ಶಾಲಾ ಸಂಸತ್ತು ರಚನೆ, ಉದ್ದೇಶ, ಪ್ರಯೋಜನಗಳು, ಶಾಲೆಯ ಪಾತ್ರ ಮತ್ತು ಅವಶ್ಯ ನಮೂನೆಗಳ PDF.
"ಇಂದಿನ ಮಕ್ಕಳೇ ಇಂದಿನ ಮತ್ತು ಮುಂದಿನ ನಾಯಕರು"; (ಇಂದಿನ ಮಕ್ಕಳು ಇಂದಿನ ಪ್ರಜೆಗಳು) ಇಂದು ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಇದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸಲು ಅನುಕೂಲವಾಗುತ್ತದೆ.
ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ.
ಶಾಲಾ ಸಂಸತ್ತು ಚುನಾವಣೆಗೆ ಅವಶ್ಯವಿರುವ ನಮೂನೆಗಳು ಅಥವಾ ದಸ್ತಾವೇಜುಗಳು.
ಸೂಚನೆ: ನಮೂನೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ Download ಮಾಡಿ ಮಾದರಿಯಾಗಿ ಬಳಸಿ.
1. ಶಾಲಾ ಸಂಸತ್ತು ಚುನಾವಣಾ ಅಧಿಸೂಚನೆ.
4. ಪಿ. ಆರ್. ಓ ಡೈರಿ (PRO Dairy)
6. ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ನಮೂನೆ.
10. ಮತದಾರರ ಪಟ್ಟಿ.
11. ಚುನಾಯಿತ ಅಭ್ಯರ್ಥಿಗಳ ಪಟ್ಟಿ.
12. ಶಾಲಾ ಸಂಸತ್ತು ಮಂತ್ರಿಗಳ ಪಟ್ಟಿ.
ಶಾಲಾ ಸಂಸತ್ತು ಚುನಾವಣೆ ವಿಡಿಯೋ
ಮಕ್ಕಳ ಶಾಲಾ ಸಂಸತ್ತು:
ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ.
ಶಾಲಾ ಸಂಸತ್‌ನ ಉದ್ದೇಶಗಳು:
- ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.
- ಜವಬ್ದಾರಿಯುತ ನಾಗರಿಕರಾಗಲು ತರಬೇತು ನೀಡುವುದು.
- ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ತೆಗೆದುಕೊಳ್ಳುವುದು.
- ಶಾಲೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು.
- ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು.
- ಮಕ್ಕಳ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಿಸುವುದು.
- ಶಾಲಾ ಆಡಳಿತದಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡುವುದು.
- ಚುನಾವಣೆಯ ಪ್ರಕ್ರಿಯೆಯನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸುವುದು.
- ಶಾಲೆ ಮತ್ತು ಸಮುದಾಯದ ನಡುವಿನ ಸೂಕ್ತ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವುದು.
- ಮಕ್ಕಳಲ್ಲಿ ಪರಸ್ಪರ ಐಕ್ಯತೆ, ಒಗ್ಗಟ್ಟು ಮತ್ತು ಸಹೋದರತ್ವ ಭಾವನೆ ಬೆಳೆಸುವುದು.
- ದೇಶ ಕಟ್ಟುವ ಕಾರ್ಯದಲ್ಲಿ ಜವಾಬ್ದಾರಿ ನಾಯಕತ್ವ ಬೆಳೆಸುವುದು.
- ಸೈದ್ದಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ತಿಳಿಯುವುದು.
ಶಾಲಾ ಸಂಸತ್ತಿನ ಪ್ರಯೋಜನಗಳು:
- ಸುವ್ಯವಸ್ಥಿತ ಶಾಲೆಯ ನಿರ್ವಹಣೆ.
- ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ.
- ಶಿಸ್ತಿನ ಪರಿಸರ ನಿರ್ಮಾಣವಾಗುತ್ತದೆ.
- ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ.
- ನಿರ್ದಿಷ್ಟ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಆಯೋಜನೆ.
- ಕಲಿಕೆಯಲ್ಲಿ ಹಿಂದುಳಿಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲ.
- ಶಾಲಾ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಿಕೆ.
- ಮಕ್ಕಳಲ್ಲಿ ಅಭಿವ್ಯಕ್ತಿ ಹಾಗೂ ಸಂವಹನ ಕೌಶಲಗಳ ಅಭಿವೃದ್ದಿ.
- ಮಾನವೀಯ ಮೌಲ್ಯಗಳ ಜಾಗೃತಿಯಾಗುತ್ತದೆ.
- ಮಕ್ಕಳಲ್ಲಿ ವಿಷಯಾಧಾರಿತ ಕೌಶಲ್ಯಗಳ ಅಭಿವೃದ್ದಿಯಾಗುತ್ತದೆ.
- ಮಕ್ಕಳಲ್ಲಿ ನಾಯಕತ್ವದ ಗುಣಗಳ ಅಭಿವೃದ್ದಿ.
- ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಾಯೋಗಿಕ ಪರಿಚಯ.
- ಮಕ್ಕಳಲ್ಲಿ ಆರೋಗ್ಯಕರ ಪೈಪೋಟಿಯ ಬೆಳವಣಿಗೆ.
ಶಾಲೆಯ ಪಾತ್ರ :
ಪ್ರಾಥಮಿಕ ಶಾಲೆಗಳಾದರೆ ಹಿರಿಯ ತರಗತಿ ಮಕ್ಕಳನ್ನು, ಪ್ರೌಢಶಾಲೆಗಳಾದರೆ ಎಲ್ಲಾ ತರಗತಿ ಮಕ್ಕಳನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ರಾಷ್ಟ್ರ, ರಾಜ್ಯ ಅಥವಾ ಸ್ಥಳೀಯ ಚುನಾವಣೆಗಳ ಮಾದರಿಯಲ್ಲಿಯೇ, ಶಾಲಾ ಹಂತದ ಚುನಾವಣೆ ಮೂಲಕ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡಬೇಕು. ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಸದಸ್ಯರಿಗೆ ಅವರ ಸಾಮರ್ಥ್ಯ ಮತ್ತು ಅಪೇಕ್ಷೆಗೆ ತಕ್ಕಂತಹ ಖಾತೆಗಳನ್ನು ಹಂಚಿ ಪ್ರತಿಜ್ಞಾ ವಿಧಿ ಬೋಧಿಸಬೇಕು. ಇಲ್ಲಿ ಶಿಕ್ಷಕರ ವೈಯಕ್ತಿಕ ಹಿತಾಸಕ್ತಿಗಿಂತ ಮಗುವಿನ ಸಾಮರ್ಥ್ಯಕ್ಕೆ ಹೆಚ್ಚು ಆಧ್ಯತೆ ನೀಡಬೇಕು.
ನಿಗದಿತ ಅವಧಿಗೆ ಚುನಾಯಿತ ಸದಸ್ಯರೆಲ್ಲ ಸಭೆ ಸೇರಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಮಕ್ಕಳು ತಮ್ಮ ಹಂತದಲ್ಲಿ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳವುದು. ಉಳಿದ ಸಮಸ್ಯೆಗಳನ್ನು ಶಿಕ್ಷಕರು ಹಾಗೂ ಶಾಲಾ ಮುಖ್ಯಸ್ಥರ ಗಮನಕ್ಕೆ ತರುವುದು ಮತ್ತು ಅವುಗಳನ್ನು ಪರಿಹರಿಸಲು ಒತ್ತಾಯ ಮಾಡುವುದು. ಪ್ರತಿ ಸಭೆಯ ನಡಾವಳಿಗಳನ್ನು ದಾಖಲು ಮಾಡಬೇಕು. ಅಗತ್ಯವಿದ್ದಾಗ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಿ ಅವರ ಸಲಹೆ ಪಡೆಯುವುದು.
ಶಾಲೆಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಸಂಸತ್ ಸದಸ್ಯರ ನೇತೃತ್ವದಲ್ಲಿ ನಡೆಸುವುದು. ಮಕ್ಕಳು ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯ್ತಿ/ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆಗಳ ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳ ಈಡೇರಿಕೆಗೆ ಒತ್ತಾಯಿಸುವುದು. ಬಾಲ್ಯವಿವಾಹ, ಬಾಲ ಕಾರ್ಮಿಕತನ, ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡಿ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವುದು. ಪ್ರತಿವರ್ಷ ಪಂಚಾಯ್ತಿ ಹಂತದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಮಕ್ಕಳ ಹಿತಾಸಕ್ತಿ ಕಾಪಾಡಲು ಮನವಿ ಸಲ್ಲಿಸುವುದು. ಒಟ್ಟಾರೆ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಸಂಸತ್‌ನ ಆದ್ಯ ಕರ್ತವ್ಯವಾಗಿದೆ.
ಮಾಹಿತಿ ಕೃಪೆ :
ಪ್ರಜಾವಾಣಿ ದಿನಪತ್ರಿಕೆ ಮತ್ತು ಅಂತರ್ಜಾಲ..