- ಕೊನೆಯದಾಗಿ ಅಪ್‌ಡೇಟ್ ಮಾಡಿದ ದಿನಾಂಕ: 22/04/2026
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025-26ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 23/04/2026ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆಯಲು ಕೆಳಗಿನ ಅಧಿಕೃತ ಲಿಂಕ್‌ಗಳನ್ನು ಬಳಸಬಹುದು.
💻 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸುಲಭವಾಗಿ ಅಂಕಗಳನ್ನು ತಿಳಿಯಲು ಈ ಹಂತಗಳನ್ನು ಅನುಸರಿಸಿ:
Step -1 : ಅಧಿಕೃತ ವೆಬ್‌ಸೈಟ್ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಿ.
Step -2 : ಈ ಪೇಜ್ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
Step -3 : ಆ ನಂತರ, ತಮ್ಮ ಎಸ್‌ಎಸ್‌ಎಲ್‌ಸಿ Registration Number ಮತ್ತು Date of Birth ಟೈಪ್ ಮಾಡಬೇಕು.
Step -4 : 'Submit' ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶ ವೀಕ್ಷಿಸಿ.
Step-5 : ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.
ಮುಂದಿನ ಕ್ರಮಗಳು:
- ಫಲಿತಾಂಶದ ಕುರಿತು ಏನಾದರೂ ತಾಂತ್ರಿಕ ದೋಷ ಕಂಡುಬಂದಲ್ಲಿ, ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ.
- ಫಲಿತಾಂಶ ಬಂದ ನಂತರ, ಉನ್ನತ ಶಿಕ್ಷಣಕ್ಕಾಗಿ (PUC) ಪ್ರವೇಶಾತಿ ಪ್ರಕ್ರಿಯೆಯ ಬಗ್ಗೆ ನಮ್ಮ ಬ್ಲಾಗ್‌ನಲ್ಲಿ ಮಾಹಿತಿ ಪಡೆಯುತ್ತಿರಿ.
ಗಮನಿಸಿ: ವೆಬ್‌ಸೈಟ್‌ನಲ್ಲಿ ಹೆಚ್ಚಿನ ದಟ್ಟಣೆ (Heavy Traffic) ಇರುವುದರಿಂದ, ಫಲಿತಾಂಶ ತಡವಾಗಿ ಲೋಡ್ ಆಗಬಹುದು. ದಯವಿಟ್ಟು ತಾಳ್ಮೆಯಿಂದಿರಿ.
ವಿದ್ಯಾರ್ಥಿಗಳಿಗೆ ನಮ್ಮ ಕಿವಿಮಾತು:
ಫಲಿತಾಂಶ ಎನ್ನುವುದು ಕೇವಲ ಕಾಗದದ ಮೇಲಿನ ಅಂಕಗಳಲ್ಲ, ಅದು ನಿಮ್ಮ ಜೀವನದ ಒಂದು ಹಂತದ ಮೌಲ್ಯಮಾಪನವಷ್ಟೇ.
- ಯಶಸ್ವಿಯಾದವರಿಗೆ: ಅಭಿನಂದನೆಗಳು! ನಿಮ್ಮ ಮುಂದಿನ ಗುರಿ ಮತ್ತು ಉನ್ನತ ಶಿಕ್ಷಣದ ಬಗ್ಗೆ ಈಗಲೇ ಯೋಜನೆ ರೂಪಿಸಲು ಪ್ರಾರಂಭಿಸಿ.
- ನಿರೀಕ್ಷಿತ ಫಲಿತಾಂಶ ಬಾರದವರಿಗೆ: ಎದೆಗುಂದಬೇಡಿ. ಸೋಲು ಗೆಲುವಿನ ಮೊದಲ ಮೆಟ್ಟಿಲು. ಮುಂದಿನ ಅವಕಾಶಗಳನ್ನು ಬಳಸಿಕೊಂಡು ನೀವು ಖಂಡಿತವಾಗಿಯೂ ಉತ್ತಮ ಸಾಧನೆ ಮಾಡಬಹುದು. ನಿಮ್ಮ ಸಾಮರ್ಥ್ಯವನ್ನು ಅಂಕಗಳು ನಿರ್ಧರಿಸುವುದಿಲ್ಲ ಎಂಬುದನ್ನು ಮರೆಯದಿರಿ.
ನಿಮಗೆ ಫಲಿತಾಂಶದ ಕುರಿತಾಗಿ ಯಾವುದೇ ಗೊಂದಲಗಳಿದ್ದರೆ ಅಥವಾ ಸಹಾಯ ಬೇಕಿದ್ದರೆ, ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ. ನಾವು ನಿಮ್ಮೊಂದಿಗೆ ಇದ್ದೇವೆ.
ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯಕ್ಕಾಗಿ ವಿವೇಕ ಜ್ಯೋತಿ ತಂಡದ ಪರವಾಗಿ ಶುಭ ಹಾರೈಕೆಗಳು!
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಹಂಚಿಕೊಳ್ಳಿ.
ವಂದನೆಗಳೊಂದಿಗೆ,
ವಿವೇಕ ಜ್ಯೋತಿ ತಂಡ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.