ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

6ನೇ ತರಗತಿ ಪಾಠ - ೧. ದೊಡ್ಡವರ ದಾರಿ

ಗದ್ಯಭಾಗ

೧. ದೊಡ್ಡವರ ದಾರಿ

#ಲೇಖಕರ ಪರಿಚಯ:
ಲೇಖಕರ ಹೆಸರು :   ಬೆ. ಗೋ ರಮೇಶ್

ಜನನ : 1945 ಆಗಸ್ಟ್ 22 , ಮೈಸೂರು ಜಿಲ್ಲೆ  ಕೃಷ್ಣರಾಜನಗರ ತಾಲ್ಲೂಕಿನ ದೊಡ್ಡಹನಸೋಗೆ ಗ್ರಾಮ.

ತಂದೆ : ಬಿ.ಎಸ್ . ಗೋವಿಂದರಾಜು 
ತಾಯಿ : ರಾಧಮ್ಮ

ವಿದ್ಯಾಭ್ಯಾಸ : ಬಿ.ಇ. ಪಧವೀದರರು 
ವೃತ್ತಿ  : ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು , ಕ.ವಿ.ನಿ. 
ಪ್ರವೃತ್ತಿ : ಸಾಹಿತಿ ಭಾಷಾಂತರಕಾರ , ಗಮಕಿ

ಪ್ರಮುಖ ಕೃತಿಗಳು :
'ವಿಶ್ವವಿಖ್ಯಾತ ಮಹಿಳೆಯರು', 'ನಮ್ಮ ಗಮಕಿಗಳು', 'ಕನ್ನಡ ಕವಿರತ್ನತ್ರಯರು', 'ವಚನಸಾಗ'.
ವಿಜ್ಞಾನಿಗಳ & ದೇಶಭಕ್ತರ ಜೀವನ ಚರಿತ್ರೆಗಳು, .
ಕನ್ನಡದಲ್ಲಿ 500 ಕ್ಕಿಂತಲೂ ಹೆಚ್ಚು ಕೃತಿಗಳ ರಚಿಸಿದ್ದಾರೆ.

ಪಡೆದ ಪ್ರಶಸ್ತಿಗಳು :
ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 600 ವಚನಗಳ ಸಂಕಲನ 'ವಚನಸಾಗರ' ಕೃತಿಗೆ
ಸರ್ ಎಂ.ವಿ. ನವರತ್ನ ಪ್ರಶಸ್ತಿ , ಡೆಪ್ಯುಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ.

ಪಾಠದ ಆಯ್ಕೆ : "ಪ್ರಸಿದ್ಧ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ".
ವಚನಗಳು ಅಂಕಿತನಾಮ : ಶಾಂತಿಪ್ರಿಯ

ಅಭ್ಯಾಸಗಳು
ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ. 
೧. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.
೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.
೩. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.
೪. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.

ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ.
೧. ರಾಷ್ಟ್ರಪತಿ : ‘ಡಾ. ಸರ್ವಪಳ್ಳಿ ರಾಧಾಕೃಷ್ಣನ್  ಭಾರತದ ಎರಡನೆಯ  ರಾಷ್ಟ್ರಪತಿಗಳಾಗಿದ್ದರು.
೨. ಕಾಸು : ಕಾಸು ಈಗ ಚಲಾವಣೆಯಲ್ಲಿ ಇಲ್ಲ .
೩. ಶಿಸ್ತು : ಪ್ರತಿಯೊಬ್ಬರ ಜೀವನದಲ್ಲೂ ಶಿಸ್ತು ಬೆಳೆಸಿಕೊಳ್ಳಬೇಕು.
೪. ದಾರಿ : ನಾವು ಸರಿಯಾದ ದಾರಿಯಲ್ಲಿ ನಡೆದರೆ ಗುರಿ ತಲುಪಬಹುದು. 

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 
೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು? 
ಉತ್ತರ : ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?
ಉತ್ತರ : ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸು ಕೊಟ್ಟರು. 
೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು? 
ಉತ್ತರ : ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು. 
೪. ಜಾಮಿಯಾ ಮಿಲಿಯಾ ಎಲ್ಲಿದೆ? 
ಉತ್ತರ : ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.
೫. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು? 
ಉತ್ತರ : ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಮಾಡುವವನ ವೇಷ ಹಾಕಿದರು . 

ಈ. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?
೧. “ನೋಡಿ ಮಕ್ಕಳೇ, ಪುಸ್ತಕಗಳು ಜ್ಞಾನ ಭಂಡಾರ.” 
ಉತ್ತರ : ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು. 
೨. “ತಾತಾ, ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ .” 
ಉತ್ತರ : ಮಕ್ಕಳು  ರಾಜೇಂದ್ರ ಪ್ರಸಾದರಿಗೆ ಈ ಮಾತನ್ನು ಹೇಳಿದರು.

ಉ. ಕೆಳಗಿನ ಪ್ರಶ್ನೆಗಳಿಗೆ 3 - 4 ವಾಕ್ಯಗಳಲ್ಲಿ ಉತ್ತರಿಸಿರಿ.
೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.
ಉತ್ತರ : ರಾಜೇಂದ್ರ ಪ್ರಸಾದ್ ಅವರ ಜೀವನವು, ಜನಕ ಮಹಾರಾಜನಂತೆ ಋಷಿ ಸದೃಶ ಜೀವನವಾಗಿತ್ತು.
ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದು ಬಾಳಿನಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆಗಳಿಗೆ ಭಾರಿ ಮಹತ್ವ ನೀಡುತ್ತಿದ್ದರು. ಅಲ್ಲದೆ ತಾವು 'ಜನರ ಸೇವಕ' ಎಂದು ಹೇಳಿಕೊಳ್ಳುತ್ತಿದ್ದರು.
೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು? 
ಉತ್ತರ : ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಜಾಕಿರ್ ಹುಸೇನ್‌ರವರು ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಷದಲ್ಲಿ , ಕೈಯಲ್ಲಿ ಪಾಲಿಶ್ ಡಬ್ಬಿ , ಬ್ರಷ್ ಹಿಡಿದು ಕುಳಿತು, ಒಂದಿಬ್ಬರು ವಿದ್ಯಾರ್ಥಿಗಳ ಬೂಟ್ ಪಾಲಿಶ್ ಕೂಡ ಮಾಡಿದ್ದರು.

ಊ. ವಚನ ಬದಲಿಸಿ ಬರೆಯಿರಿ.
೧.  ಗಿಡ    –    ಗಿಡಗಳು
೨. ತಮ್ಮಂದಿರು  –  ತಮ್ಮ
೩. ಪತ್ರಗಳು     –   ಪತ್ರ 
೪. ಮಗು        –   ಮಕ್ಕಳು 

ಋ. ಪುಲ್ಲಿಂಗ / ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ. 
೧. ಅವನು  -  ಅವಳು 
೨. ಇವಳು   -  ಇವಳು 
೩. ಗೌಡತಿ  -  ಗೌಡ 
೪. ಶರಣ   -  ಶರಣೆ
 
ಎ. ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ.
೧. ಅನ್ವರ್ಥನಾಮ
 1. ರೈತ    2. ಕುಂಟ    3. ಶಿಕ್ಷಕ    4. ವ್ಯಾಪಾರಿ

೨. ರೂಢನಾಮ  
1. ನದಿ  2. ದೇಶ  3. ಪರ್ವತ  4. ಶಾಲೆ

೩. ಅಂಕಿತನಾಮ 
1. ರಾಮ  2. ಅಂಬಿಕಾತನಯದತ್ತ 
3. ಕಿತ್ತೂರ ಚನ್ನಮ್ಮ   4. ಕಾವೇರಿ ನದಿ

6ನೇ ತರಗತಿ ಕನ್ನಡ ಸಂವೇದ ಇ-ಕ್ಲಾಸ್ 2021-22

             ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ಕನ್ನಡ  ವಿಡಿಯೋ ಪಾಠಗಳು..

ಗದ್ಯ 

1. ದೊಡ್ಡವರ ದಾರಿ 

2. ಗಂಧರ್ವಸೇನ(ಭಾಗ-1)

      ಗಂಧರ್ವಸೇನ(ಭಾಗ-2)

3. ಕೃಷ್ಣ-ಸುಧಾಮ(ನಾಟಕ)(ಭಾಗ-1)

     ಕೃಷ್ಣ-ಸುಧಾಮ(ನಾಟಕ)(ಭಾಗ-2)

     ಕೃಷ್ಣ-ಸುಧಾಮ(ನಾಟಕ)(ಭಾಗ-3)

4. ಡಾ. ರಾಜಕುಮಾರ

5. ಧನ್ಯವಾದ ಹೇಳಿದ ಕೊಕ್ಕರೆ

6. ಮೆರವಣಿಗೆ(ಭಾಗ-1)

    ಮೆರವಣಿಗೆ(ಭಾಗ-2)

7. ಯಾಣ ಕುರಿತೊಂದು ಪತ್ರ

8. ಕರ್ನಾಟಕ ಏಕೀಕರಣ

ಪದ್ಯ 

1. ಬೇಸಿಗೆ

2. ಮಂಗಳ ಗ್ರಹದಲ್ಲಿ ಪುಟ್ಟಿ(ಭಾಗ -1)

     ಮಂಗಳ ಗ್ರಹದಲ್ಲಿ ಪುಟ್ಟಿ(ಭಾಗ-2)

3. ನೀ ಹೋದ ಮರುದಿನ

4. ಮಗು ಮತ್ತು ಹಣ್ಣುಗಳು

5. ಹೊಸಬಾಳು

6. ಗಂಗವ್ವತಾಯಿ

7. ಹೃದಯ ವಚನಗಳು

8. ಕಿತ್ತೂರ ಕೇಸರಿ

6, 7, 8ನೇ ತರಗತಿ ಕನ್ನಡ & ಸಮಾಜ ವಿಜ್ಞಾನ 'ಸೇತುಬಂಧ' ಸಾಹಿತ್ಯ.

 6, 7, 8ನೇ ತರಗತಿಯ ಕನ್ನಡ ಮತ್ತು ಸಮಾಜ-ವಿಜ್ಞಾನ ವಿಷಯದ ಸಾಮರ್ಥ್ಯಗಳು, ಪೂರ್ವ ಪರೀಕ್ಷೆ & ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು.

CLICK & DOWNLOAD 

ಮಾದರಿಗಾಗಿ ಬಳಸಿ

6ನೇ ತರಗತಿ ಕನ್ನಡ ಸಂವೇದ ಇ-ಕ್ಲಾಸ್

   ಕರ್ನಾಟಕ ಸರ್ಕಾರದ  ಶಿಕ್ಷಣ ಇಲಾಖೆ  ಹಾಗೂ DSERT ಸಹಕಾರದೊಂದಿಗೆ‌ ದಿನಾಂಕ 23/11/2020 ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ 'ಸಂವೇದ ಇ-ಕ್ಲಾಸ್' ನ   6ನೇ ತರಗತಿಯ ಕನ್ನಡ  ಪಾಠಗಳನ್ನು ವೀಕ್ಷಿಸಲು ದಿನಾಂಕಗಳ ಮೇಲೆ CLICK ಮಾಡಿ ನಿಮಗೆ ಬೇಕಾದ ಪಾಠವನ್ನು ನೋಡಬಹುದು. 

*6ನೇ ತರಗತಿ ಕನ್ನಡ*  

  ಕ್ರ.

   ಸಂ

ಪಾಠದ ಹೆಸರು

ದಿನಾಂಕ (ಭಾಗ-1)

ದಿನಾಂಕ (ಭಾಗ-2)

ದಿನಾಂಕ (ಭಾಗ-3)

ಗದ್ಯಭಾಗ

01

ದೊಡ್ಡವರ ದಾರಿ

 26.11.2020

 **

 **

02

ಗಂಧರ್ವ ಸೇನ

 17.12.2020

 24.12.2020*

*

03

ಕೃಷ್ಣ-ಸುಧಾಮ(ನಾಟಕ)

 **

 **

 **

04

ಡಾ. ರಾಜಕುಮಾರ್

 07.01.2021

 **

 **

05

ಧನ್ಯವಾದ ಹೇಳಿದ ಕೊಕ್ಕರೆ

 21.01.2021

 **

 **

06

ಮೆರವಣಿಗೆ

 04.02.2021

 

 **

07

ಯಾಣ ಕುರಿತೊಂದು ಪತ್ರ

 25.02.2021

 04.03.2021

 

08

ಕರ್ನಾಟಕ  ಏಕೀಕರಣ

 

 

 

ಪದ್ಯಭಾಗ

01

ಬೇಸಿಗೆ

 **

 **

 **

02

ಮಂಗಳ ಗ್ರಹದಲ್ಲಿ ಪುಟ್ಟಿ

 03.11.2020

 10.12.2020

 **

03

ನೀ ಹೋದ ಮರುದಿನ

 31.12.2020

 **

 **

04

ಮಗು ಮತ್ತು ಹಣ್ಣುಗಳು

 14.01.2021

**

 **

05

ಹೊಸಬಾಳು

 

 

 

06

ಗಂಗವ್ವತಾಯಿ

 28.01.2021

 **

 **

07

ಹೃದಯ ವಚನಗಳು

 18.02.2021

 **

 **

08

ಕಿತ್ತೂರ ಕೇಸರಿ