ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

NMMS ಪರೀಕ್ಷೆಗೆ ಅರ್ಜಿ ಆಹ್ವಾನ 2021-22

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 04.01.2022

*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 20.01.2022

*ಪರೀಕ್ಷೆ ನಡೆಯುವ ದಿನಾಂಕ : 27.02.2022

@ಅರ್ಜಿ ಸಲ್ಲಿಸುವ ವಿಧಾನ@

*ಅರ್ಜಿ ಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

*ಸ್ವತಃ ಶಾಲೆಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು https://sslc.karnataka.gov.in/ ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ U-DISE  Code ಅನ್ನು User Name ಆಗಿ ಬಳಸಿ LOGIN ಆಗುವುದು ಕಡ್ಡಾಯವಾಗಿರುತ್ತದೆ,  ನಂತರ NTS  ಪರೀಕ್ಷೆಗೆ ಅರ್ಜಿ ಸಲ್ಲಿಸುವ Menu Click ಮಾಡುವುದು, ಆಗ ಅರ್ಜಿ ನಮೂನೆ Open ಆಗುತ್ತದೆ.

*ಮಂಡಳಿ ವತಿಯಿಂದ Default Password ನೀಡಲಾಗಿದ್ದು, ಮೊದಲ ಬಾರಿ Login ಆಗುವಾಗ Password ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ.

*ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ*(https://kseeb.karnataka.gov.in/NTSENMMS/views/loginpage.aspx)

 *ಅರ್ಜಿ ಸಲ್ಲಿಸುವಾಗ ತಾಂತ್ರಿಕ ಅಡಚಣೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ - ಕಛೇರಿ ಕರ್ತವ್ಯದ ಸಮಯದಲ್ಲಿ ದೂರವಾಣಿ ಸಂಖ್ಯೆ :080-23341615 ಕರೆ ಮಾಡುವುದು.

*ಶಾಲೆಯ ಫೋನ್ ನಂಬರ್ change ಮಾಡುವುದಿದ್ದರೆ change ಆದ mobile number ಹೊಂದಿರುವ ಮುಖ್ಯ ಶಿಕ್ಷಕರ ದೃಢೀಕರಣ ಮಾಡಿರುವ ಪತ್ರವನ್ನು scan ಮಾಡಿ ಈ ಕೆಳಗಿನ ಮೇಲ್ ID ಗೆ MAIL ಹಾಕುವುದು.ksqaacntsenmms@gmail.com 

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ school login ನಲ್ಲಿ challan generate ಆಗುತ್ತವೆ.

@NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

*ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು.

*ಪೋಷಕರ ವಾರ್ಷಿಕ ವರಮಾನ ಮಿತಿ ರೂ.1,50,000/-

*7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.55 ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

*ಪಂ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಶೇ.5 ರಷ್ಟು ವಿನಾಯಿತಿ.

@NMMS ಪರೀಕ್ಷೆಯ ಶುಲ್ಕದ ವಿವರ@

*ಸಾಮಾನ್ಯ, ಇತರೆ ಹಿಂದುಳಿದ ವರ್ಗ( ಆರ್ಥಿಕವಾಗಿ ಹಿಂದುಳಿದವರು) ರೂ.20-00

*ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ.10-00

 @ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

*NMMS ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು

*ಸದರಿ ಪರೀಕ್ಷೆಯು ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ, ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

*ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುವಂತಹ ಪರೀಕ್ಷೆಯಾಗಿದೆ.

*ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತದೆ.

*ಪತ್ರಿಕೆ 1-

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (MAT) 90 ನಿಮಿಷ, 90 ಪ್ರಶ್ನೆ, 90 ಅಂಕ.

*ಪತ್ರಿಕೆ 2-

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) 90 ನಿಮಿಷ, 90 ಪ್ರಶ್ನೆ, 90 ಅಂಕ.

ಸೂಚನೆ:- ವಿಕಲಚೇತನ ಮಕ್ಕಳಿಗೆ 30ನಿಮಿಷ ಹೆಚ್ಚುವರಿ ಸಮಯವಿರುತ್ತದೆ.

*ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಪ್ರತಿವರ್ಷ ₹12000/- ದಂತೆ 9ನೇ ತರಗತಿಯಿಂದ 12ನೇ ತರಗತಿ ವರೆಗೆ ಅಂದರೆ ನಾಲ್ಕು ವರ್ಷ ಶಿಷ್ಯವೇತನ ನೀಡಲಾಗುತ್ತದೆ.

 *Click Below ಲಿಂಕ್ & Download Circular*

®NMMS Circular 2021-22

®USER MANUAL FOR NMMS APPLICATION

®NMMS_FLOW CHART FOR APPLICATION 

*NMMS ನ MAT & SAT ಸಂಪೂರ್ಣ ಅಧ್ಯಯನ ವಸ್ತು/Study Material


ಭಾರತ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

Savitribai Phule Jayanti in Kannada ಅಕ್ಷರದ ಅವ್ವ - ಸಾವಿತ್ರಿಬಾಯಿ ಫುಲೆ

(ಜನೆವರಿ 3, 1831 - ಮಾರ್ಚ್ 10 1897)

 'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ಮಾತು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ ಎನ್ನುವುದನ್ನು ಸಾಬೀತುಪಡಿಸಿದ ಮಹಿಳೆಯರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುವವರು ಸಾವಿತ್ರಿ ಬಾಯಿ ಪುಲೆ, ಹೌದು ನಮ್ಮ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಮಹಿಳಾ ಸಮಾನತೆಯ ರೂವಾರಿ ಸಾವಿತ್ರಿಬಾಯಿ ಫುಲೆ. ಈ ಮಹಾ ತಾಯಿಯ ಬದುಕಿನ ಪರಿಚಯ, ಈ ಮಹಾನ್‌ ಹೋರಾಟಗಾರ್ತಿಯ ಸವಾಲುಗಳನ್ನು ಎದುರಿಸುವ ಛಲ ನಮ್ಮೆಲ್ಲ ಮಕ್ಕಳಿಗೂ ತಿಳಿಯಬೇಕು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ನಮ್ಮೆಲ್ಲ ಮಕ್ಕಳಲ್ಲಿ ಉಂಟಾಗಬೇಕು. ಆಗ ಮಾತ್ರ ಸಾವಿತ್ರಿ ಬಾಯಿ ಫುಲೆ ಜನುಮದಿನ ಆಚರಣೆ ಸಾರ್ಥಕತೆ ಪಡೆಯುತ್ತದೆ.


ಜನನ :-
ಸಾವಿತ್ರಿಬಾಯಿ ಫುಲೆ 1831 ಜನೆವರಿ 03 ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

ಭಾರತ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಕಿರುಕುಳ ಕಂಡು ಧೃತಿಗೆಡಲಿಲ್ಲ :-
      ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿ. ಆಧುನಿಕ ಶಿಕ್ಷಣದ ಜನನಿ. ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜೊತೆಗೆ ಸಾಹಿತಿ. ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಶಿಕ್ಷಕಿ ಅವರು. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಹದಿನಾಲ್ಕು ಶಾಲೆಗಳನ್ನು ಸ್ಥಾಪಿಸಿದವರು.

     ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದ ಸಾವಿತ್ರಿಬಾಯಿ ಫುಲೆ ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ. ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು... ಒಂದೇ ಎರಡೇ ಕಿರುಕುಳ.

        ಸಾಮಾನ್ಯ ಮಹಿಳೆಯಾಗಿದ್ದರೆ ಇವೆಲ್ಲಾ ಉಸಾಬರಿ ಏಕೆ ಬೇಕು ಎಂದು ಸುಮ್ಮನಾಗುತ್ತಿದ್ದರೇನೋ? ಆದರೆ ಸಾವಿತ್ರಿಬಾಯಿ ಫುಲೆ ಛಲ ಬಿಡದ ತ್ರಿವಿಕ್ರಮನಂತೆ ಬಂದದ್ದೆಲ್ಲವನ್ನೂ ಬಂಡೆಯಂತೆ ಗಟ್ಟಿಯಾಗಿ ನಿಂತು ಎದುರಿಸಿದರು. ಮೈ ಮೇಲೆ ಕೆಸರು, ಸಗಣಿ ಎರಚಿದಾಗ ಧೃತಿಗೆಡಲಿಲ್ಲ.

       ಕೈಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಬರುವ ಮೊದಲೇ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರ ಈ ಎಲ್ಲಾ ಹೋರಾಟದಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರು ಪತಿ ಜ್ಯೋತಿಬಾ ಅವರು. ಅವರಿಬ್ಬರದು ಪರಸ್ಪರ ಅವಲಂಬಿ ಬದುಕು.


ಪತಿಯೇ ಮೊದಲ ಗುರು :-
     ಅಂದಿನ ಕಾಲದ ಪದ್ಧತಿಯಂತೆ ಜ್ಯೋತಿಬಾ ಫುಲೆ ಅವರೊಂದಿಗೆ ಸಾವಿತ್ರಿಬಾಯಿ ಅವರ ಬಾಲ್ಯ ವಿವಾಹ ನಡೆಯಿತು. ಆಗ ಸಾವಿತ್ರಿಬಾಯಿ ಫುಲೆ ಅವರಿಗೆ ಎಂಟು ವರ್ಷವಾದರೆ, ಜ್ಯೋತಿಬಾ ಫುಲೆ ಅವರಿಗೆ ಹದಿಮೂರು ವರ್ಷ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಾವಿತ್ರಿಬಾಯಿ ಫುಲೆ ಅವರಿಗೆ ಪತಿಯೇ ಮೊದಲ ಗುರು. 1847ರಲ್ಲಿ ಮಿಚಲ್‌ ಅವರ ನಾರ್ಮಲ್‌ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದಾಗ ಸಾವಿತ್ರಿಬಾಯಿ ಫುಲೆ ಅವರಿಗೆ ಹದಿನೇಳು ವರ್ಷ. ಭಿಡೆಯವರ ಮನೆಯಲ್ಲಿ ಆರಂಭವಾದ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿ ಅವರು.

ಭಾರತದ ಮೊದಲ ಶಿಕ್ಷಕಿ :-

      1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದು. ಬ್ರಿಟಿಷ್‌ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಮಾಜಕ್ಕೇ ಶಿಕ್ಷಕಿಯಾದವರು ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು.

   ಜ್ಯೋತಿಬಾ ಫುಲೆ ಅವರ ತತ್ವ, ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡು ಜೀವನಪೂರ್ತಿ ಪತಿಗೆ ಬೆಂಗಾವಲಾಗಿ ನಿಂತರು. ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಲೇ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾ ಹೋದರು. ಮಕ್ಕಳಿರದ ಈ ದಂಪತಿಗಳು ವಿಧವೆಯ ಮಗ ಯಶವಂತನನ್ನು ದತ್ತು ತೆಗೆದುಕೊಂಡರು.

    1873 ರಲ್ಲಿ ಅನಾಥ ಮಕ್ಕಳಿಗೆ ಶಿಶುಕೇಂದ್ರ ತೆರೆಯುವುದರ ಜೊತೆಗೆ ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಭಿನ್ನವಾದ ಶಿಶುಕೇಂದ್ರಗಳನ್ನು ಪ್ರಾರಂಭಿಸಿ ಅವರಿಗೂ ಬದುಕು ಕಟ್ಟಿಕೊಟ್ಟರು. 150 ವರ್ಷಗಳ ಹಿಂದೆಯೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ ಕೊಡುವ ಯೋಜನೆ ಆರಂಭಿಸಿದರು.

      ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಲು ಇವರ ಕೊಡುಗೆ ದೊಡ್ಡದು. ಸಾವಿತ್ರಿಯವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು. 1854ರಲ್ಲಿ ಕಾವ್ಯ ಫäಲೆ (ಕಾವ್ಯ ಅರಳಿದೆ) ಕವನ ಸಂಕಲನದ ಮೂಲಕ 19ನೇ ಶತಮಾನದ ಸಮಾಜವನ್ನು ಚಿತ್ರಿಸುವ ಪ್ರಯತ್ನ ಮಾಡಿದರು. 1891ರಲ್ಲಿ ಭವನ ಕಾಶಿ ಸುಬೋಧ ರತ್ನಾಕರ (ಅಪ್ಪಟ ಮುತ್ತುಗಳ ಸಾಗರ) ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆ, 1892ರಲ್ಲಿ ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿ ಹಾಗೂ ಕಜ್‌ರ್‍ (ಸಾಲ) ಸಾವಿತ್ರಿ ಬಾಯಿಯವರ ಸಾಹಿತ್ಯ ರಚನೆಯಿಂದ ಹೊರಹೊಮ್ಮಿದ ಸಾಮಾಜಿಕ ಕೃತಿಗಳು.

Savitribai-Phule-deshada-modala-shikshaki
ಪುಣೆಯಲ್ಲಿ ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ

ರೋಗಿಗಳ ಸೇವೆಯಲ್ಲಿ ಪ್ರಾಣಾರ್ಪಣೆ :-
        ಪಶ್ಚಿಮ ಮಹಾರಾಷ್ಟ್ರದ ಕ್ಷಾಮಪೀಡಿತ ಪ್ರದೇಶಗಳಲ್ಲಿ ಎರಡು ವರ್ಷಗಳ ಕಾಲ ಸಾವಿತ್ರಿಬಾಯಿ ಕಾರ್ಯನಿರ್ವಹಿಸಿದರು. 1897ರ ಮಾರ್ಚ್ 10ರಂದು ಪ್ಲೇಗ್‌ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಸ್ವತಃ ಆ ರೋಗಕ್ಕೆ ಬಲಿಯಾದರು. ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ.

     ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನೂ ಒಮ್ಮೆ ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬ ಭಾವನೆ ಮೂಡುವುದು ಅತ್ಯಂತ ಸಹಜ. ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ. ಆ ಮಹಾನ್‌ ಚೇತನಕ್ಕೆ ನನ್ನ ಪ್ರಣಾಮಗಳು.

*ಎಲ್ಲರಿಗೂ ಸಾವಿತ್ರಿಬಾಯಿ ಫುಲೆರವರ ಜನುಮದಿನದ ಶುಭಾಶಯಗಳು*

9ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 9ನೇ ತರಗತಿ ಸಮಾಜ ವಿಜ್ಞಾನ 2 ಭಾಗಗಳ ವಿಡಿಯೋ ಪಾಠಗಳು..
ಇತಿಹಾಸ
3. ಮತಪ್ರವರ್ತಕರು ಮತ್ತು ಸಮಾಜ ಸುಧಾರಕರು
5. ಮೊಘಲರು ಮತ್ತು ಮರಾಠರು
6. ಭಕ್ತಿಪಂಥ
7. ಮಧ್ಯಯುಗದ ಯುರೋಪ್
8. ಆಧುನಿಕ ಯುರೋಪ್
9. ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ
ರಾಜ್ಯಶಾಸ್ತ್ರ
4. ನ್ಯಾಯಾಂಗ ವ್ಯವಸ್ಥೆ
5. ಭಾರತದ ಚುನಾವಣಾ ವ್ಯವಸ್ಥೆ
7. ರಾಷ್ಟ್ರೀಯ ಭಾವೈಕ್ಯತೆ
ಸಮಾಜಶಾಸ್ತ್ರ
3. ಸಾಮಾಜಿಕ ಬದಲಾವಣೆ
4. ಸಮುದಾಯ
ಭೂಗೋಳಶಾಸ್ತ್ರ
4. ಕರ್ನಾಟಕದ ಜಲ ಸಂಪನ್ಮೂಲಗಳು
6. ಕರ್ನಾಟಕದ ಖನಿಜ ಸಂಪನ್ಮೂಲಗಳು
7. ಕರ್ನಾಟಕದ ಸಾರಿಗೆ
8. ಕರ್ನಾಟಕದ ಕೈಗಾರಿಕೆಗಳು
9. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು
10. ಕರ್ನಾಟಕದ ಜನಸಂಖ್ಯೆ
ಅರ್ಥಶಾಸ್ತ್ರ
2. ಭಾರತದ ಮಾನವ ಸಂಪನ್ಮೂಲಗಳು
3. ಬಡತನ ಮತ್ತು ಹಸಿವು
4. ಶ್ರಮ ಹಾಗೂ ಉದ್ಯೋಗ
ವ್ಯವಹಾರ ಅಧ್ಯಯನ
2. ಹಣಕಾಸಿನ ನಿರ್ವಹಣೆ
3. ವ್ಯವಹಾರ ಶಾಸ್ತ್ರದಲ್ಲಿ ಲೆಕ್ಕಬರಹ

10ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

 ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 10ನೇ ತರಗತಿ ಸಮಾಜ ವಿಜ್ಞಾನ 2 ಭಾಗಗಳ ವಿಡಿಯೋ ಪಾಠಗಳು...

ಇತಿಹಾಸ

1. ಭಾರತಕ್ಕೆ ಯುರೋಪಿಯನ್ನರ ಆಗಮನ

2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ(ಭಾಗ-1)

     ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ(ಭಾಗ-2)

3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು(ಭಾಗ-1)

     ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು(ಭಾಗ-2)

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು (ಭಾಗ-1)

 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು (ಭಾಗ-2)

5. ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳವಳಿಗಳು (ಭಾಗ-1)

ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳವಳಿಗಳು (ಭಾಗ-2)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857(ಭಾಗ-1)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857(ಭಾಗ-2)

7. ಸ್ವಾತಂತ್ರ್ಯ ಹೋರಾಟ

8. ಗಾಂಧಿ ಯುಗ & ರಾಷ್ಟ್ರೀಯ ಹೋರಾಟ

9. ಸ್ವಾತಂತ್ರ್ಯೋತ್ತರ ಭಾರತ

10. 20ನೇ ಶತಮಾನದ ರಾಜಕೀಯ ಆಯಾಮಗಳು

ರಾಜ್ಯಶಾಸ್ತ್ರ

1. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು(ಭಾಗ-1)

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು(ಭಾಗ-2)

2. ಭಾರತದ ವಿದೇಶಾಂಗ ನೀತಿ

3. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಪರ್ಕ

4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ

5. ಜಾಗತಿಕ ಸಂಸ್ಥೆಗಳು


ಸಮಾಜಶಾಸ್ತ್ರ

1. ಸಾಮಾಜಿಕ ಸ್ತರವಿನ್ಯಾಸ

2. ದುಡಿಮೆ

3. ಸಾಮಾಜಿಕ ಚಳವಳಿಗಳು

4. ಸಾಮಾಜಿಕ ಸಮಸ್ಯೆಗಳು

ಭೂಗೋಳ

1. ಭಾರತದ ಸ್ಥಾನ ಮತ್ತು ವಿಸ್ತೀರ್ಣ

2. ಭಾರತದ ಮೇಲ್ಮೈ ಲಕ್ಷಣಗಳು

3. ಭಾರತದ ವಾಯುಗುಣ

4. ಭಾರತದ ಮಣ್ಣುಗಳು

5. ಭಾರತದ ಅರಣ್ಯ ಸಂಪತ್ತು

6. ಭಾರತದ ಜಲ ಸಂಪನ್ಮೂಲಗಳು(ಭಾಗ-1)

    ಭಾರತದ ಜಲ ಸಂಪನ್ಮೂಲಗಳು(ಭಾಗ-2)

7. ಭಾರತದ ಭೂ ಸಂಪನ್ಮೂಲಗಳು(ಭಾಗ-1)

     ಭಾರತದ ಭೂ ಸಂಪನ್ಮೂಲಗಳು(ಭಾಗ-2)

8. ಭಾರತದ ಖನಿಜ & ಶಕ್ತಿ ಸಂಪನ್ಮೂಲಗಳು

9. ಭಾರತದ ಸಾರಿಗೆ & ಸಂಪರ್ಕ

10. ಭಾರತದ ಕೈಗಾರಿಕೆಗಳು

11. ಭಾರತದ ನೈಸರ್ಗಿಕ ವಿಪತ್ತುಗಳು

12. ಭಾರತದ ಜನಸಂಖ್ಯೆ

ಅರ್ಥಶಾಸ್ತ್ರ

1. ಅಭಿವೃದ್ಧಿ

2. ಗ್ರಾಮೀಣ ಅಭಿವೃದ್ಧಿ

3. ಹಣ ಮತ್ತು ಸಾಲ

4. ಸಾರ್ವಜನಿಕ ಹಣಕಾಸು & ಆಯವ್ಯಯ

ವ್ಯವಹಾರ ಅಧ್ಯಯನ

1. ಬ್ಯಾಂಕಿನ ವ್ಯವಹಾರಗಳು(ಭಾಗ-1)

    ಬ್ಯಾಂಕಿನ ವ್ಯವಹಾರಗಳು(ಭಾಗ-2)

2. ಉದ್ಯಮಗಾರಿಕೆ(ಭಾಗ-1)

    ಉದ್ಯಮಗಾರಿಕೆ(ಭಾಗ-2)

3. ವ್ಯವಹಾರದ ಜಾಗತೀಕರಣ

4. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

5ನೇ ತರಗತಿ ಪರಿಸರ ಅಧ್ಯಯನ ಸಂವೇದ ಇ-ಕ್ಲಾಸ್ 2021-22

 ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ಪರಿಸರ ಅಧ್ಯಯನ ವಿಡಿಯೋ ಪಾಠಗಳು..

ಪಾಠಗಳು

1. ಜೀವ ಪ್ರಪಂಚ(ಭಾಗ-1)

    ಜೀವ ಪ್ರಪಂಚ(ಭಾಗ-2)

2. ಕುಟುಂಬ(ಭಾಗ-1)

    ಕುಟುಂಬ(ಭಾಗ-2)

3. ಸಮುದಾಯ(ಭಾಗ-1)

    ಸಮುದಾಯ(ಭಾಗ-2)

4. ಸಮುದಾಯ-ಕ್ರೀಡೆಗಳು

5. ನೈಸರ್ಗಿಕ ಸಂಪನ್ಮೂಲಗಳು(ಭಾಗ-1)

     ನೈಸರ್ಗಿಕ ಸಂಪನ್ಮೂಲಗಳು(ಭಾಗ-2)

6. ವಾಯು

7. ನೀರು(ಭಾಗ-1)

    ನೀರು(ಭಾಗ-2)

8. ಕೃಷಿ(ಭಾಗ-1)

    ಕೃಷಿ(ಭಾಗ-2)

    ಕೃಷಿ(ಭಾಗ-3)

    ಕೃಷಿ(ಭಾಗ-4)

9. ಆಹಾರ - ಜೀವದ ಜೀವಾಳ(ಭಾಗ-1)

     ಆಹಾರ - ಜೀವದ ಜೀವಾಳ(ಭಾಗ-2)

     ಆಹಾರ - ಜೀವದ ಜೀವಾಳ(ಭಾಗ-3)

10. ಜನವಸತಿಗಳು

11. ವಸ್ತುಸ್ವರೂಪ(ಭಾಗ-1)

      ವಸ್ತುಸ್ವರೂಪ(ಭಾಗ-2)

12.ಧಾತು,ಸಂಯುಕ್ತ & ಮಿಶ್ರಣಗಳು

13. ವಿಸ್ಮಯ ಶಕ್ತಿ(ಭಾಗ-1)

      ವಿಸ್ಮಯ ಶಕ್ತಿ(ಭಾಗ-2)

      ವಿಸ್ಮಯ ಶಕ್ತಿ(ಭಾಗ-3)

      ವಿಸ್ಮಯ ಶಕ್ತಿ(ಭಾಗ-4)

14. ಬಾನಂಗಳ(ಭಾಗ-1)

       ಬಾನಂಗಳ(ಭಾಗ-2)

15. ನಮ್ಮ ಭಾರತ - ಪ್ರಾಕೃತಿಕ ವೈವಿಧ್ಯ(ಭಾಗ-1)

         ನಮ್ಮ ಭಾರತ - ಪ್ರಾಕೃತಿಕ ವೈವಿಧ್ಯ(ಭಾಗ-2)

16. ನಮ್ಮ ಭಾರತ - ರಾಜಕೀಯ & ಸಾಂಸ್ಕೃತಿಕ(ಭಾಗ-1)

ನಮ್ಮ ಭಾರತ - ರಾಜಕೀಯ &  ಸಾಂಸ್ಕೃತಿಕ(ಭಾಗ-2)