registration on National Scholarship Portal ಅನ್ನು ಪೂರ್ಣವಾಗಿ ಓದಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮುಖ್ಯ ಶಿಕ್ಷಕರು ಕ್ರಮವಹಿಸುವುದು.

➤ಶಾಲಾ / ಕಾಲೇಜು NOTICE BOARD ನಲ್ಲಿ ಈ ಕುರಿತು ಪ್ರಕಟಿಸುವುದು.

➤www.scholarship.gov.in ವೆಬ್ಸೈಟ್ ನ NSP & Institute Login ನಲ್ಲಿ USER ID, ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಆದ ನಂತರ School Profile ಅಪ್ ಡೇಟ್ ಮಾಡಿಕೊಳ್ಳುವುದು.

➤ಶಾಲಾ / ಕಾಲೇಜು ಮುಖ್ಯಸ್ಥರು ಅರ್ಹ ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಅರ್ಜಿ ಸಲ್ಲಿಸಲು ತಿಳಿಸುವುದು.

➤ವಿದ್ಯಾರ್ಥಿಗಳು Submit ಮಾಡಿರುವ ಅರ್ಜಿಯ ಧೃಡೀಕೃತ ಪ್ರತಿಯನ್ನು ಪಡೆದು, ಶಾಲೆಯಲ್ಲಿ ಪ್ರತ್ಯೇಕ ಕಡತ ನಿರ್ವಹಿಸುವುದು.

➤ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ನವೀಕೃತ ಆದಾಯ ಪ್ರಮಾಣ ಪತ್ರ, ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪಾಸ್ ಬುಕ್ ಮುಂತಾದವುಗಳ ದೃಢೀಕೃತ ಪ್ರತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.

➤ವಿದ್ಯಾರ್ಥಿಗಳು NSP ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು NMMS ಮಾರ್ಗಸೂಚಿ ಅನುಸಾರವಾಗಿ, ನಿಗಧಿತ ಅವಧಿಯೊಳಗಾಗಿ Verify ಮಾಡುವುದು.

➤ಶಾಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು, ನಿಗಧಿತ ಅವಧಿಯೊಳಗಡೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.

➤ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ / ಕಾಲೇಜು ಮುಖ್ಯಸ್ಥರು ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ NMMS ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವುದು,

ವಿ. ಸೂ : ಶೈಕ್ಷಣಿಕ ಜಿಲ್ಲೆಗಳಾದ ಚಿಕ್ಕೋಡಿ, ಬೆಂಗಳೂರು ಉತ್ತರ, ಮಧುಗಿರಿ ಹಾಗೂ ಶಿರಸಿ ಜಿಲ್ಲೆಯವರು ಕಡ್ಡಾಯವಾಗಿ ಕಂದಾಯ ಜಿಲ್ಲೆಗಳಾದ ಬೆಳಗಾವಿ, ಬೆಂಗಳೂರು ದಕ್ಷಿಣ, ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ನೋಡಲ್ ಅಧಿಕಾರಿಗಳ ಸಮನ್ವಯದೊಂದಿಗೆ ವಿದ್ಯಾರ್ಥಿಗಳ ಅರ್ಜಿಗಳನ್ನು NSP ನಲ್ಲಿ Verification ಕಾರ್ಯವನ್ನು ಮಾಡುವುದು.

        www.scholarships.gov.in website services optionsನಲ್ಲಿ ಲಭ್ಯವಿರುವ user manual, Institute operation manual, FAQ’s ಹಾಗೂ ಇತರೆ ಮಾಹಿತಿಗಳನ್ನು download ಮಾಡಿಕೊಳ್ಳಬಹುದಾಗಿದೆ.
            ಸುತ್ತೋಲೆಯ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ National Scholarship Portal ಮೂಲಕ ಅರ್ಜಿ ಸಲ್ಲಿಸಲು ಸೂಕ್ತ ಕ್ರಮವಹಿಸಿ, ಎಲ್ಲಾ ಅರ್ಹ ಫಲಾನುಭವಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕ್ರಮವಹಿಸುವಂತೆ ಸೂಚಿಸಲಾಗಿದೆ.

ಶೈಕ್ಷಣಿಕ ವರ್ಷ 2025-26ರ ಪ್ರಮುಖ ಆದೇಶ & ಸುತ್ತೋಲೆಗಳು

ಶೈಕ್ಷಣಿಕ ವರ್ಷ 2025-26ರ ಪ್ರಮುಖ ಆದೇಶ & ಸುತ್ತೋಲೆಗಳು

      2025-26ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಂಬಂಧಿಸಿದ ಪ್ರಮುಖ ಎಲ್ಲಾ ಆದೇಶ ಹಾಗೂ ಸುತ್ತೋಲೆಗಳು.
(ಸೂಚನೆ : ನಿಮಗೆ ಬೇಕಾದ ಆದೇಶ/ಸುತ್ತೋಲೆ ಹೆಸರಿನ ಮೇಲೆ Click ಮಾಡಿ Download ಮಾಡಬಹುದು)


ಶಿಕ್ಷಕರ ವರ್ಗಾವಣೆ 2025 ಅಧಿಸೂಚನೆ ಪ್ರಕಟ : ಸಂಪೂರ್ಣ ಮಾಹಿತಿ

ಶಿಕ್ಷಕರ ವರ್ಗಾವಣೆ 2025 ಅಧಿಸೂಚನೆ ಪ್ರಕಟ : ಸಂಪೂರ್ಣ ಮಾಹಿತಿ

         2024-25 ನೇ ಸಾಲಿನ ಸರ್ಕಾರಿ ಶಾಲಾ ಪ್ರಾಥಮಿಕ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಕುರಿತು

ಅಧಿಸೂಚನೆ:

              ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ:04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ತತ್ಸಮಾನ ವೃಂದದ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ವರ್ಗಾವಣಾ ನಿಯಮ-2020ರ ನಿಯಮ-6 ರಲ್ಲಿ ನಿಗದಿಪಡಿಸಿರುವಂತೆ ವರ್ಗಾವಣೆ(ಅನುಸೂಚಿ) ವಿಸ್ತ್ರತವಾದ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.


ವರ್ಗಾವಣೆಯ ಪ್ರಮುಖ ದಿನಾಂಕಗಳು :

  • ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಕೆ ಪ್ರಾರಂಭ : 29/05/2025.
  • ಕೊನೆಯ ದಿನಾಂಕ : 21/06/2025.
  • ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟ : 01/07/2025.
  • ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ : 02/07/2025.
  • 31/05/2025ಕ್ಕೆ 5 ವರ್ಷ ಸೇವೆಯನ್ನು ಪೂರ್ಣಗೊಳಿಸಿದ CRP,BRP,ECO, ಕೌನ್ಸಿಲಿಂಗ್ ದಿನಾಂಕ : 10/07/2025.
  • ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ದಿನಾಂಕ : 18/07/2025 ರಿಂದ 21/07/2025.
  • ಪರಸ್ಪರ ವರ್ಗಾವಣೆ ಕೌನ್ಸಲಿಂಗ್ ದಿನಾಂಕ : 24/07/2025.
  • 3 ವರ್ಷ ಸೇವೆಯನ್ನು ಪೂರ್ಣಗೊಳಿಸಿದ CRP,BRP,ECO ಕೌನ್ಸಿಲಿಂಗ್ ದಿನಾಂಕ : 25/07/2025.
Download Notification

                  2020ರಲ್ಲಿ ಜಾರಿಯಾದ ಶಿಕ್ಷಕರ ವರ್ಗಾವಣೆ ಕಾಯ್ದೆಯಂತೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವಲಯ ವರ್ಗಾವಣೆಗಳನ್ನು ಒಂದರ ನಂತರ ಒಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಬೇಕಾಗಿರುತ್ತದೆ.

                  ಹಾಗೆಯೇ, ಮೇಲ್ಕಂಡಂತೆ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿದ್ದು, ಹೆಚ್ಚುವರಿ b ಪ್ರಕ್ರಿಯೆಯ ಸಹಿತವಾಗಿ ಶಿಕ್ಷಕರ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲು ಮಾರ್ಗಸೂಚಿಗಳನ್ನು ಮತ್ತು ವೇಳಾಪಟ್ಟಿಯನ್ನು ಹೊರಡಿಸಲಾಗಿದೆ. ಈ ಸಂಬಂಧ ವರ್ಗಾವಣೆಗೆ ಪೂರಕವಾದ ಇ.ಇ.ಡಿ.ಎಸ್ ದತ್ತಾಂಶ, ಖಾಲಿ ಹುದ್ದೆಗಳ ಮಾಹಿತಿ, ಶಾಲಾ ವಲಯಗಳ ದತ್ತಾಂಶ ಇತ್ಯಾದಿಗಳ ಇಂದೀಕರಣವಾಗಬೇಕಾಗಿದೆ.

                   ಸಾಮಾನ್ಯ/ಪರಸ್ಪರ ವರ್ಗಾವಣೆಗಳನ್ನು ಒಳಗೊಂಡಂತೆ ಕೌನ್ಸಿಲಿಂಗ್‌ ಪ್ರಕ್ರಿಯೆಯನ್ನು On Line ಮೂಲಕವೇ ನಿರ್ವಹಿಸಬೇಕಾಗಿದ್ದು, ಈಗಾಗಲೇ ಶಿಕ್ಷಕರ (Weighted score) ಅಂಕಗಳ ಪ್ರಕಟಣೆ ಮಾಡಲಾಗಿರುತ್ತದೆ. ಸಲ್ಲಿಕೆ ವರ್ಗಾವಣಾ ಅರ್ಜಿ ಸಲ್ಲಿಸುವುದು, ಅರ್ಜಿಗಳ/ಆದ್ಯತೆಗಳ ಪರಿಶೀಲನೆ, ಅರ್ಜಿಗಳ/ ಆದ್ಯತೆಗಳ ಅನುಮೋದನೆ/ತಿರಸ್ಕಾರ, ಕರಡು ಅರ್ಹ/ ಅನರ್ಹ(ಕಾರಣ ಸಹಿತ) ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸಿಲಿಂಗ್‌ ಪ್ರಕ್ರಿಯೆಗಳು ಇಲಾಖೆಯು ನಿಗದಿಪಡಿಸಿರುವ ಶಿಕ್ಷಕರ ವರ್ಗಾವಣಾ ತಂತ್ರಾಂಶದಲ್ಲಿಯೇ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.

                  ವರ್ಗಾವಣಾ ಅರ್ಜಿ ಸಲ್ಲಿಸುವುದು, ಅರ್ಜಿಗಳ/ಆದ್ಯತೆಗಳ ಪರಿಶೀಲನೆ, ಅರ್ಜಿಗಳ/ ಆದ್ಯತೆಗಳ ಅನುಮೋದನೆ/ತಿರಸ್ಕಾರ, ಕರಡು ಅರ್ಹ/ ಅನರ್ಹ(ಕಾರಣ ಸಹಿತ) ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸಿಲಿಂಗ್‌ ಪ್ರಕ್ರಿಯೆಗಳು ಇಲಾಖೆಯು ನಿಗದಿಪಡಿಸಿರುವ ಶಿಕ್ಷಕರ ವರ್ಗಾವಣಾ ತಂತ್ರಾಂಶದಲ್ಲಿಯೇ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.

                   ವರ್ಗಾವಣೆ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ಮಾರ್ಗಸೂಚಿ ಮತ್ತು ವೇಳಾಪಟ್ಟಿಯಲ್ಲಿನ ಎಲ್ಲಾ ಪದ, ನಮೂದು ಮತ್ತು ಉಲ್ಲೇಖಗಳು ವರ್ಗಾವಣೆ ಕಾಯ್ದೆ ಮತ್ತು ನಿಯಮಗಳಲ್ಲಿನ ವ್ಯಾಖ್ಯೆಯಂತೆಯೇ ಇರುತ್ತವೆ. ವರ್ಗಾವಣಾ ಕಾಯ್ದೆ ಮತ್ತು ನಿಯಮಗಳಲ್ಲಿನ ವ್ಯಾಖ್ಯಾನ ಪರಿಭಾಷೆಯನ್ನು ಮತ್ತು ಅರ್ಥವ್ಯಾಪ್ತಿಯನ್ನೇ ಅವು ಹೊಂದಿದ್ದು, ಪ್ರತ್ಯೇಕವಾದ ಅರ್ಥ ವಿವರಣೆ ಮತ್ತು ವ್ಯಾಪ್ತಿಯನ್ನು ಹೊಂದಿರುವುದಿಲ್ಲ. ಮಾರ್ಗಸೂಚಿ ಅಂಶಗಳು ಕೇವಲ ವರ್ಗಾವಣೆಗಳ ಆಡಳಿತ ನಿರ್ವಹಣೆಗಾಗಿ ಮತ್ತು ಶಿಕ್ಷಕರ ಆಕರ ಸೂಚನೆಗಾಗಿ ಮಾತ್ರ ಹೊರಡಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

                       ಅಧಿನಿಯಮ, ನಿಯಮಗಳು ಮತ್ತು ಕಾಲಕಾಲಕ್ಕೆ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆಗಳನ್ನು ಎಲ್ಲಾ ಹಂತದ ವರ್ಗಾವಣಾ ಪ್ರಾಧಿಕಾರಿಗಳು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು. ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ಹಾಗೂ ಶಿಕ್ಷಕರ ವರ್ಗಾವಣೆ ಕಾಯ್ದೆ/ನಿಯಮಗಳು-2020 ಮತ್ತು ತಿದ್ದುಪಡಿ ಕಾಯ್ದೆ/ನಿಯಮಗಳು-2022ರ ಪ್ರಕಾರ ಕ್ರಮವಹಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಿದೆ.

                 ಈ ಅಧಿಸೂಚನೆಯು, ತಾಂತ್ರಿಕ/ಆಡಳಿತಾತ್ಮಕ ಕಾರಣಗಳಿಂದಾಗಿ ವ್ಯತ್ಯಯಗಳುಂಟಾದಲ್ಲಿ ಅವಶ್ಯಕತೆಗೆ ಅನುಗುಣವಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟಿರುತ್ತದೆ. ಈ ಸಂಬಂಧ ವರ್ಗಾವಣಾ ಪ್ರಕ್ರಿಯೆಯನ್ನು ನಿರ್ವಹಿಸುವ ಸಲುವಾಗಿ ಮಾರ್ಗಸೂಚಿಯ ಅಂಶಗಳನ್ನು ಅನುಬಂಧ-1 ರಲ್ಲಿ ಮತ್ತು ಅನುಬಂಧ-2ರಲ್ಲಿ ವರ್ಗಾವಣಾ ವೇಳಾಪಟ್ಟಿಯನ್ನು ಹೊರಡಿಸಿದೆ.

                 ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 12 ಶಾಸನ 2020 ಬೆಂಗಳೂರು ದಿನಾಂಕ:27/03/2020 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ: ಇಪಿ 8 ಇಟಿಆರ್ 2020 ದಿನಾಂಕ:22/07/2020 ಹಾಗೂ ನಂತರದ ತಿದ್ದುಪಡಿ ಕಾಯ್ದೆ/ನಿಯಮಗಳು-2022ರ ಪ್ರಕಾರ ಮತ್ತು ಇಲಾಖಾ ಆದೇಶಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು, ಪ್ರಸ್ತಾಪಿತ ವರ್ಗಾವಣಾ ಪ್ರಕ್ರಿಯೆಗಳನ್ನು ಯಾವುದೇ ಲೋಪದೋಷಗಳಿಗೆ ಎಡೆಮಾಡಿಕೊಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸಿದೆ. ಒಂದು ವೇಳೆ ಇಲಾಖಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅರ್ಜಿಗಳ ಅನುಮೋದನೆ ಮತ್ತು ವರ್ಗಾವಣಾ ಕೌನ್ಸಿಲಿಂಗ್‌ನಲ್ಲಿ ಅಕ್ರಮಗಳು ಕಂಡುಬಂದಲ್ಲಿ ಅಂತಹ ಸಕ್ಷಮ ಪ್ರಾಧಿಕಾರದ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

CLICK & DOWNLOAD

SSLC Result 2025 | ಫಲಿತಾಂಶ ಪ್ರಕಟ..

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2024-25 ನೇ ಸಾಲಿನ SSLC ಪರೀಕ್ಷೆ-1 ರ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 02/05/2025ರಂದುಗ ಮದ್ಯಾಹ್ನ 12:30 ಗಂಟೆಗೆ  ಪ್ರಕಟಿಸಲಿದೆ.

SSLC Result 2025 | ಫಲಿತಾಂಶ ಪ್ರಕಟ..

ಫಲಿತಾಂಶ ಪರಿಶೀಲನೆ ಮಾಡುವ ವಿಧಾನ 
Step -1 :  ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಿ.
Step -2 : ಈ ಪೇಜ್‌ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
Step -3 : ಆ ನಂತರ, ತಮ್ಮ ಎಸ್‌ಎಸ್‌ಎಲ್‌ಸಿ Registration Number ಮತ್ತು Date of Birth ಟೈಪ್‌ ಮಾಡಬೇಕು.
Step -4 : 'Submit' ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶ ವೀಕ್ಷಿಸಿ.

 ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ
  Result Link Update Soon

Popular Post