Menu

Home ನಲಿಕಲಿ About ☰ Menu


 

ಪ್ರೌಢಶಾಲೆ & GPT ಶಿಕ್ಷಕರಿಗೆ ವಿಷಯವಾರು NEP Online ತರಬೇತಿ in Diksha App..

 ಪ್ರೌಢಶಾಲಾ ಮತ್ತು GPT ಶಿಕ್ಷಕರಿಗಾಗಿ NEP-2020 ಆಧಾರಿತ ವಿಷಯವಾರು ಮಾಡ್ಯೂಲ್ ಗಳನ್ನು ಇಲಾಖೆ ಸಿದ್ದಪಡಿಸಿದ್ದು, ತಾವು ಈ ಮಾಡ್ಯೂಲ್ ಗಳು ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿದ್ದು ಕಡ್ಡಾಯವಾಗಿ ಶಿಕ್ಷಕರು ತಮ್ಮ ಬೋಧನಾ ವಿಷಯಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಪೂರ್ಣಗೊಳಿಸಬೇಕು.
ಪ್ರೌಢಶಾಲೆ & GPT ಶಿಕ್ಷಕರಿಗೆ ವಿಷಯವಾರು NEP Online ತರಬೇತಿ in Diksha App..
ಆದ್ದರಿಂದ ಈ ಮಾಡ್ಯೂಲ್ ಗಳಿಗೆ ಸೇರಲು/Join ಆಗಲು‌ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.






ಆದೇಶ ಪ್ರತಿ (DSERT)

ಅನ್ನಭಾಗ್ಯದ ಹಣ ನಿಮಗೆ ಬಂದಿದೆಯೇ? ಎಂದು ಈಗಲೇ ಚೆಕ್ ಮಾಡಿ..

ಕರ್ನಾಟಕ ಸರ್ಕಾರ  ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 5kg ಅಕ್ಕಿಯ ಬದಲಾಗಿ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ ತಿಂಗಳಿಗೆ 170 ರೂಗಳನ್ನು ಖಾತೆಗೆ ಜಮಾ ಮಾಡುವುದಾಗಿ ಘೋಷಿಸಿದ್ದು , ಅನ್ನ  ಭಾಗ್ಯ ಯೋಜನೆಯ ಅಡಿಯಲ್ಲಿ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅನ್ನಭಾಗ್ಯದ ಹಣವು ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ :

ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ?, ಎಷ್ಟು ಹಣ ಬಂದಿದೆ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಅಧಿಕೃತ ಜಾಲತಾಣ(Website) ಅನ್ನು ಬಿಡುಗಡೆ ಮಾಡಿದೆ.

ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :

STEP - 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ  

Click Here

ಆಗ ಮುಖ ಪುಟ ತೆರೆದುಕೊಳ್ಳುತ್ತದೆ, ಅದರಲ್ಲಿ e-Status ಎಂಬ ಆಯ್ಕೆಯನ್ನು ಒತ್ತಿ, ನಂತರ DBT Status ಮೇಲೆ ಕ್ಲಿಕ್ ಮಾಡಿ.

ahara-1

STEP - 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

ahara-2


STEP - 3 : ನಂತರ ಕೆಳಗಿನ ಭಾಗದಲ್ಲಿರುವ  DBT Status ಮೇಲೆ ಕ್ಲಿಕ್ ಮಾಡಿ. 

ahara-3


STEP - 4: ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ(Type ಮಾಡಿ), GO ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ UID ಮತ್ತು ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬ ಮಾಹಿತಿಯನ್ನು ನೋಡಬಹುದಾಗಿದೆ.

ಅನ್ನಭಾಗ್ಯದ ಹಣ ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ..

ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣ ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು

✅ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾದ ತಕ್ಷಣ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಹಣ ಜಮಾ ಆಗಿರುವುದರ ಬಗ್ಗೆ ಸಂದೇಶ(Message) ಕೂಡ ಬರುತ್ತದೆ.

ಅಖಿಲ ಭಾರತ ಹಣಕಾಸು ಸಾಕ್ಷರತಾ - ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ (ಚಂದನ ವಾಹಿನಿ) ವೀಕ್ಷಿಸಿ.

           ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಅಖಿಲ ಭಾರತ ಹಣಕಾಸು ಸಾಕ್ಷರತಾ - ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಲು ಅನುಕೂಲವಾಗುವಂತೆ ಈ ಕೆಳಗೆ ವಿಡಿಯೋಗಳ ಲಿಂಕ್ ಅನ್ನು ನೀಡಲಾಗಿದೆ.

ದಿನಾಂಕ:20-07-2023 ರಂದು ನಡೆದ ಕ್ವಿಜ್ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.


 ದಿನಾಂಕ:21-07-2023 ರಂದು ನಡೆದ ಕ್ವಿಜ್ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.

ಗೃಹ ಜ್ಯೋತಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ | Apply for Gruha Jyothi on mobile

        ಕರ್ನಾಟಕ ಸರ್ಕಾರ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುವ ಗೃಹಜ್ಯೋತಿ ಯೋಜನೆಗೆ  ಜೂನ್‌ 18ರಿಂದಲೇ ಅರ್ಜಿ ಸಲ್ಲಿಕೆ ಆರಂಭಿಸಿದೆ. ಈ ಅರ್ಜಿಯನ್ನು ಕಡ್ಡಾಯವಾಗಿ Online ನಲ್ಲಿಯೇ ಸಲ್ಲಿಸಬೇಕು.
                   ಹಾಗಾಗಿ ನಿಮ್ಮ ಮೊಬೈಲ್ ನಲ್ಲಿಯೇ ‌ ಅತ್ಯಂತ  ಸುಲಭವಾಗಿ ಗೃಹ ಜ್ಯೋತಿ ಯೋಜನೆಗೆ Online ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಿಸಿ 


ಮೊಬೈಲ್ ನಲ್ಲಿಯೇ  Online ಅರ್ಜಿ ಸಲ್ಲಿಸುವ ಹಂತಗಳು
Step - 1: ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 
(ಈ Red ಬಟನ್ ಮೇಲೆ ಕ್ಲಿಕ್ ಮಾಡಿ)




ಗೃಹ ಜ್ಯೋತಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ | Apply for Gruha Jyothi on mobile
ಈ ಮೇಲಿನ ರೀತಿ ಮುಖಪುಟ ತೆರೆದುಕೊಳ್ಳುತ್ತದೆ.

Step - 2: ಗೃಹ ಜ್ಯೋತಿ ಮೇಲೆ ಕ್ಲಿಕ್ ಮಾಡಿ ಘೋಷಣೆ: / Declaration ಪುಟ ತೆರೆದುಕೊಳ್ಳುತ್ತದೆ.

Step - 3: Check Box ✅ Click ಮಾಡಿ ಮತ್ತು Captcha Code ನಮೂದಿಸಿ(Type ಮಾಡಿ), Agree ಬಟನ್ ಮೇಲೆ ಕ್ಲಿಕ್ ಮಾಡಿ.

Step - 4: ಮುಂದಿನ ಪುಟ ತೆರೆದುಕೊಳ್ಳುತ್ತದೆ ಅಲ್ಲಿ  ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ(Type ಮಾಡಿ), Get Details ಬಟನ್ ಮೇಲೆ ಕ್ಲಿಕ್ ಮಾಡಿ.

Step - 5: DBT Karnataka / EKYC Service ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ಮತ್ತೊಂದು ಬಾರಿ ಆಧಾರ ಕಾರ್ಡ್ ಸಂಖ್ಯೆ ನಮೂದಿಸಿ. Check Box ✅ Click ಮಾಡಿ ಮತ್ತು Generate OTP ಬಟನ್ ಮೇಲೆ ಕ್ಲಿಕ್ ಮಾಡಿ. 
  • OTP ಯನ್ನು ನಮೂದಿಸಿ(Type ಮಾಡಿ)(ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ OTP ಬರುತ್ತದೆ)
Step - 6: ಅರ್ಜಿದಾರರ ವಿವರಗಳು / Application details ಪುಟ ತೆರೆದುಕೊಳ್ಳುತ್ತದೆ. 
  • ಅಲ್ಲಿ  ನಿಮ್ಮ ಎಸ್ಕಾಂ ಆಯ್ಕೆ ಮಾಡಿ / Select ESCOM.
  • ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ / Account id/Connection id ನಮೂದಿಸಿ.
  • ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ / Applicant Name (Auto Fill ಆಗುತ್ತದೆ)
  • ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ / Applicant Address (Auto Fill ಆಗುತ್ತದೆ)
  • ನಿವಾಸಿ ವಿಧ / Occupancy Type ಆಯ್ಕೆ ಮಾಡಿ.(ಮಾಲಿಕ/ಬಾಡಿಗೆದಾರ/ಕುಟುಂಬದ ಸದಸ್ಯ)
  • ಸಂವಹನಕ್ಕಾಗಿ ದೂರವಾಣಿ ಸಂಖ್ಯೆ / Mobile Number ನಮೂದಿಸಿ. Get OTP ಬಟನ್ ಮೇಲೆ ಕ್ಲಿಕ್ ಮಾಡಿ.
  • ಕೆಳಗೆ OTP ಯನ್ನು ನಮೂದಿಸಿ.
  • Check Box ✅ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ Submit button ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಗೃಹ ಜ್ಯೋತಿ ಅರ್ಜಿಯ ಸ್ವೀಕೃತಿ ಪತ್ರದ ಪುಟ ತೆರೆದುಕೊಳ್ಳುತ್ತದೆ ಅಲ್ಲಿ Download/print ಬಟನ್ ಮೇಲೆ ಕ್ಲಿಕ್ ಮಾಡಿ download ಮಾಡಿಕೊಳ್ಳಿ.





ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  1. ಆಧಾರ್ ಕಾರ್ಡ್ ಪ್ರತಿ
  2. ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ
  3. ಕರ್ನಾಟಕ ಖಾಯಂ ನಿವಾಸಿ ಪುರಾವೆ
  4. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು ಪತ್ರ ಇರಬೇಕು.

ಗೃಹ ಜ್ಯೋತಿ ಯೋಜನೆಯ ಷರತ್ತುಗಳು :

  1. ಗೃಹ ಜ್ಯೋತಿ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ ಹಾಗೂ ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
  2. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
  3. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರು.
  4. ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  5. ಗ್ರಾಹಕರು Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.

ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ವೀಕೃತಿ ಡೌನ್ಲೋಡ್ ಮಾಡಿ | Download Your Gruha Jyothi Acknowledgement

         ಈಗಾಗಲೇ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು  ನಿಮ್ಮ “ಅರ್ಜಿ ಸ್ವೀಕೃತಿ - (Application Acknowledgement)” ಅನ್ನು  ಡೌನ್ಲೋಡ್ ಮಾಡಬಹುದು.

: ಅರ್ಜಿ  ಸ್ವೀಕೃತಿ (Acknowledgement) ಡೌನ್ಲೋಡ್ ಮಾಡುವ ವಿಧಾನ :
Step - 1: ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 
(ಈ Red ಬಟನ್ ಮೇಲೆ ಕ್ಲಿಕ್ ಮಾಡಿ)

ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ವೀಕೃತಿ ಡೌನ್ಲೋಡ್ ಮಾಡಿ | Download Your Gruha Jyothi Acknowledgement

Step - 2: ನಂತರ, “ Download Your Acknowledgement” ಎಂಬ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ “Select Escom Name” ನಲ್ಲಿ ನಿಮ್ಮ Escom  ಹೆಸರನ್ನು ನಮೂದಿಸಿ(Type ಮಾಡಿ).

Step - 3: ನಂತರ, ಎರಡನೇ Boxನಲ್ಲಿ, “Enter your Account ID / Connection ID” ಎಂದಿರುತ್ತದೆ ಅಲ್ಲಿ ನಿಮ್ಮ “Account ID / Connection ID”  ನಮೂದಿಸಿ(Type ಮಾಡಿ).

Step - 4: ಕೊನೆಯಲ್ಲಿ ಕೆಳಗಡೆ “Download Your Acknowledgement ” ಬಟನ್ ಮೇಲೆ ಕ್ಲಿಕ್ ಮಾಡಿ, ಆಗ ನಿಮ್ಮ ಅರ್ಜಿಯ ಸ್ವೀಕೃತಿ (Acknowledgement) ಡೌನ್ಲೋಡ್ ಆಗುತ್ತದೆ.


ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ಥಿತಿ ತಿಳಿಯಿರಿ | Check Your Gruha Jyothi Apply Status

         ಈಗಾಗಲೇ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು  ನಿಮ್ಮ “ಅರ್ಜಿ ಸ್ಥಿತಿ - (Application Status)” ಅನ್ನು ಪರೀಕ್ಷಿಸಿಕೊಳ್ಳಬಹು.

: ಅರ್ಜಿ ಸ್ಥಿತಿ - (Application Status) Check ಮಾಡುವ ವಿಧಾನ :
Step - 1: ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 
(ಈ Red ಬಟನ್ ಮೇಲೆ ಕ್ಲಿಕ್ ಮಾಡಿ.)

ನಿಮ್ಮ ಗೃಹ ಜ್ಯೋತಿ ಅರ್ಜಿ ಸ್ಥಿತಿ ತಿಳಿಯಿರಿ | Check Your Gruha Jyothi Apply status

Step - 2: ನಂತರ, “Track Your Application Status” ಎಂಬ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ “Select Escom Name” ನಲ್ಲಿ ನಿಮ್ಮ Escom  ಹೆಸರನ್ನು ನಮೂದಿಸಿ(Type ಮಾಡಿ).

Step - 3: ನಂತರ ಕೆಳಗಡೆ, ಎರಡನೇ Boxನಲ್ಲಿ, “Enter your Account ID” ಎಂದಿರುತ್ತದೆ ಅಲ್ಲಿ ನಿಮ್ಮ “Account ID”  ನಮೂದಿಸಿ(Type ಮಾಡಿ).

Step - 4: ಕೊನೆಯಲ್ಲಿ “Check Status” ಬಟನ್ ಮೇಲೆ  ಕ್ಲಿಕ್ ಮಾಡಿ, ಆಗ ನಿಮ್ಮ ಅರ್ಜಿಯ ಸ್ಥಿತಿ (Application Status) ತೋರಿಸುತ್ತದೆ.


Popular Post