ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

6 ರಿಂದ 9ನೇ ತರಗತಿ SA-2 ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ 2026 ಪ್ರಕಟ | 6th-9th Std SA2 Revised Time Table

Karnataka 6th to 9th Std SA2 Revised Time Table 2026 - Official Circular Dt 09-03-2026

ಗಮನಿಸಿ: ದಿನಾಂಕ 09-03-2026 ರ ಇಲಾಖೆಯ ಹೊಸ ಸುತ್ತೋಲೆಯಂತೆ ವೇಳಾಪಟ್ಟಿಯನ್ನು ಇಲ್ಲಿ ಅಪ್‌ಡೇಟ್ ಮಾಡಲಾಗಿದೆ.

ನಮಸ್ಕಾರ ಶಿಕ್ಷಕರೇ, ವಿದ್ಯಾರ್ಥಿಗಳೇ ಮತ್ತು ಪೋಷಕರೇ,

​2025-26ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ (SA-2) (Summative Assessment) ನಡೆಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು (DSERT) ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ. ಈ ಪರೀಕ್ಷೆಯ ಪ್ರಮುಖ ಅಂಶಗಳು, ಉದ್ದೇಶಗಳು ಮತ್ತು ವೇಳಾಪಟ್ಟಿಯ ಸಮಗ್ರ ವಿವರಗಳು ಇಲ್ಲಿವೆ.

🎯 ಪರೀಕ್ಷೆಯ ಪ್ರಮುಖ ಉದ್ದೇಶಗಳು:

  • ಕಲಿಕಾ ಗುಣಮಟ್ಟ: ವಿದ್ಯಾರ್ಥಿಗಳಲ್ಲಿನ ಕಲಿಕಾ ನ್ಯೂನ್ಯತೆಯನ್ನು ಗುರುತಿಸಿ, ಕಲಿಕಾ ಫಲಾಧಾರಿತ ಗುಣಮಟ್ಟವನ್ನು ಉತ್ತಮಪಡಿಸುವುದು.
  • ಭಯಮುಕ್ತ ಪರೀಕ್ಷೆ: ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡುವುದು.
  • ಉತ್ತೇಜನ: ಈ ಮೌಲ್ಯಾಂಕನವು ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಉದ್ದೇಶವನ್ನು ಹೊಂದಿಲ್ಲ, ಬದಲಿಗೆ ಅವರ ಪ್ರಗತಿಯನ್ನು ಅಳೆಯುವ ವೇದಿಕೆಯಾಗಿದೆ.

📝 ಪರೀಕ್ಷಾ ಮಾದರಿ ಮತ್ತು ಸಿದ್ಧತೆ:

  • ​ಈ ಪರೀಕ್ಷೆಯು ಪಾಠಾಧಾರಿತ ಮೌಲ್ಯಾಂಕನವನ್ನು (LBA) ಆಧರಿಸಿರುತ್ತದೆ.
  • ​ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಕೀ ಉತ್ತರಗಳು ಈಗಾಗಲೇ DSERT ಮತ್ತು KSQAAC ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.
  • ​ಕನ್ನಡ ಮತ್ತು ಇತರ ಮಾಧ್ಯಮಗಳ ಪ್ರಮುಖ ವಿಷಯಗಳಿಗೆ ಇಲಾಖೆಯಿಂದಲೇ ಅಧಿಕೃತ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ.

6 ರಿಂದ 9ನೇ ತರಗತಿ SA-2 ಪರಿಷ್ಕೃತ ವೇಳಾಪಟ್ಟಿ (ಮಾರ್ಚ್ - ಏಪ್ರಿಲ್ 2026)

📅 ಪರೀಕ್ಷಾ ದಿನಾಂಕಗಳು ಮತ್ತು ವಿಷಯಗಳು
ದಿನಾಂಕ ವಾರ 6 & 7ನೇ 8ನೇ 9ನೇ
24-03-2026 ಮಂಗಳ ಭಾಷೆ-1 ಭಾಷೆ-1 ಭಾಷೆ-1
26-03-2026 ಗುರು ಗಣಿತ ಸಮಾಜ ವಿಜ್ಞಾನ
27-03-2026 ಶುಕ್ರ ಭಾಷೆ-2 ಭಾಷೆ-2 ಭಾಷೆ-2
01-04-2026 ಬುಧ ಸಮಾಜ ಗಣಿತ ಸಮಾಜ
04-04-2026 ಶನಿ ವಿಜ್ಞಾನ ವಿಜ್ಞಾನ ಗಣಿತ
06-04-2026 ಸೋಮ ಭಾಷೆ-3 ಭಾಷೆ-3 ಭಾಷೆ-3
⏱️ ಪರೀಕ್ಷಾ ಸಮಯ ಮತ್ತು ಅಂಕಗಳು
ತರಗತಿ ಸಮಯ ಅಂಕಗಳು
6 & 7ನೇ11:30 - 01:0040
8ನೇ ತರಗತಿ11:00 - 01:0050
9ನೇ ತರಗತಿ11:00 - 02:1580/100*
* 9ನೇ ತರಗತಿ ಪ್ರಥಮ ಭಾಷೆ ಪರೀಕ್ಷೆ ಮಾತ್ರ 100 ಅಂಕಗಳು.

🏖️ ರಜೆ ದಿನಗಳ ವಿವರ
ಮಾರ್ಚ್ 2026: 25, 28, 29, 30, 31
ಏಪ್ರಿಲ್ 2026: 02, 03, 05 

(SSLC ಪರೀಕ್ಷೆ, ಭಾನುವಾರ ಹಾಗೂ ಹಬ್ಬದ ರಜೆಗಳು)


📄 ಪರಿಷ್ಕೃತ ವೇಳಾಪಟ್ಟಿ ಡೌನ್‌ಲೋಡ್ ಮಾಡಿ

​ಸಾರ್ವಜನಿಕ ಶಿಕ್ಷಣ ಇಲಾಖೆಯು (DSERT) ಹೊರಡಿಸಿರುವ 6 ರಿಂದ 9ನೇ ತರಗತಿಯ SA-2 ಪರೀಕ್ಷೆಯ ಅಧಿಕೃತ ಸುತ್ತೋಲೆಯ PDF ಪ್ರತಿಯನ್ನು ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:

​​[DOWNLOAD PDF]


ವಿದ್ಯಾರ್ಥಿಗಳಿಗೆ ಸೂಚನೆ: ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ಧರಾಗಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಈ ಕೆಳಗೆ ಕ್ಲಿಕ್ ಮಾಡಿ.

DSERT Class 6-9 SA-2 Model Papers & Key Answers | ಮಾದರಿ ಪ್ರಶ್ನೆ ಪತ್ರಿಕೆ


​ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ! 💐


🔍 ಇನ್ನಷ್ಟು ಮಾಹಿತಿ ಬೇಕೇ? ಇಲ್ಲಿದೆ ನೋಡಿ!

ನಮ್ಮ ಬ್ಲಾಗ್‌ನಲ್ಲಿರುವ ಸಾವಿರಾರು ಶೈಕ್ಷಣಿಕ ಮಾಹಿತಿಗಳಿಗಾಗಿ ಇಲ್ಲಿ ಹುಡುಕಿ.

ಅಥವಾ ಗೂಗಲ್‌ನಲ್ಲಿ "Vivek Jyothi" ಎಂದು ಸರ್ಚ್ ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.