ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಕಾಣದ ಕಡಲಿಗೆ - "ಜಿ. ಎಸ್. ಶಿವರುದ್ರಪ್ಪ"

ಕಾಣದ ಕಡಲಿಗೆ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ ಕಡಲನು
ಕೂಡಬಲ್ಲೆನೆ ಒಂದು ದಿನ || ಕಾ ||

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||

ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ || 
                         ----------0----------

ರಚನೆ : ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ : ಸಿ ಅಶ್ವಥ್

ಐದು ಬೆರಳು ಕೂಡಿ ಒಂದು ಮುಷ್ಟಿಯು - "ಎಚ್ ಎಸ್ ವೆಂಕಟೇಶ ಮೂರ್ತಿ"

'ಐದು ಬೆರಳು ಕೂಡಿ ಒಂದು ಮುಷ್ಟಿಯು'
ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ||

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೄ ಧಾರೆ ತೊಳೆಯಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||
                             ----------೦----------

ರಚನೆ : ಎಚ್. ಎಸ್. ವೆಂಕಟೇಶ ಮೂರ್ತಿ

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ - "ಸಾ ಶಿ ಮರುಳಯ್ಯ"

'ದೇಶ ಒಂದೇ ಭಾರತ'
ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ,
ಇದೇ ನಮ್ಮ ಭಾರತ, ಪುಣ್ಯ ಭೂಮಿ ಭಾರತ ||ವೇಷ ಬೇರೆ||

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ||ವೇಷ ಬೇರೆ||

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕ್ರುತಿ ||ವೇಷ ಬೇರೆ||
                          ----------0----------

ರಚನೆ : ಸಾ ಶಿ ಮರುಳಯ್ಯ

ವಂದೇ ಮಾತರಂ - "ಬಂಕಿಮಚಂದ್ರ ಚಟರ್ಜಿ"

'ವಂದೇ ಮಾತರಂ'
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರ ಕರವಾಲೇ
ಅಬಲಾ ಕೆನೊ ಮಾ ಎತೋ ಬಲೆ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ || ವಂದೇ ಮಾತರಂ ||

ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಮಾಮಿತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||
                   ----------೦----------

ರಚನೆ : ಬಂಕಿಮಚಂದ್ರ ಚಟರ್ಜಿ

ಹಿಮಗಿರಿಯ ಶೃಂಗಾ ದೇವನದಿ ಗಂಗಾ

'ಹಿಮಗಿರಿಯ ಶೃಂಗಾ'
ಹಿಮಗಿರಿಯ ಶೃಂಗಾ  ದೇವನದಿ ಗಂಗಾ  
ಮನದಲಿ ಮೂಡಿಪ ಭಾವವಿನೂತನ
ಅನುಪಮ ಉತ್ತುಂಗಾ ಅನುಪಮ ಉತ್ತುಂಗಾ ||ಪ||

ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳು
ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು
ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು ||೧||
 
ಆ ಸುರಲೋಕವ ಮೀರಿಸುವ ನಾಡಿಗೆ ಧುಮುಕಿದ ಭಾಗೀರಥೀ
ಭಾರತ ಮಾತೆಯ ಸಂಗದಲಿ  ಧನ್ಯತೆಯಾಗಿಹ ಭಾಗ್ಯವತಿ
ಹಿಂದೂ ದೇಶದ ಕಣ ಕಣ ಜನ ಮನ ಪಾವನಗೊಳಿಸಿಹ ಪುಣ್ಯವತಿ ||೨||
 
ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ
ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ
ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||೩||