ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಹಿಂದುಸ್ಥಾನವು ಎಂದೂ ಮರೆಯದ

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |

ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
                 ----------0----------
'ಅಮೃತ ಘಳಿಗೆ' ಚಲನಚಿತ್ರದಲ್ಲಿನ ದೇಶಭಕ್ತಿ ಗೀತೆ.

ದೇಶ ನನ್ನದು - 'ದೇಶಭಕ್ತಿ ಗೀತೆ'

 'ದೇಶ ನನ್ನದು'
ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು||

ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು||

ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು||

ನರಹರಿಯ ಪಾಂಚಜನ್ಯ, ವಾಲ್ಮೀಕಿಯ ರಾಮಾಯಣ
ವೇದಗಳ ಉದ್ಘೋಷ ಮಂತ್ರತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು||

ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು||
                          ----------೦----------

ಗಾನಮಾಲದ ದೇಶಭಕ್ತಿ ಗೀತೆಗಳ ಸಂಗ್ರಹದಿಂದ ಆಯ್ದ ಗೀತೆ.

ಬೆಳಗಲೀ ಸನಾತನಾರ್ಯಭಾರತ

  'ಬೆಳಗಲೀ ಸನಾತನಾರ್ಯ ಭಾರತ'

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ
ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ||

ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ
ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ
ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ
ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ||

ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ
ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ
ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ
ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ||

ಸಕಲವಿದ್ಯೆಕಲೆಗಳನ್ನು ಬೆಳೆಸಿದವರ ಭಾರತ
ಸಕಲಲೋಕ ಕಲ್ಯಾಣದ ದಾರಿ ತೋರ್ದ ಭಾರತ
ಭಕ್ತಿಯಿಂದ ಮುಕ್ತಿ ಪಡೆದ ಜ್ಞಾನಿಜನರ ಭಾರತ
ಮುಕುತೀಶನ ಅವತಾರದ ಪುಣ್ಯಭೂಮಿ ಭಾರತ||

ಸತ್ಯಮಾರ್ಗದಲ್ಲಿ ನಡೆದು ಬಾಳಿದವರ ಭಾರತ
ಸತ್ಯಮೇವ ಜಯತೇ ಎಂದು ಸಾರಿದವರ ಭಾರತ
ಮೃತ್ಯುವನ್ನು ಗೆದ್ದು ಅಮರರಾದವರದು ಭಾರತ
ನಿತ್ಯಸುಖವ ಪಡೆವ ಪಥವ ತೋರಿದವರ ಭಾರತ||
                  ----------೦----------

ಗಾನಮಾಲದ ದೇಶಭಕ್ತಿ ಗೀತೆಗಳ ಸಂಗ್ರಹದಿಂದ ಆಯ್ದ ಗೀತೆ

ಈ ಮಣ್ಣು ನಮ್ಮದು - 'ಆರ್‌. ಎನ್‌ ಜಯಗೋಪಾಲ್‌'

ಈ ಮಣ್ಣು ನಮ್ಮದು
ಈ ಮಣ್ಣು ನಮ್ಮದು ಈ ಗಾಳಿ ನಮ್ಮದು
ಕಲಕಲನೆ ಹರಿಯುತಿಹ ನೀರು ನಮ್ಮದು
ಕಣಕಣದಲು ಭಾರತೀಯ ರಕ್ತ ನಮ್ಮದು

ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಈ ದೇಶದ ಜನರೆಲ್ಲರೂ ಸೋದರ ಸಮಾನ,
ಈ ನಾಡಿನ ಹೃದಯವದು ದೈವ ಸನ್ನಿಧಾನ.

ಅಜಂತ ಎಲ್ಲೋರ ಹಳೆಬೀಡು ಬೇಲೂರು
ಶಿಲೆಗಳಿವು ಕಲೆಯ ಆಗರ
ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ
ಧರ್ಮಗಳ ಮಹಾಸಾಗರ
ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು
ಈ ನಾಡ ಮಣ್ಣಲಿದೆ ಜೀವನ ಸಾರ/ ಜೀವನ ಸಾರ
ಹ್ಞೂ..ಹ್ಞೂ...ಹ್ಞೂ...ಹ್ಞೂ...

ತಂಗಾಳಿಗೆ ತಲೆದೂಗುವ ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು
ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು.
                 ----------೦----------

ರಚನೆ : ಆರ್‌. ಎನ್‌ ಜಯಗೋಪಾಲ್

ಭರತ ಭೂಮಿ ನನ್ನ ತಾಯಿ - 'ಕುವೆಂಪು'

'ಭರತ ಭೂಮಿ ನನ್ನ ತಾಯಿ'
ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು ||ಪ||

ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲು ತೊಳೆಯುವಡಿಯ
ಪೈರು ಪಚ್ಚೆ ಪಸುರಿನುಡೆಯ ||ಅ||ಪ||

ಸಿಂಧು ಯಮುನೆ ದೇವ ಗಂಗೆ
ತಪತಿ ಕೃಷ್ಣೆ ಭದ್ರೆ ತುಂಗೆ
ಸಲಿಲ ತೀರ್ಥ ಪುಣ್ಯ ರಂಗೆ ||೧||

ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಸ್ವಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಿಲು ||೨||
     ----------೦----------

ರಚನೆ : ರಾಷ್ಟ್ರಕವಿ ಕುವೆಂಪು