Menu

Home ನಲಿಕಲಿ About ☰ Menu


 

🔍

ಸಾಮ್ಯತೆ | ANALOGY

              ಸಾಮ್ಯತೆ ಎಂದರೆ ‘ಸಂಬಂಧಿಸಿದ’ ಎಂದು ಅರ್ಥ. ಈ ವಿಧದ ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ನಾಲ್ಕು ಪದಗಳನ್ನು ಕಾಣುತ್ತೇವೆ. ಮೊದಲ ಎರಡು ಪದಗಳಿಗೆ ಒಂದೇ ರೀತಿಯ ಸಂಬಂಧವಿರುತ್ತದೆ. ಅದೇ ರೀತಿಯ ಸಂಬಂಧವು ನಂತರದ ಎರಡು ಪದಗಳಿಗೂ ಕಂಡುಬರುತ್ತದೆ. ಆ ಸಂಬಂಧವನ್ನು ಬಳಸಿಕೊಂಡು ಯಾವ ಪದವನ್ನು ಪ್ರಶ್ನೆಯಲ್ಲಿ ಬಿಟ್ಟಿರುತ್ತಾರೆ. ಅದನ್ನು ಕೊಟ್ಟಿರುವ 4 ಉತ್ತರಗಳಿಂದ ಸರಿಯಾದ ಸಂಬಂಧ ಹೊಂದಿರುವ ಒಂದು ಪದವನ್ನು  ಆರಿಸಬೇಕು.
 
ಸಾಮ್ಯತೆಯ 3 ವಿಧಗಳು
I. ಪದ ಸಾಮ್ಯತೆ
II. ಸಂಖ್ಯಾ ಸಾಮ್ಯತೆ
III. ಅಕ್ಷರ ಸಾಮ್ಯತೆ

I. ಪದ ಸಾಮ್ಯತೆ : 
                ಸಾಮಾನ್ಯವಾಗಿ ಮೊದಲು ಎರಡು ಪದಗಳಿಗೆ ಒಂದು ರೀತಿಯ ಸಂಬಂಧವಿರುತ್ತದೆ. ಅದೇ ಸಂಬಂಧದ ಆಧಾರದ ಮೇಲೆ ಮೂರನೇ ಪದಕ್ಕೆ ಸರಿಹೊಂದುವ  ನಾಲ್ಕನೆಯ  ಪದವನ್ನು ಕಂಡು ಹಿಡಿಯಬೇಕು.

ಪದ ಸಾಮ್ಯತೆಗೆ ಸಂಬಂಧಿಸಿದ 20 ಪ್ರಶ್ನೆಗಳು 

1) ಭಾರತ : ನವದೆಹಲಿ :: ಕರ್ನಾಟಕ : .........
    a) ಮಂಗಳೂರು
    b) ಬೆಂಗಳೂರು
    c) ಧಾರವಾಡ 
    d) ಮೈಸೂರು

2) ಅಮೇರಿಕಾ : ಡಾಲರ್ :: ಭಾರತ : ........‌.
    a) ಪೌಂಡ್
    b) ರಿಯಲ್
    c) ರುಪಾಯಿ
    d) ಟಾಕಾ

3) ಅಂತರ : ಕಿಲೋಮೀಟರ್ :: ಕಾಲ : .......
    a) ಗಂಟೆ
    b) ಲೀಟರ್
    c) ಕಿಲೋಗ್ರಾಂ
    d) ಮೀಟರ್

4) ಲೇಖಕ : ಪುಸ್ತಕ :: ನಟ : .........‌..
    a)  ನಾಯಕ
    b) ಸಿನಿಮಾ
    c) ನಟಿಸುವುದು
    d) ಗ್ರಂಥ

5) ಶಿಕ್ಷಕ : ಪಾಠಶಾಲೆ :: ವೈದ್ಯ : .......‌‌‌.....     
     a) ಕಛೇರಿ
     b) ಹೊಲ
     c) ಆಸ್ಪತ್ರೆ
     d) ಕಾಲೇಜು

6) ಶಿಲ್ಪಿ : ವಿಗ್ರಹ :: ಕವಿ : .............
      a) ಚಿತ್ರ
      b) ಕವಿತೆ
      c) ಪುಸ್ತಕ
      d) ಲೇಖನಿ

7) ಸೋಮವಾರ : ಮಂಗಳವಾರ :: ಜನವರಿ : .........
    a)  ಎಪ್ರಿಲ್
    b) ಮೇ
    c) ಜೂನ್
    d) ಫೆಬ್ರವರಿ

8) ಮಾನವ : ಸಸ್ತನಿ :: ಹಾವು : ..............
    a)  ಪ್ರಾಣಿ
    b) ಪಕ್ಷಿ
    c) ಕೀಟ
    d) ಸರಿಸೃಪ

9) ಮಗ : ಮಗಳು :: ಅಳಿಯ : ..............
    a)  ಮಾವ
    b) ಅತ್ತೆ
    c) ತಾಯಿ
    d) ಸೊಸೆ

10) ಗೋಡೆ : ಇಟ್ಟಿಗೆ :: ಪುಸ್ತಕ : ................
     a)  ಕಾಗದ
     b) ಶಿಕ್ಷಣ
     c) ಪೆನ್ನು
     d) ಕಾವ್ಯ

11) ಕಾರ್ಯ : ಕಜ್ಜ : : ಭಕ್ತಿ : .................
      a) ಬಕುತ
      b) ಬಕುತಿ
      c) ಭಕುತಿ
      d) ಭಕ್ತಿ 

12) ನೃಗ್ರೋಧ : ಆಲದ ಮರ : : ಉಡುರಾಜ : .....................
      a) ಗುರು
      b) ಸೂರ್ಯ
      c) ಚಂದ್ರ
      d) ಗ್ಯಾನಿಮೆಡ್

13) ಭಕ್ತಿಯುಳ್ಳ : ಆಗಮ ಸಂದಿ : : ಕಳೆಗುಂದು : .................
      a) ಆಗಮ ಸಂಧಿ   
      b) ಗುಣ ಸಂಧಿ 
      c) ಸವರ್ಣ ದೀರ್ಘ ಸಂಧಿ
      d) ಆದೇಶ ಸಂಧಿ

14) ಧರ್ಮ : ಅಧರ್ಮ : : ಬಡವ : ..............
      a) ಬಡವಿ
      b) ಬಡತನ
      c) ಶ್ರೀಮಂತ 
      d) ಬಡವ

15) ಕೌಟಿಲ್ಯ : ಅರ್ಥಶಾಸ್ತ್ರ:: ಕಲ್ಹಣ : .............
      a) ಮುದ್ರಾರಾಕ್ಷಸ 
      b) ಹರ್ಷಚರಿತ
      c) ರಾಜ ತರಂಗಿಣಿ
      d) ಗಾಥಾಸಪ್ತಶತಿ 

16) ಹರಪ್ಪ : ಸಿಂಧೂ ನದಿ ::  ಈಜಿಪ್ಟ್ : ..........
      a) ಗಂಗಾನದಿ
      b) ನೈಲ್ ನದಿ
      c) ಸರಸ್ವತಿ ನದಿ
      d) ಯುಫ್ರೆಟಿಸ್ ಮತ್ತು ಟೈಗ್ರೀಸ್ ನದಿಗಳು

17) ಮಹಾವೀರ : ವರ್ಧಮಾನ :: ಗೌತಮ ಬುದ್ಧ : .............
      a) ಬುದ್ಧ 
      b) ಅಶ್ವಸೇನ
      c) ಶುದ್ಧೋದನ
      d) ಸಿದ್ಧಾರ್ಥ 
 
18) ಗ್ರಾನೈಟ್ : ಅಂತಸ್ಸರಣ ಶಿಲೆ:: ಬಸಾಲ್ಟ್ : .............
      a) ಕಣಶಿಲೆ
      b) ರೂಪಾಂತರ ಶಿಲೆ 
      c) ಅಂತಸ್ಸರಣ ಶಿಲೆ
      d) ಬಹಿಸ್ಸರಣ ಶಿಲೆ
 
19) ವಿಲ್ಲಿ ವಿಲ್ಲೀಸ್ : ಆಸ್ಟ್ರೇಲಿಯ :: ಭಾರತ : .............
      a) ಹರಿಕೇನ್
      b) ಸೈಕ್ಲೋನ್ 
      c) ಟೈಫೂನ್
      d) ವಿರ್ಲ್ ಪೂಲ್ 

20) ಇತಿಹಾಸ : ಹೆರೊಡೋಟಸ್ :: ರಾಜ್ಯಶಾಸ್ತ್ರ : ............
      a) ಆಡ್ಯಂ ಸ್ಮಿತ್ 
      b) ಪ್ಲೇಟೋ 
      c) ಅರಿಸ್ಟಾಟಲ್ 
      d) ಆಗಸ್ಟ್ ಕಾಮ್ಟೆ

                  >>ಮುಂದುವರೆಯುವುದು>> 

   ಈ ಮೇಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು  Comment ಮಾಡಿ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post