Menu

Home ನಲಿಕಲಿ About ☰ Menu


 

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್.

"ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನುಮದಿನ"
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್.
 "ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ".  ಇದು ಭಗತ್ ಸಿಂಗ್ ಅವರ ಅಚ್ಚಳಿಯದ ನುಡಿಗಳು.  ಕೇವಲ ಹನ್ನೆರಡನೆಯ ವಯಸ್ಸಿನಲ್ಲೇ ಜಲಿಯನ್ ವಾಲಾಬಾಗ್ ದುರಂತದಿಂದ ಮನನೊಂದು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನು  ಮುಡಿಪಾಗಿಟ್ಟುಕೊಂಡ ಭಗತ್ ಸಿಂಗ್ ಅಂತಹ ಉದಾಹರಣೆಗಳು ಅಪರೂಪವಾದದ್ದು.  


                ಭಗತ್ ಸಿಂಗರು  1907 ರ ಸೆಪ್ಟೆಂಬರ್ 28 ರಂದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಜರಾನ್ವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು. ಭಗತ್ ಸಿಂಗರ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.  ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳವಳಿಗಳನ್ನು ಸಂಘಟಿಸಿ ಪೊಲೀಸರ ಕೈಗೆ ಸಿಗದೆ ಕಾರ್ಯನಿರ್ವಹಿಸುತಿದ್ದರು.   ಈ ಪ್ರಭಾವದ ಜೊತೆಯಲ್ಲಿ  ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಭಗತ್ ಸಿಂಗರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. 
            ಭಗತ್ ಸಿಂಗರು ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟರ್ಜಿ, ಬಿಜೊಯ್ ಕುಮಾರ್ ಸಿನ್ಹಾ, ಸಚಿಂದ್ರನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ,  ರಾಮಪ್ರಸಾದ್ ಬಿಸ್ಮಿಲ್, ಶಿವ ವರ್ಮ, ಸುಖದೇವ್ ಮುಂತಾದ ನಿಷ್ಠಾವಂತರೊಡನೆ ದೇಶಪ್ರೇಮದಿಂದ ಮಾಡಿದ ಹಲವಾರು ಹೋರಾಟಗಳು, ಬ್ರಿಟಿಷ್ ಸರ್ಕಾರಕ್ಕೆ ಹಿಡಿಸಿದ ಭಯ, ಈ ಎಲ್ಲವುಗಳ ಹಿಂದೆ ಅಡಗಿದ್ದ ಸ್ವಾರ್ಥರಹಿತ ದೇಶಪ್ರೇಮ ನಮ್ಮ ನಾಡನ್ನು ಸದಾಕಾಲ ಜಾಗೃತಗೊಳಿಸುವಂತಹದ್ದಾಗಿವೆ.  
            ನೇಣುಗಂಬವೇರಿ ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. “ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ಆ ನಂತರದಲ್ಲಿ  ಕೆಲಸ ಮಾಡಲು ತೊಡಗಿ.  ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಢ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿಮ್ಮನ್ನು ನಿರಾಶೆಗೊಳಿಸಲಾರವು.  ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸಲಾರವು.  ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ....”
                ಭಗತ್ ಸಿಂಗ್ ಅದೆಷ್ಟು ಶ್ರೇಷ್ಠ ಪುಸ್ತಕಗಳನ್ನು ಓದುತ್ತಿದ್ದರೆಂದರೆ ಸಾಯುವ ದಿನದಲ್ಲಿ ಅವರನ್ನು ನೇಣುಗಂಬಕ್ಕೆ ಕರೆದೊಯ್ಯಲು ಬಂದಾಗ ಕೂಡಾ “ಒಂದು ಕ್ಷಣ ತಡಿ, ಮಹಾನ್ ಕ್ರಾಂತಿಕಾರ ಲೆನಿನ್ ಬಗ್ಗೆ ಇನ್ನೊಂದೆರಡು ವಾಕ್ಯ ಓದಿ ಬಿಡುತ್ತೇನೆ” ಎಂದು ಹೇಳಿ ಒಂದೆರಡು ಕ್ಷಣದ ನಂತರ “ನಡೆಯಿರಿ ಹೋಗೋಣ” ಎಂದರಂತೆ.  ಮಾರ್ಚ್ 23, 1931 ರಂದು ಅವರು ನಗುನಗುತ್ತಾ ಗೆಳೆಯ ಸುಖದೇವ್, ರಾಜ್ ಗುರು ಅವರ ಜೊತೆಗೂಡಿ ಗಲ್ಲಿಗೇರಿದಾಗ ಅವರಿಗಿನ್ನೂ ಕೇವಲ 23 ರ ಹರಯ.
                   ಈ ಮಹಾನ್ ದೇಶಪುತ್ರನ ಜನ್ಮದಿನದ ಸಂದರ್ಭದಲ್ಲಿ  ಅವರಿಗೆ ನಮನ ಸಲ್ಲಿಸೋಣ.  ಇಂತಹ ಮಹನೀಯರು ದೇಶಕ್ಕೆ ಬಲಿದಾನ ಸಲ್ಲಿಸಿ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಯೋಗ್ಯರಾಗಿ ಬಾಳುವ ಸಂಕಲ್ಪ ಕೈಗೊಳ್ಳೋಣ.
ಇಂತಹ ಮಹಾನ್ ವ್ಯಕ್ತಿಗಳ, ಮಹಾ ವ್ಯಕ್ತಿತ್ವಗಳನ್ನು ನಮ್ಮ ಜೀವನಕ್ಕೆ ಆದರ್ಶಪ್ರಾಯವಾಗಿ, ಮಾರ್ಗದರ್ಶಕರಾಗಿ ಅವರ ಬದುಕಿನ ರೀತಿಯನ್ನು ಅಳವಡಿಸಿಕೊಳ್ಳೋಣ.
              ಇಂತಹ ಮಹಾನ್ ಚೇತನವನ್ನು ಅವರ ಜನ್ಮದಿನವಾದ ಇಂದು ನೆನೆಯುತ್ತಾ ಅವರ ದೇಶಪ್ರೇಮಕ್ಕೆ  ಅತ್ಯಂತ ಪ್ರೀತಿಯಿಂದ ಗೌರವ ಸಲ್ಲಿಸೋಣ.
ಕೃಪೆ : ಸಾಮಾಜಿಕ ಜಾಲ ತಾಣ (WhatsApp)

1-9ನೇ ತರಗತಿ SA-1 ಪ್ರಶ್ನೆ ಪತ್ರಿಕೆಗಳು, ನೀಲ ನಕ್ಷೆ ಮತ್ತು ಮಾದರಿ ಉತ್ತರಗಳು.

ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
1-9ನೇ ತರಗತಿ SA-1 ಪ್ರಶ್ನೆ ಪತ್ರಿಕೆಗಳು, ನೀಲ ನಕ್ಷೆ ಮತ್ತು ಮಾದರಿ ಉತ್ತರಗಳು.
 ಈ ಪ್ರಶ್ನೆ ಪತ್ರಿಕೆಗಳನ್ನು Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಸೂಚನೆ: ಇವುಗಳನ್ನು ಮಾದರಿಯಾಗಿ ಮಾತ್ರ ಬಳಸಿ.
6 ರಿಂದ 10ನೇ ತರಗತಿ ದೈಹಿಕ ಶಿಕ್ಷಣ ಪ್ರಶ್ನೆ ಪತ್ರಿಕೆ & ಮಾದರಿ ಉತ್ತರಗಳನ್ನು Download ಮಾಡಲು ಈ ಪುಟದ ಕೊನೆಗೆ ವೀಕ್ಷಿಸಿ 


1ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload



2ನೇ ತರಗತಿ ಪ್ರಶ್ನೆ  ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload



3ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload



4ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload


5ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload


 ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು  Upload ಮಾಡಲಾಗಿದೆ. 

6ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಹಿಂದಿDownload
    4ವಿಜ್ಞಾನDownload
    5ಗಣಿತDownload
    6ಸಮಾಜ ವಿಜ್ಞಾನDownload


7ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಹಿಂದಿDownload
    4ವಿಜ್ಞಾನDownload
    5ಗಣಿತDownload
    6ಸಮಾಜ ವಿಜ್ಞಾನDownload


8ನೇ ತರಗತಿ ಪ್ರಶ್ನೆ ಪತ್ರಿಕೆಗಳು 
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಹಿಂದಿDownload
    4ವಿಜ್ಞಾನDownload
    5ಗಣಿತDownload
    6ಸಮಾಜ ವಿಜ್ಞಾನDownload



9ನೇ ತರಗತಿ ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಹಿಂದಿDownload
    4ವಿಜ್ಞಾನDownload
    5ಗಣಿತDownload
    6ಸಮಾಜ ವಿಜ್ಞಾನDownload

 ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು  Upload ಮಾಡಲಾಗಿದೆ, ಹೆಚ್ಚಿನ ಮಾಹಿತಿ ಗೆ Blog ಗೆ ಮತ್ತೇ ಭೇಟಿ ನೀಡಿ 

6 ರಿಂದ 10ನೇ ತರಗತಿ ದೈಹಿಕ ಶಿಕ್ಷಣ ಪ್ರಶ್ನೆ ಪತ್ರಿಕೆ & ಮಾದರಿ ಉತ್ತರಗಳು 
ಕ್ರ. ಸಂತರಗತಿDownload Link
    16ನೇ ತರಗತಿDownload
    27ನೇ ತರಗತಿDownload
    38ನೇ ತರಗತಿDownload
    49ನೇ ತರಗತಿDownload
    510ನೇ ತರಗತಿDownload
    



@ಈ ಪ್ರಶ್ನೆ ಪತ್ರಿಕೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ್ದು, ಅವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ..

NMMS ಪರೀಕ್ಷೆಗೆ ಅರ್ಜಿ ಆಹ್ವಾನ 2023-24

NMMS ಪರೀಕ್ಷೆಗೆ ಅರ್ಜಿ ಆಹ್ವಾನ 2023-24

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ 13.09.2023

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 30.10.2023

"ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು  30/10/2023ಕ್ಕೆ ಮುಂದೂಡಲಾಗಿದೆ."

ಪರೀಕ್ಷೆ ನಡೆಯುವ ದಿನಾಂಕ 17.12.2023

@ಅರ್ಜಿ ಸಲ್ಲಿಸುವ ವಿಧಾನ@

ಅರ್ಜಿ ಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

ಸ್ವತಃ ಶಾಲೆಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು https://kseab.karnataka.gov.in ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ U-DISE  Code ಅನ್ನು User Name ಆಗಿ ಬಳಸಿ LOGIN ಆಗುವುದು ಕಡ್ಡಾಯವಾಗಿರುತ್ತದೆ,  ನಂತರ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Menu Click ಮಾಡುವುದು, ಆಗ ಅರ್ಜಿ ನಮೂನೆ Open ಆಗುತ್ತದೆ.

# ಈ NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ Step by Step ಸಂಪೂರ್ಣ ಮಾಹಿತಿಯ ವಿಡಿಯೋ.



ಮಂಡಳಿ ವತಿಯಿಂದ Default Password ನೀಡಲಾಗಿದ್ದು, ಮೊದಲ ಬಾರಿ Login ಆಗುವಾಗ Password ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ.

*ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ*(https://kseeb.karnataka.gov.in/NTSENMMS/views/loginpage.aspx)

ಅರ್ಜಿ ಸಲ್ಲಿಸುವಾಗ ತಾಂತ್ರಿಕ ಅಡಚಣೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ - ಕಛೇರಿ ಕರ್ತವ್ಯದ ಸಮಯದಲ್ಲಿ ದೂರವಾಣಿ ಸಂಖ್ಯೆ :080-23341615 ಕರೆ ಮಾಡುವುದು.

ಶಾಲೆಯ ಫೋನ್ ನಂಬರ್ change ಮಾಡುವುದಿದ್ದರೆ change ಆದ mobile number ಹೊಂದಿರುವ ಮುಖ್ಯ ಶಿಕ್ಷಕರ ದೃಢೀಕರಣ ಮಾಡಿರುವ ಪತ್ರವನ್ನು scan ಮಾಡಿ ಈ ಕೆಳಗಿನ ಮೇಲ್ ID ಗೆ MAIL ಹಾಕುವುದು.ksqaacntsenmms@gmail.com 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ school login ನಲ್ಲಿ challan generate ಆಗುತ್ತವೆ.

@NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು.

ಪೋಷಕರ ವಾರ್ಷಿಕ ವರಮಾನ ಮಿತಿ ರೂ 3,50,000/-

7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ.55 ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

ಪಂ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳು ಶೇ.50 ರಷ್ಟು ಅಂಕಗಳನ್ನು or ಪೂರಕ ಗ್ರೇಡ್ ಪಡೆದಿರಬೇಕು.

@NMMS ಪರೀಕ್ಷೆಯ ಶುಲ್ಕದ ವಿವರ@

ಸಾಮಾನ್ಯ, ಇತರೆ ಹಿಂದುಳಿದ ವರ್ಗ( ಆರ್ಥಿಕವಾಗಿ ಹಿಂದುಳಿದವರು) ರೂ.20-00

★ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ರೂ.10-00

How to Download NMMS Nominal Roll ವಿಡಿಯೋ 

 @ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

* NMMS ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು ಡೌನ್ಲೋಡ್ ಮಾಡಲು Click ಮಾಡಿ.

ಸದರಿ ಪರೀಕ್ಷೆಯು ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ, ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುವಂತಹ ಪರೀಕ್ಷೆಯಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತದೆ.

*ಪತ್ರಿಕೆ 1-

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (MAT) 90 ನಿಮಿಷ, 90 ಪ್ರಶ್ನೆ, 90 ಅಂಕ.

*ಪತ್ರಿಕೆ 2-

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) 90 ನಿಮಿಷ, 90 ಪ್ರಶ್ನೆ, 90 ಅಂಕ.

ಸೂಚನೆ:- ವಿಕಲಚೇತನ ಮಕ್ಕಳಿಗೆ 30ನಿಮಿಷ ಹೆಚ್ಚುವರಿ ಸಮಯವಿರುತ್ತದೆ.

ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಪ್ರತಿವರ್ಷ ₹12000/- ದಂತೆ 9ನೇ ತರಗತಿಯಿಂದ 12ನೇ ತರಗತಿ ವರೆಗೆ ಅಂದರೆ ನಾಲ್ಕು ವರ್ಷ ಶಿಷ್ಯವೇತನ ನೀಡಲಾಗುತ್ತದೆ.

How to Download NMMS Hall Ticket ವಿಡಿಯೋ.


Click Below ಲಿಂಕ್ & Download Circular






*NMMS ನ MAT & SAT ಸಂಪೂರ್ಣ ಅಧ್ಯಯನ ವಸ್ತು/Study Material ಡೌನ್ಲೋಡ್ ಮಾಡಲು Click ಮಾಡಿ.


KARTET ಕೀ-ಉತ್ತರಗಳು - 2023 ಪ್ರಕಟ.

         ದಿನಾಂಕ 03/09/2023 ರಂದು ನಡೆದ TET ಪರೀಕ್ಷಯ ಕೀ ಉತ್ತರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು  ಆಕ್ಷೇಪಣೆ ಸಲ್ಲಿಸಲು 12/09/2023 ರಿಂದ 15/09/2023ರ ಸಾಯಂಕಾಲ 5:30 ಕೊನೆಯ ದಿನವಾಗಿದೆ.
      Key Answers ಡೌನ್ಲೋಡ್ ಮಾಡಲು ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.


Paper 1 Key-Answers 2023



Paper 2 Key-Answers 2023





Popular Post