Menu

Home ನಲಿಕಲಿ About ☰ Menu


 

ಪರ್ಯಾಯ ಶೈಕ್ಷಣಿಕ ಯೋಜನೆ ಜನೆವರಿ-2022

2022ರ ಜನೆವರಿ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು DSERT Website ನಲ್ಲಿ  ಪ್ರಕಟಿಸಿದ್ದು,  ತರಗತಿವಾರು, ಮಾಧ್ಯಮವಾರು ಪರ್ಯಾಯ ಶೈಕ್ಷಣಿಕ ಯೋಜನೆಗಳನ್ನು ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...


CLICK HERE & DOWNLOAD ಪ. ಶೈ. ಯೋಜನೆ ಜನೆವರಿ 2022

ವಿಶ್ವಮಾನವ ದಿನಾಚರಣೆ (ಕುವೆಂಪು)

 ಕುವೆಂಪು ಅವರ ಜನುಮದಿನ

(ಡಿಸೆಂಬರ್ 29, 1904 - ನವೆಂಬರ್ 11, 1994)

         ಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದ, ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾದ ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಇಂತಹ ಮಹಾನ್ ಪುರುಷನ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತದೆ, ಹಾಗಾಗಿ ನಾವು ಈಗ ಅವರ ಜೀವನ ಮತ್ತು ವಿಶ್ವ ಮಾನವ ಸಂದೇಶದ ಕುರಿತು ಅರಿಯೋಣ..


ಬಾಲ್ಯ :-
         ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ  ತಮ್ಮ ಬಾಲ್ಯದ ದಿನಗಳನ್ನು ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆದರು.

ಶಿಕ್ಷಣ :-
                       ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.
ಕುವೆಂಪು ಅವರ ಭಾವಚಿತ್ರ.
ವೃತ್ತಿಜೀವನ :-
                 ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ :-

    ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.


ನಿಧನ :-
           ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.
              ಕರ್ನಾಟಕ ಸರ್ಕಾರವು 2015ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ 29 ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು.
 ಕುವೆಂಪುರವರ ಕುಪ್ಪಳಿಯ ಮನೆ

ಕುವೆಂಪು ಅವರ ವಿಶ್ವಮಾನವ ಸಂದೇಶ

     ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ವಿಶ್ವಮಾನವ ಗೀತೆ
ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

-ಕುವೆಂಪು

ಪಂಚಮಂತ್ರ :-

           ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.
ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".
ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

ಸಪ್ತಸೂತ್ರ :-
ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ.

1. "ಮನುಷ್ಯಜಾತಿ ತಾನೊಂದೆ ವಲಂ" ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.

3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

4. 'ಮತ' ತೊಲಗಿ 'ಅಧ್ಯಾತ್ಮ' ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.

5. ಮತ 'ಮನುಜಮತ'ವಾಗಬೇಕು; ಪಥ 'ವಿಶ್ವಪಥ'ವಾಗಬೇಕು; ಮನುಷ್ಯ 'ವಿಶ್ವಮಾನವ'ನಾಗಬೇಕು.

6. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.

7. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

*ಎಲ್ಲರಿಗೂ ವಿಶ್ವ ಮಾನವ ದಿನದ ಶುಭಾಶಯಗಳು*

@ನಾವೇಲ್ಲ ವಿಶ್ವಮಾನವರಾಗಲು ಪ್ರಯತ್ನಿಸೋಣ@

4ನೇ ತರಗತಿ ಪರಿಸರ ಅಧ್ಯಯನ ಸಂವೇದ ಇ-ಕ್ಲಾಸ್ 2021-22

 ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 4ನೇ ತರಗತಿ ಪರಿಸರ ಅಧ್ಯಯನ ವಿಡಿಯೋ ಪಾಠಗಳು..

ಪಾಠಗಳು

1. ಪ್ರಾಣಿ ಪ್ರಪಂಚ

2. ಸವಿಜೇನು

3. ವನಸಂಚಾರ

4. ಸಸ್ಯಾಧಾರ ಬೇರು

5. ಪುಷ್ಪರಾಗ

6. ಹನಿಗೂಡಿದರೆ.....

7. ಜಲಮಾಲಿನ್ಯ-ಸಂರಕ್ಷಣೆ

8. ಆಹಾರ-ಆರೋಗ್ಯ(ಭಾಗ-1)

    ಆಹಾರ-ಆರೋಗ್ಯ(ಭಾಗ-2)

9. ಆಹಾರ-ಅಭ್ಯಾಸ

10. ವಸತಿ ವೈವಿಧ್ಯ

11. ಕಸ-ರಸ

12. ನಕ್ಷೆ ಕಲಿ-ದಾರಿ ತಿಳಿ

13. ಅದ್ಭುತ ಯಂತ್ರ-ನಮ್ಮ ದೇಹ

14. ಸಂಚಾರ ನಿಯಮಗಳು

15. ಸಾರಿಗೆ ಮತ್ತು ಸಂಪರ್ಕ

16. ಬದಲಾಗುತ್ತಿರುವ ಕುಟುಂಬಗಳು

17. ಮನೆಯೇ ಮೊದಲ ಪಾಠಶಾಲೆ

18. ಪ್ರತಿಯೊಬ್ಬರೂ ವಿಶಿಷ್ಟ

19. ವೃತ್ತಿ ವಿಶೇಷ

20. ಹಬ್ಬ-ಹರುಷ

21. ಖೋ......

ಭಾರತದ ನೋಟುಗಳ ವಿಶೇಷತೆ

ಪ್ರಸ್ತುತ ಭಾರತದಲ್ಲಿ ಚಲಾವಣೆಯಲ್ಲಿರುವ ಎಲ್ಲ ರೂಪಾಯಿ ನೋಟುಗಳ ಚಿತ್ರ ಸಹಿತ ಸಂಪೂರ್ಣ ಮಾಹಿತಿ..







5ನೇ ತರಗತಿ ಕನ್ನಡ ಸಂವೇದ ಇ-ಕ್ಲಾಸ್ 2021-22

          ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ಕನ್ನಡ ವಿಡಿಯೋ ಪಾಠಗಳು..

 ಗದ್ಯಭಾಗ

1. ಒಟ್ಟಿಗೆ ಬಾಳುವ ಆನಂದ

2. ನದಿಯ ಅಳಲು(ಭಾಗ-1)

    ನದಿಯ ಅಳಲು(ಭಾಗ-1)

3. ನಮ್ಮ ಮಾತು ಕೇಳಿ

4. ಸುಳ್ಳು ಹೇಳಬಾರದು(ಭಾಗ-1)

     ಸುಳ್ಳು ಹೇಳಬಾರದು(ಭಾಗ-2)

5. ಪಂಜರಶಾಲೆ(ಭಾಗ-1)

    ಪಂಜರಶಾಲೆ(ಭಾಗ-2)

6. ನಾನು ಮತ್ತು ಹುಂಚಿಮರ(ಭಾಗ-1)

   ನಾನು ಮತ್ತು ಹುಂಚಿಮರ(ಭಾಗ-2)

7. ಮಲ್ಲಜ್ಜಿಯ ಮಳಿಗೆ(ಭಾಗ-1)

    ಮಲ್ಲಜ್ಜಿಯ ಮಳಿಗೆ(ಭಾಗ-2)

8. ಧೀರ ಸೇನಾನಿ

9. ಸಂಗೊಳ್ಳಿ ರಾಯಣ್ಣ(ಭಾಗ-1)

    ಸಂಗೊಳ್ಳಿ ರಾಯಣ್ಣ(ಭಾಗ-2)

ಪದ್ಯಭಾಗ

1. ಹುತ್ತರಿಯ ಹಾಡು(ಭಾಗ-1)

    ಹುತ್ತರಿಯ ಹಾಡು(ಭಾಗ-2)

2. ಸ್ವಾತಂತ್ರ್ಯದ ಹಣತೆ

3. ವಚನಗಳು

4. ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ

5. ಕರಡಿ ಕುಣಿತ(ಭಾಗ-1)

    ಕರಡಿ ಕುಣಿತ(ಭಾಗ-2)

6. ಬೇವು ಬೆಲ್ಲದೊಳಿಡಲೇನು ಫಲ

7. ಮಗುವಿನ ಮೊರೆ

8. ಮೂಡಲ ಮನೆ

9. ಭುವನೇಶ್ವರಿ(ಭಾಗ-1)

    ಭುವನೇಶ್ವರಿ(ಭಾಗ-2)

10ನೇ ತರಗತಿ ಕನ್ನಡ ಸಂವೇದ ಇ-ಕ್ಲಾಸ್ 2021-22

     ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 10ನೇ ತರಗತಿ ಕನ್ನಡ ವಿಡಿಯೋ ಪಾಠಗಳು..

ಗದ್ಯಭಾಗ

1. ಯುದ್ಧ(ಭಾಗ-1)

    ಯುದ್ಧ(ಭಾಗ-2)

    ಯುದ್ಧ(ಭಾಗ-3)

2. ಶಬರಿ(ಭಾಗ-1)

    ಶಬರಿ(ಭಾಗ-2)

    ಶಬರಿ(ಭಾಗ-3)

3. ಲಂಡನ್ ನಗರ(ಭಾಗ-1)

    ಲಂಡನ್ ನಗರ(ಭಾಗ-2)

    ಲಂಡನ್ ನಗರ(ಭಾಗ-3)

4. ಭಾಗ್ಯಶಿಲ್ಪಿಗಳು(ಭಾಗ-1)

    ಭಾಗ್ಯಶಿಲ್ಪಿಗಳು(ಭಾಗ-2)

    ಭಾಗ್ಯಶಿಲ್ಪಿಗಳು(ಭಾಗ-3)

5. ಎದೆಗೆ ಬಿದ್ದ ಅಕ್ಷರ(ಭಾಗ-1)

    ಎದೆಗೆ ಬಿದ್ದ ಅಕ್ಷರ(ಭಾಗ-2)

    ಎದೆಗೆ ಬಿದ್ದ ಅಕ್ಷರ(ಭಾಗ-3)

6. ವ್ಯಾಘ್ರಗೀತೆ(ಭಾಗ-1)

    ವ್ಯಾಘ್ರಗೀತೆ(ಭಾಗ-2)

    ವ್ಯಾಘ್ರಗೀತೆ(ಭಾಗ-3)

7. ವೃಕ್ಷಸಾಕ್ಷಿ(ಭಾಗ-1)

    ವೃಕ್ಷಸಾಕ್ಷಿ(ಭಾಗ-2)

    ವೃಕ್ಷಸಾಕ್ಷಿ(ಭಾಗ-3)

8. ಸುಕುಮಾರ ಸ್ವಾಮಿಯ ಕತೆ 

ಪದ್ಯಭಾಗ

1. ಸಂಕಲ್ಪಗೀತೆ(ಭಾಗ-1)

    ಸಂಕಲ್ಪಗೀತೆ(ಭಾಗ-2)

2. ಹಕ್ಕಿ ಹಾರುತಿದೆ ನೋಡಿದಿರಾ(ಭಾಗ-1)

     ಹಕ್ಕಿ ಹಾರುತಿದೆ ನೋಡಿದಿರಾ(ಭಾಗ-2)

3. ಹಲಗಲಿ ಬೇಡರು(ಭಾಗ-1)

    ಹಲಗಲಿ ಬೇಡರು(ಭಾಗ-2)

4. ಕೌರವೇಂದ್ರನ ಕೊಂದೆ ನೀನು(ಭಾಗ-1)

 ಕೌರವೇಂದ್ರನ ಕೊಂದೆ ನೀನು(ಭಾಗ-2)

ಕೌರವೇಂದ್ರನ ಕೊಂದೆ ನೀನು(ಭಾಗ-3)

5. ಹಸುರು(ಭಾಗ-1)

    ಹಸುರು(ಭಾಗ-2)

6. ಛಲಮನೆ ಮೆರೆವೆಂ(ಭಾಗ-1)

    ಛಲಮನೆ ಮೆರೆವೆಂ(ಭಾಗ-2)

7. ವೀರಲವ

8. ಕೆಮ್ಮನೆ ಮೀಸೆವೊತ್ತನೇ

6ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

         ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ಸಮಾಜ ವಿಜ್ಞಾನ ವಿಡಿಯೋ ಪಾಠಗಳು.. 

ಇತಿಹಾಸ

01. ಇತಿಹಾಸ ಪರಿಚಯ

02. ನಮ್ಮ ಕರ್ನಾಟಕ(ಭಾಗ-1)

      ನಮ್ಮ ಕರ್ನಾಟಕ(ಭಾಗ-2)

      ನಮ್ಮ ಕರ್ನಾಟಕ(ಭಾಗ-3)

      ನಮ್ಮ ಕರ್ನಾಟಕ(ಭಾಗ-4)

      ನಮ್ಮ ಕರ್ನಾಟಕ(ಭಾಗ-5)

      ನಮ್ಮ ಕರ್ನಾಟಕ(ಭಾಗ-6)

03. ಆರಂಭಿಕ ಸಮಾಜ

04. ಪ್ರಾಚೀನ ನಾಗರಿಕತೆಗಳು(ಭಾಗ-1)

     ಪ್ರಾಚೀನ ನಾಗರಿಕತೆಗಳು(ಭಾಗ-2)

05. ವೇದ ಕಾಲದ ಸಂಸ್ಕೃತಿ

06. ಕ್ರೈಸ್ತಧರ್ಮ ಮತ್ತು ಇಸ್ಲಾಂ ಧರ್ಮ

07. ಹೊಸ ಧರ್ಮಗಳ ಉದಯ

08. ಉತ್ತರ ಭಾರತದ ಪ್ರಮುಖ ರಾಜಮನೆತನಗಳು

ಪೌರನೀತಿ

09. ಪೌರತ್ವ

10. ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ

ಭೂಗೋಳ ವಿಜ್ಞಾನ

11. ಗ್ಲೋಬ್ & ನಕಾಶೆಗಳು(ಭಾಗ-1)

      ಗ್ಲೋಬ್ & ನಕಾಶೆಗಳು(ಭಾಗ-2)

12. ಏಷ್ಯ-ವೈಪರೀತ್ಯಗಳ ಖಂಡ

7ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 7ನೇ ತರಗತಿ ಸಮಾಜ ವಿಜ್ಞಾನ  ವಿಡಿಯೋ ಪಾಠಗಳು..

ಇತಿಹಾಸ

1. ವಿಜಯನಗರದ ಅರಸು ಮನೆತನಗಳು (ಭಾಗ-1)

    ವಿಜಯನಗರದ ಅರಸು ಮನೆತನಗಳು (ಭಾಗ-2)

2. ಬಹುಮನಿ ಆದಿಲ್ ಷಾಹಿಗಳು(ಭಾಗ-1)

    ಬಹುಮನಿ ಆದಿಲ್ ಷಾಹಿಗಳು(ಭಾಗ-1)

3. ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ(ಭಾಗ-1)

ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ(ಭಾಗ-2)

4. ನಾಯಕರು, ಪಾಳೆಗಾರರು ಮತ್ತು ನಾಡ ಪ್ರಭುಗಳು

5. ಮೈಸೂರು ಒಡೆಯರು(ಭಾಗ-1)

     ಮೈಸೂರು ಒಡೆಯರು(ಭಾಗ-2)

6. ದಿಲ್ಲಿಯ ಸುಲ್ತಾನರು

7. ಮೊಗಲರು

8. ಮರಾಠರು

ಪೌರನೀತಿ

9. ನಮ್ಮ ಸಂವಿಧಾನ

10. ಮೂಲಭೂತ ಹಕ್ಕುಗಳು & ಕರ್ತವ್ಯಗಳು

11. ರಾಜ್ಯ ನಿರ್ದೇಶಕ ತತ್ವಗಳು

ಭೂಗೋಳ ವಿಜ್ಞಾನ

12. ಉತ್ತರ ಅಮೇರಿಕ-ಪ್ರೈರಿಸ್ ಗಳ ನಾಡು(ಭಾಗ-1)

    ಉತ್ತರ ಅಮೇರಿಕ-ಪ್ರೈರಿಸ್ ಗಳ ನಾಡು(ಭಾಗ-2)

13. ದಕ್ಷಿಣ ಅಮೇರಿಕ-ಆಂಡಿಸಗಳ ನಾಡು

8ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

    ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 8ನೇ ತರಗತಿ ಸಮಾಜ ವಿಜ್ಞಾನ 2 ಭಾಗಗಳ ವಿಡಿಯೋ ಪಾಠಗಳು..

ಇತಿಹಾಸ

1. ಆಧಾರಗಳು

2. ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ

3. ಭಾರತದ ಪ್ರಾಚೀನ ನಾಗರಿಕತೆಗಳು

4. ಜಗತ್ತಿನ ಪ್ರಾಚೀನ ನಾಗರಿಕತೆಗಳು

5. ಗ್ರೀಕ್, ರೋಮನ್ ಹಾಗೂ ಅಮೆರಿಕದ ನಾಗರಿಕತೆ

6. ಜೈನ ಮತ್ತು ಬೌದ್ಧ ಧರ್ಮಗಳ ಉದಯ

7. ಮೌರ್ಯರು ಮತ್ತು ಕುಶಾಣರು

8. ಗುಪ್ತರು ಮತ್ತು ವರ್ಧನರು

9. ದಕ್ಷಿಣ ಭಾರತ - ಶಾತವಾಹನರು, ಕದಂಬರು ಮತ್ತು ಗಂಗರು

10. ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು

11. ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು

ರಾಜ್ಯಶಾಸ್ತ್ರ

1. ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆ

2. ಸಾರ್ವಜನಿಕ ಆಡಳಿತ

3. ಮಾನವ ಹಕ್ಕುಗಳು

4. ಸ್ಥಳೀಯ ಸರ್ಕಾರಗಳು

ಸಮಾಜಶಾಸ್ತ್ರ

1. ಸಮಾಜಶಾಸ್ತ್ರದ ಪರಿಚಯ

2. ಸಂಸ್ಕೃತಿ

3. ಸಾಮಾಜಿಕ ಸಂಸ್ಥೆಗಳು

4. ಸಮಾಜದ ಪ್ರಕಾರಗಳು

ಭೂಗೋಳ ವಿಜ್ಞಾನ

1. ಭೂಮಿ-ನಮ್ಮ ಜೀವಂತ ಗ್ರಹ

2. ಶಿಲಾಗೋಳ(ಭಾಗ-1)

    ಶಿಲಾಗೋಳ(ಭಾಗ-2)

    ಶಿಲಾಗೋಳ(ಭಾಗ-3)

3. ವಾಯುಗೋಳ(ಭಾಗ-1)

4. ಜಲಗೋಳ

5. ಜೀವಗೋಳ

ಅರ್ಥಶಾಸ್ತ್ರ

1. ಅರ್ಥಶಾಸ್ತ್ರದ ಪರಿಚಯ

2. ಅರ್ಥ ವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು(ಭಾಗ-1)

ಅರ್ಥ ವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು(ಭಾಗ-2)

3. ರಾಷ್ಟ್ರೀಯ ಆದಾಯ ಮತ್ತು ಭಾರತದ ಅರ್ಥ ವ್ಯವಸ್ಥೆಯ ವಿವಿಧ ವಲಯಗಳು

4. ಸರ್ಕಾರ ಮತ್ತು ಅರ್ಥವ್ಯವಸ್ಥೆ

ವ್ಯವಹಾರ ಅಧ್ಯಯನ

1. ವಾಣಿಜ್ಯ ಅಧ್ಯಯನದ ಘಟಕಗಳು

2. ವ್ಯವಹಾರ ಮತ್ತು ಕೈಗಾರಿಕೆ

3. ವಿವಿಧ ವ್ಯವಹಾರ ಸಂಘಟನೆಗಳು

GPT (6-8) ವೃಂದ & ನೇಮಕಾತಿ ನಿಯಮಗಳು-2021

 *GPT ಸಿ & ಆರ್ ಪ್ರಮುಖ ಅಂಶಗಳು* 

"ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 8" ತರಗತಿಗಳು ವರ್ಗದ ಹುದ್ದೆಗಳ ಕ್ರಮ ಸಂಖ್ಯೆ 66ಎ ಗೆ ಕೆಳಕಂಡಂತೆ ಸೇರ್ಪಡೆ ಮಾಡಿದೆ.

1)ಸೇವಾ ನಿರತ ಶಿಕ್ಷಕರಿಗೆ 33% ಮುಂಬಡ್ತಿ (ಈ ಮೊದಲು 25%ಇತ್ತು

2)ಬಡ್ತಿಗೂ-ನೇರ ನೇಮಕಾತಿ ಗೂ ಒಂದೇ ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ಮಾನದಂಡ ನಿಗದಿಯಾಗಿದೆ

3)ಬಡ್ತಿಗೆ TET ಪರೀಕ್ಷೆ ಕಡ್ಡಾಯ.

4)ಇಂಜನೀಯರಿಂಗ್ ವಿದ್ಯಾರ್ಥಿಗಳು BED &TET ಮುಗಿಸಿಕೊಂಡು ವಿಜ್ಞಾನ ಶಿಕ್ಷಕರಾಗಲು ಅವಕಾಶ ನೀಡಲಾಗಿದೆ.

5)ನೇಮಕಾತಿಗೆ ವೇಟೇಜ್ ಅಂಕಗಳನ್ನು ಈ ಕೆಳಗಿನಂತೆ ಮಾಡಲಾಗುವುದು.

CET 50%T,         TET 20%

Degree 20%,.    DEd./B.Ed.-10%

CLICK & DOWNLOAD GAZETTE  IN PDF

Popular Post