Home ವಿವೇಕ ಜ್ಯೋತಿ ನಲಿಕಲಿ About Me ☰ Menu

ನನ್ನ ದೇಶ ನನ್ನ ಜನ - 'ಚೆನ್ನವೀರ ಕಣವಿ'

'ನನ್ನ ದೇಶ ನನ್ನ ಜನ'
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ?

ಕೆಂಪು ನೆಲದ ಹಸಿರು ಬೆಳೆ
ಕಪ್ಪು ಬಣ್ಣ ಮೊಗದ ಕಳೆ
ಸೂರ್ಯ ಚಂದ್ರ ಚುಕ್ಕಿಗಳೆ
ನಮ್ಮ ಹಿರಿಯ ಒಕ್ಕಲು

ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು

ಪ್ರಾಚೀನವ ತಿಕ್ಕಿ ತೊಳೆ
ವರ್ತಮಾನ ಜೀವಕಳೆ
ಉಕ್ಕೇರಲಿ ಬಾಳ ಹೊಳೆ
ಆ ಭವಿಷ್ಯದೊಡಲಿಗೆ

ಮೈ ಕೊಡವಿದೆ ಮೂಕ ಜನ
ಕೈ ಹಿಡಿಯಿರಿ ನಾಕು ಚಣ
ಎದ್ದೇಳಲಿ ಎಲ್ಲ ಗುಣ
ಆ ಸಮೃದ್ಧ ಬಾಳಿಗೆ
    ----------೦----------

ರಚನೆ : ಚೆನ್ನವೀರ ಕಣವಿ

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.