Menu

Home ನಲಿಕಲಿ About ☰ Menu


 

🔍

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತಿನಲ್ಲಿ ನೋಂದಣಿಯಾದ ನಿಮ್ಮ ಆಸ್ತಿಯ ದಾಖಲೆಯನ್ನು ಮೊಬೈಲ್ ನಲ್ಲೇ ಪಡೆಯಿರಿ..

ಇ-ಸ್ವತ್ತು (e-swathu)
          ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಮೂನೆ 9 ಮತ್ತು 11ಬಿ ಅನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸಲಾಗುವುದು.

ಇ-ಸ್ವತ್ತಿನಲ್ಲಿ ನೋಂದಣಿ ಮಾಡಲು ಬೇಕಾದ ದಾಖಲೆಗಳು :
         ಇ-ಸ್ವತ್ತು ನಲ್ಲಿ ಆಸ್ತಿ ನೋಂದಣಿ ಮಾಡಿಸಲು ಮಾಲೀಕನ ವಿಳಾಸದ ಗುರುತಿನ ಪತ್ರ ಇರಬೇಕು. ಅರ್ಜಿದಾರರ ಫೋಟೋ ಇರಬೇಕು. ಆಸ್ತಿನ ನಿವೇಶನದ ನಕ್ಷೆ ಇರಬೇಕು. ಇರಬೇಕು. ಸೇಲ್ ಡೀಡಿ ಕಾಪಿ ಅಂದರೆ ಆಸ್ತಿಯ ಕ್ರಯ ಪತ್ರ ಇರಬೇಕು. ಇರಬೇಕು. ಕಟ್ಟಡ ಇದ್ದರೆ ಕಟ್ಟಡ ತೆರಿಗೆ ರಸೀದಿ ಇರಬೇಕು  ಅಥವಾ ವಿದ್ಯುತ್ ಬಿಲ್ ಇರಬೇಕು. ಆಸ್ತಿಯ ಮಾಲಿಕತ್ವ ದಾಖಲೆಗಳು ಹೊಂದಿರಬೇಕು.  ಚೆಕ್ಕು ಬಂದಿ ವಿವರ ಹೊಂದಿರಬೇಕು.  ಅರ್ಜಿದಾರರ ಆಧಾರ್ ಕಾರ್ಡ್ ಇರಬೇಕು.

ಇ-ಸ್ವತ್ತಿನಲ್ಲಿ  ಏಕೆ ಆಸ್ತಿ ನೋಂದಣಿ ಮಾಡಿಸಬೇಕು?
           ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಇ-ಸ್ವತ್ತು ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಏಕೆಂದರೆ ಆಸ್ತಿ ಮಾರುವಾಗ ಅಥವಾ ಖರೀದಿಸುವಾಗ ಇ-ಸ್ವತ್ತು ಕಡ್ಡಾಯವಾಗಿರುತ್ತದೆ.
          ಸಾರ್ವಜನಿಕರು ನೋಂದಣಿ ಮಾಡಿಸಿದ್ದರೆ ಆನ್ಲೈನ್ ಮೂಲಕವೇ ತಮ್ಮ ಆಸ್ತಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಮೊಬೈಲ್ ನಲ್ಲೇ ಇ-ಸ್ವತ್ತಿನಲ್ಲಿ ಆಸ್ತಿ ನೋಂದಣಿಯಾಗಿರುವುದನ್ನು ಚೆಕ್ ಮಾಡುವುದು ಹೇಗೆ?
                ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಇ ಸ್ವತ್ತು ಅಡಿಯಲ್ಲಿ ನೋಂದಣಿ ಮಾಡಿದ ಆಸ್ತಿಗಳನ್ನು ಚೆಕ್ ಮಾಡಲು ಈ


ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಸ್ತಿಗಳ ಶೋಧನೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸಾರ್ವಜನಿಕರು Form 11B ಆಯ್ಕೆ ಮಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು, ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. All ಆಯ್ಕೆ ಮಾಡಿಕೊಳ್ಳಬೇಕು. ನಂತರ  Search ಮೇಲೆ ಕ್ಲಿಕ್ ಮಾಡಬೇಕು. ಆಗ ಆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ ಸ್ವತ್ತಿನಡಿ ನೋಂದಣಿ ಮಾಡಿಸಿಕೊಂಡ ಎಲ್ಲಾ ಸಾರ್ವಜನಿಕರ ಪ್ರಾಪರ್ಟಿ ಐಡಿ, ಆಸ್ತಿ ಮಾಲೀಕರ ಹೆಸರು, ಸರ್ವೆ ನಂಬರ್, ಹಾಗೂ ಫಾರಂ ನಂಬರ್ 11 ಬಿ ಆಸ್ತಿಗಳ ಪಟ್ಟಿ ಕಾಣುತ್ತದೆ. ಅಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬೇಕು.

ಫಾರ್ಮ 11 ಬಿ ಪ್ರತಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
        ಸಾರ್ವಜನಿಕರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ ಸ್ವತ್ತು ಅಡಿಯಲ್ಲಿ ನೋಂದಣಿಯಾದ ಆಸ್ತಿಯ 11 ಬಿ ಪ್ರಮಾಣ ಪತ್ರವನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಲು  ಈ


ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಆಗುವ ಇ ಸ್ವತ್ತು ಪೇಜ್ ನಲ್ಲಿ ಎರಡೂ ಕಡೆ  Form 11 B ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Printed Forms ಆಯ್ಕೆ ಮಾಡಿಕೊಂಡು ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮ್ 11 ಬಿ ದಾಖಲೆಗಳ ಪಟ್ಟಿ ಕಾಣುತ್ತದೆ. ನಿಮ್ಮ ಹೆಸರಿನ ಹಿಂದುಗಡೆಯಿರುವ ಡಾಕುಮೆಂಟ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮ್ 11 ಬಿ ಪೇಜ್ ಡೌನ್ಲೋಡ್ ಆಗುತ್ತದೆ.

ಏನಿದು ಇ-ಸ್ವತು?
                 2021 ರಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಆನ್‌ಲೈನ್ ಪೋರ್ಟಲ್ ಆಗಿದೆ. ಇದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿರುವ ಆಸ್ತಿಗಳ ಮಾಲೀಕತ್ವದ ವಿವರಗಳನ್ನು ಪಡೆಯಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಈ ಪೋರ್ಟಲ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತದೆ. ಇ ಸ್ವಾತು ಆನ್‌ಲೈನ್ ಪೋರ್ಟಲ್‌ನಲ್ಲಿ, ನೀವು ಫಾರ್ಮ್-9 ಮತ್ತು ಫಾರ್ಮ್-11ಬಿ ಎಂಬ ಎರಡು ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಇ ಸ್ವತ್ತು ಕರ್ನಾಟಕವು ಭೂಮಿ ಮತ್ತು ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ನಕಲಿಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಇದು ಅನಧಿಕೃತ ಪ್ಲಾಟ್‌ಗಳ ನೋಂದಣಿಯನ್ನು ಸಹ ನಿಯಂತ್ರಿಸುತ್ತದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post