ಗದ್ಯಭಾಗ
೧. ದೊಡ್ಡವರ ದಾರಿ
#ಲೇಖಕರ ಪರಿಚಯ:
ಲೇಖಕರ ಹೆಸರು : ಬೆ. ಗೋ ರಮೇಶ್
ಜನನ : 1945 ಆಗಸ್ಟ್ 22 , ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲ್ಲೂಕಿನ ದೊಡ್ಡಹನಸೋಗೆ ಗ್ರಾಮ.
ತಂದೆ : ಬಿ.ಎಸ್ . ಗೋವಿಂದರಾಜು
ತಾಯಿ : ರಾಧಮ್ಮ
ವಿದ್ಯಾಭ್ಯಾಸ : ಬಿ.ಇ. ಪಧವೀದರರು
ವೃತ್ತಿ : ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು , ಕ.ವಿ.ನಿ.
ಪ್ರವೃತ್ತಿ : ಸಾಹಿತಿ ಭಾಷಾಂತರಕಾರ , ಗಮಕಿ
ಪ್ರಮುಖ ಕೃತಿಗಳು :
'ವಿಶ್ವವಿಖ್ಯಾತ ಮಹಿಳೆಯರು', 'ನಮ್ಮ ಗಮಕಿಗಳು', 'ಕನ್ನಡ ಕವಿರತ್ನತ್ರಯರು', 'ವಚನಸಾಗ'.
ವಿಜ್ಞಾನಿಗಳ & ದೇಶಭಕ್ತರ ಜೀವನ ಚರಿತ್ರೆಗಳು, .
ಕನ್ನಡದಲ್ಲಿ 500 ಕ್ಕಿಂತಲೂ ಹೆಚ್ಚು ಕೃತಿಗಳ ರಚಿಸಿದ್ದಾರೆ.
ಪಡೆದ ಪ್ರಶಸ್ತಿಗಳು :
ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 600 ವಚನಗಳ ಸಂಕಲನ 'ವಚನಸಾಗರ' ಕೃತಿಗೆ
ಸರ್ ಎಂ.ವಿ. ನವರತ್ನ ಪ್ರಶಸ್ತಿ , ಡೆಪ್ಯುಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ.
ಪಾಠದ ಆಯ್ಕೆ : "ಪ್ರಸಿದ್ಧ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ".
ವಚನಗಳು ಅಂಕಿತನಾಮ : ಶಾಂತಿಪ್ರಿಯ
ಅಭ್ಯಾಸಗಳು
ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ.
೧. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.
೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.
೩. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.
೪. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.
ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ.
೧. ರಾಷ್ಟ್ರಪತಿ : ‘ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಭಾರತದ ಎರಡನೆಯ ರಾಷ್ಟ್ರಪತಿಗಳಾಗಿದ್ದರು.
೨. ಕಾಸು : ಕಾಸು ಈಗ ಚಲಾವಣೆಯಲ್ಲಿ ಇಲ್ಲ .
೩. ಶಿಸ್ತು : ಪ್ರತಿಯೊಬ್ಬರ ಜೀವನದಲ್ಲೂ ಶಿಸ್ತು ಬೆಳೆಸಿಕೊಳ್ಳಬೇಕು.
೪. ದಾರಿ : ನಾವು ಸರಿಯಾದ ದಾರಿಯಲ್ಲಿ ನಡೆದರೆ ಗುರಿ ತಲುಪಬಹುದು.
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?
ಉತ್ತರ : ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?
ಉತ್ತರ : ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸು ಕೊಟ್ಟರು.
೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?
ಉತ್ತರ : ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು.
೪. ಜಾಮಿಯಾ ಮಿಲಿಯಾ ಎಲ್ಲಿದೆ?
ಉತ್ತರ : ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.
೫. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?
ಉತ್ತರ : ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಮಾಡುವವನ ವೇಷ ಹಾಕಿದರು .
ಈ. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?
೧. “ನೋಡಿ ಮಕ್ಕಳೇ, ಪುಸ್ತಕಗಳು ಜ್ಞಾನ ಭಂಡಾರ.”
ಉತ್ತರ : ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು.
೨. “ತಾತಾ, ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ .”
ಉತ್ತರ : ಮಕ್ಕಳು ರಾಜೇಂದ್ರ ಪ್ರಸಾದರಿಗೆ ಈ ಮಾತನ್ನು ಹೇಳಿದರು.
ಉ. ಕೆಳಗಿನ ಪ್ರಶ್ನೆಗಳಿಗೆ 3 - 4 ವಾಕ್ಯಗಳಲ್ಲಿ ಉತ್ತರಿಸಿರಿ.
೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.
ಉತ್ತರ : ರಾಜೇಂದ್ರ ಪ್ರಸಾದ್ ಅವರ ಜೀವನವು, ಜನಕ ಮಹಾರಾಜನಂತೆ ಋಷಿ ಸದೃಶ ಜೀವನವಾಗಿತ್ತು.
ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದು ಬಾಳಿನಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆಗಳಿಗೆ ಭಾರಿ ಮಹತ್ವ ನೀಡುತ್ತಿದ್ದರು. ಅಲ್ಲದೆ ತಾವು 'ಜನರ ಸೇವಕ' ಎಂದು ಹೇಳಿಕೊಳ್ಳುತ್ತಿದ್ದರು.
೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು?
ಉತ್ತರ : ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಜಾಕಿರ್ ಹುಸೇನ್‌ರವರು ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಷದಲ್ಲಿ , ಕೈಯಲ್ಲಿ ಪಾಲಿಶ್ ಡಬ್ಬಿ , ಬ್ರಷ್ ಹಿಡಿದು ಕುಳಿತು, ಒಂದಿಬ್ಬರು ವಿದ್ಯಾರ್ಥಿಗಳ ಬೂಟ್ ಪಾಲಿಶ್ ಕೂಡ ಮಾಡಿದ್ದರು.
ಊ. ವಚನ ಬದಲಿಸಿ ಬರೆಯಿರಿ.
೧. ಗಿಡ – ಗಿಡಗಳು
೨. ತಮ್ಮಂದಿರು – ತಮ್ಮ
೩. ಪತ್ರಗಳು – ಪತ್ರ
೪. ಮಗು – ಮಕ್ಕಳು
ಋ. ಪುಲ್ಲಿಂಗ / ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ.
೧. ಅವನು - ಅವಳು
೨. ಇವಳು - ಇವಳು
೩. ಗೌಡತಿ - ಗೌಡ
೪. ಶರಣ - ಶರಣೆ
ಎ. ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ.
೧. ಅನ್ವರ್ಥನಾಮ
1. ರೈತ 2. ಕುಂಟ 3. ಶಿಕ್ಷಕ 4. ವ್ಯಾಪಾರಿ
೨. ರೂಢನಾಮ
1. ನದಿ 2. ದೇಶ 3. ಪರ್ವತ 4. ಶಾಲೆ
೩. ಅಂಕಿತನಾಮ
1. ರಾಮ 2. ಅಂಬಿಕಾತನಯದತ್ತ
3. ಕಿತ್ತೂರ ಚನ್ನಮ್ಮ 4. ಕಾವೇರಿ ನದಿ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.